Love Proposal: ನಿಮ್ ಸ್ನೇಹಿತ್ರೇ ನಿಮ್ಗೆ ಲವ್ ಪ್ರಪೋಸ್ ಮಾಡಿದ್ರೆ ಅವ್ರಿಗೆ ಬೇಜಾರಾಗದೇ ಇರೊ ರೀತಿ ರಿಜೆಕ್ಟ್ ಮಾಡಿ; ಹೇಗ್ ಗೊತ್ತಾ?

Love Proposal: ಪ್ರತಿಯೊಬ್ಬರಿಗೂ ಕೂಡ ಪ್ರೀತಿಸುವ ಮನಸಿರುತ್ತದೆ ಆದರೆ ಆ ಪ್ರೀತಿಸುವ ಮನಸ್ಸುಗಳಿಗೆ ಸರಿಯಾದ ಮನಸುಗಳು ಸಿಗಬೇಕು ಅನ್ನೋ ಹಂಬಲ ಕೂಡ ಇರುತ್ತದೆ. ಯಾರೇ ಆಗಲಿ ಮತ್ತೊಬ್ರು ಲವ್ ಪ್ರಪೋಸ್ ಮಾಡಿದಾಗ ಅವರು ಇಷ್ಟ ಆಗಿದ್ದರೆ ಮಾತ್ರ ಅದನ್ನು ಒಪ್ಪಿಕೊಳ್ಳುತ್ತಾರೆ. ಇಲ್ಲದೆ ಹೋದಲ್ಲಿ ಅದನ್ನ ಅವರು ಒಪ್ಪಿಕೊಳ್ಳುವುದಿಲ್ಲ ಆದರೆ ಆ ರಿಜೆಕ್ಷನ್ ಅನ್ನೋದು ಅವರ ಮನಸ್ಸಿಗೆ ಬೇಸರ ಉಂಟು ಮಾಡಿಸುತ್ತೆ. ಹೀಗಾಗಿ ಇವತ್ತಿನ ಲೇಖನದಲ್ಲಿ ನಾವು ಯಾವ ರೀತಿಯಲ್ಲಿ ಬೇರೆಯವರು ಲವ್ ಪ್ರಪೋಸ್ ಮಾಡಿ ಅದು ನಿಮಗೆ ಇಷ್ಟವಾದಲ್ಲಿ ಅವರಿಗೆ ಬೇಸರ ಆಗದೆ ಇರೋ ರೀತಿಯಲ್ಲಿ ರಿಜೆಕ್ಟ್ ಮಾಡುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಬೇರೆಯವರಿಗೆ ಬೇಸರಾಗದಂತೆ ಲವ್ ಪ್ರಪೋಸ್ ಗೆ ನೋ ಅನ್ನುವುದು ಹೀಗೆ

ಯಾವುದೇ ಸಮಯದಲ್ಲಿ ಒಂದು ವೇಳೆ ನಿಮಗೆ ಅವರು ಪ್ರಪೋಸ್ ಮಾಡಿ ನಿಮಗೆ ಇಷ್ಟ ಆಗಿಲ್ಲದೇ ಹೋದಲ್ಲಿ ಅಡ್ಡಗೋಡಿಯ ಮೇಲೆ ದೀಪ ಇಟ್ಟಂತೆ ಅಥವಾ ಯಾವುದಾದರೂ ಸುಳ್ಳು ಕಾರಣವನ್ನು ಹೇಳಿ ಅದನ್ನು ರಿಜೆಕ್ಟ್ ಮಾಡೋದಕ್ಕೆ ಹೋಗ್ಬೇಡಿ. ಪ್ರಾಮಾಣಿಕವಾಗಿ ಉತ್ತರ ನೀಡುವ ಮೂಲಕ ಅವರಿಗೂ ಕೂಡ ಅದನ್ನ ಅರ್ಥೈಸಿ. ಆಗ ನಿಮ್ಮ ರಿಜೆಕ್ಷನ್ ಅನ್ನು ಅವರು ಬೇಸರದ ರೂಪದಲ್ಲಿ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ ನೀವು ಸುಂದರವಾಗಿದ್ದೀರಿ ಆದರೆ ನಿಮ್ಮ ಸ್ನೇಹಿತನಾಗಿ ಇರಬಲ್ಲೆ ಲವ್ವರ್ ಆಗಿರೋದಕ್ಕೆ ಸಾಧ್ಯ ಇಲ್ಲ ಅನ್ನುವಂತಹ ಮಾತನ್ನ ಆದಷ್ಟು ಸೌಮ್ಯ ಸ್ವರದಲ್ಲಿ ಹೇಳಿ. ಅವರು ಇದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಸಾಕಷ್ಟು ಜನರು ರಿಜೆಕ್ಷನ್ ಮಾಡುವಾಗ ಸಾರಿ ಕ್ಷಮಿಸಿ ಅನ್ನುವ ರೀತಿಯಲ್ಲಿ ತಮ್ಮ ಮಾತಿಗೆ ಶುಗರ್ ಕೋಟೆಡ್ ಬಣ್ಣವನ್ನು ಬಳಿಯುವ ಪ್ರಯತ್ನವನ್ನು ಮಾಡುತ್ತಾರೆ ಇದು ಅವರಿಗೆ ಇಷ್ಟ ಆಗದೇ ಇರಬಹುದು. ಇದನ್ನ ಯಾವತ್ತೂ ಕೂಡ ಪ್ರಯತ್ನಿಸುವುದಕ್ಕೆ ಹೋಗಬೇಡಿ. ಏನೇ ಇದ್ರೂ ಅವರಿಗೆ ಅರ್ಥ ಆಗುವ ರೀತಿಯಲ್ಲಿ ನೇರವಾಗಿ ಹೇಳಿ.

ನಿಮ್ಮೊಂದಿಗೆ ಸಮಯ ಕಳೆಯುವುದಕ್ಕೆ ನನಗೆ ಇಷ್ಟ ಆದರೆ ಆ ಸಂಬಂಧ ಈ ರೀತಿ ಇರೋದು ಸರಿ ಹೊಂದುವುದಿಲ್ಲ ಎನ್ನುವುದನ್ನ ಅವರಿಗೆ ತಿಳಿಸಿ. ಎಲ್ಲಕ್ಕಿಂತ ಪ್ರಮುಖವಾಗಿ ಅವರು ನಿಮಗೆ ಪ್ರಪೋಸ್ ಮಾಡಿದಾಗ ಅದಕ್ಕೆ ರಿಪ್ಲೈ ನೀಡುವುದಕ್ಕೆ ಹೆಚ್ಚಿನ ಸಮಯ ಅವರನ್ನು ಕಾಯಿಸಬೇಡಿ. ಏನೇ ಇದ್ರೂ ಆದಷ್ಟು ಬೇಗವಾಗಿ ಅವರಿಗೆ ಅತ್ಯಂತ ಪ್ರಾಮಾಣಿಕ ಉತ್ತರವನ್ನು ನೀಡಿ. ಇನ್ನು ನೀವು ರಿಜೆಕ್ಷನ್ ಮಾಡಿರುವುದನ್ನು ಅವರು ಗೌರವಯುತವಾಗಿ ತೆಗೆದುಕೊಂಡಿದ್ದಾರೆ ಎನ್ನುವುದನ್ನ ಪ್ರಮುಖವಾಗಿ ಖಚಿತಪಡಿಸಿಕೊಳ್ಳಿ.

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಬೇಕು ಅಥವಾ ಜೀವನದಲ್ಲಿ ಸೆಟಲ್ ಆಗಬೇಕು ಎನ್ನುವಂತಹ ಆಸೆಗಳು ಇದ್ದರೆ ಅದರ ಬಗ್ಗೆ ಕೂಡ ತಿಳಿಸಿ ಹಾಗೂ ಅವರಿಗೆ ಕಾಯುವಂತಹ ತಾಳ್ಮೆ ಇದ್ರೆ ಹಾಗೂ ನೀವು ಆಯ್ಕೆ ಮಾಡಿರುವಂತಹ ಗುರಿಯ ಬಗ್ಗೆ ಸಮಾನವಾದ ಭಾವನೆ ಇದ್ದರೆ ಸ್ವಲ್ಪ ಸಮಯದ ನಂತರ ಅವರ ಜೊತೆ ಮತ್ತೆ ಒಂದಾಗುವಂತಹ ಪ್ರಸ್ತಾವನೆಯನ್ನು ಕೂಡ ನೀವು ಅವರ ಮುಂದೆ ಇಡಬಹುದಾಗಿದೆ. ಕೆಲವೊಂದು ಸಮಯದಲ್ಲಿ ಕುಟುಂಬದ ಜವಾಬ್ದಾರಿಗಳು ನಿಮಗೆ ಇದನ್ನೆಲ್ಲ ಯೋಚನೆ ಮಾಡೋದಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ನಿಮಗೆ ಪ್ರಪೋಸ್ ಮಾಡಿರುವವರಿಗೆ ಇದರ ಬಗ್ಗೆ ಕೂಡ ಅರ್ಥೈಸಿ ಹಾಗೂ ಗೌರವಯುತವಾಗಿ ಅವರಿಗೆ ನೋ ಎಂಬುದಾಗಿ ಹೇಳಿ.

Comments are closed.