Darshan: ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಆಗಿದ್ದೇನು ಗೊತ್ತೇ?

Darshan: ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರು ಎಂಬುದಾಗಿ ಕೇಳಿದರೆ ಪ್ರತಿಯೊಬ್ಬರೂ ಹೇಳುವಂತಹ ಒಂದೇ ಒಂದು ಉತ್ತರ ಅಂದ್ರೆ ಅದು ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್. ತೂಗುದೀಪ ಶ್ರೀನಿವಾಸ್ ಅವರಂತಹ ದೊಡ್ಡ ಮಟ್ಟದ ಕಲಾವಿದನ ಮಗನಾಗಿದ್ದರೂ ಕೂಡ ಚಿತ್ರರಂಗಕ್ಕೆ ಮಾತ್ರ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ದರ್ಶನ್ ಕಾಲಿಡ್ತಾರೆ. ಇವತ್ತಿಗೆ ಅವರನ್ನ ದೇವರು ಅಂತ ಕರೆಯುವಂತಹ ಲಕ್ಷಾಂತರ ಕೋಟ್ಯಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದಾರೆ.

ಆಸ್ಪತ್ರೆಗೆ ಸೇರಿಕೊಂಡ ಡಿ ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಹಿಂದೆ ಸಾಕಷ್ಟು ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾರ್ ಅಪ’ಘಾತದ ಕಾರಣದಿಂದಾಗಿ ಕೈಯಲ್ಲಿ ಸಾಕಷ್ಟು ಗಾಯಗಳನ್ನು ಮಾಡಿಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಈಗ ಅವರ ಕೈ ಅನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಎನ್ನುವುದಾಗಿ ವೈದ್ಯರು ಸಲಹೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇವತ್ತು ಕೈ ಶಸ್ತ್ರಚಿಗೆ ಒಳಗಾಗಿದ್ದಾರೆ. ಇದಕ್ಕಾಗಿ ಅವರು ಆಸ್ಪತ್ರೆಗೆ ಸೇರಿಕೊಂಡಿದ್ದಾರೆ ಎನ್ನುವಂತಹ ಸುದ್ದಿ ಅವರ ಅಭಿಮಾನಿ ಮೂಲಗಳಿಂದ ತಿಳಿದುಬಂದಿದೆ.

ಕೈಯಲ್ಲಿ ನೋವು ಇದ್ದರೂ ಕೂಡ ನೆನ್ನೆ ತಮ್ಮ ತಾಯಿ ಸಮಾನರಾಗಿರುವಂತಹ ನಟಿ ಹಾಗೂ ರಾಜಕೀಯ ನಾಯಕಿಯಾಗಿರುವಂತಹ ಸುಮಲತಾ ಅಂಬರೀಶ್ ರವರ ಪರವಾಗಿ ಬೆಂಬಲ ಸೂಚಿಸುವುದಕ್ಕೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನೆನ್ನೆ ಹೋಗಿದ್ದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನೋಡಿರಬಹುದಾಗಿದೆ. ಕೈಯಲ್ಲಿ ಅಷ್ಟೊಂದು ನೋ-ವನ್ನು ಇಟ್ಟುಕೊಂಡು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಪ್ರೀತಿ ಪಾತ್ರರಿಗಾಗಿ ಯಾವ ರೀತಿಯ ತ್ಯಾಗವನ್ನು ಮಾಡುತ್ತಿದ್ದಾರೆ ಅನ್ನೋದನ್ನ ನೀವು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ.

ಸದ್ಯದ ಮಟ್ಟಿಗೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಮುಂದಿನ ಸಿನಿಮಾ ಆಗಿರುವ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಡೆವಿಲ್, ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಹಾಗೂ ತರುಣ್ ಸುಧೀರ್ ರವರ ನಿರ್ದೇಶನದಲ್ಲಿ ವೀರ ಸಿಂಧೂರ ಲಕ್ಷ್ಮಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದಾದ ಮೇಲೆ ಒಂದರಂತೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಡಿ ಬಾಸ್ ಕಾಣಿಸಿಕೊಳ್ಳಲಿದ್ದು ಇದರ ಮುಂಚೆ ಈ ರೀತಿ ಗಾಯಗೊಂಡಿರುವುದು ನಿಜಕ್ಕೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಬೇಸರ ಉಂಟು ಮಾಡಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟ ಬೇಗನೆ ಗುಣಮುಖರಾಗಲಿ ಎನ್ನುವಂತಹ ಪ್ರಾರ್ಥನೆಯನ್ನು ದೇವರಲ್ಲಿ ಬೇಡಿಕೊಂಡಿದ್ದಾರೆ. ಆದರೆ ಈ ನಡುವೆ ತಮ್ಮ ಶಸ್ತ್ರ ಚಿಕಿತ್ಸೆ ನಡುವೆ ಕೂಡ ಸಿನಿಮಾ ಕಾರ್ಯಕ್ರಮಗಳಲ್ಲಿ ಹಾಗೂ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮಗಳಲ್ಲಿ ಡಿ ಬಾಸ್ ಭಾಗಿಯಾಗಿರುವುದು ಎಲ್ಲರ ಮನಸ್ಸನ್ನು ಗೆದ್ದಿದೆ.

Comments are closed.