Bike Tips: ಬೇಸಿಗೆ ಕಾಲದಲ್ಲಿ ಬೆವರಿನಿಂದ ಹೆಲ್ಮೆಟ್ ವಾಸನೆ ಬರ್ತಿದ್ಯಾ? ಹಾಗಾದ್ರೆ ಈ ಟ್ರಿಕ್ಸ್ ಬಳಸಿ; ಇಲ್ಲವಾದರೆ ಸಮಸ್ಯೆ ಗ್ಯಾರಂಟಿ!

Bike Tips: ನಮ್ಮ ಭಾರತ ದೇಶದಲ್ಲಿ ದ್ವಿಚಕ್ರವಾಹನಗಳನ್ನು ಓಡಾಡಿಸುವ ಸಂದರ್ಭದಲ್ಲಿ ಭಾರತೀಯರು ಹೆಚ್ಚಾಗಿ ಹೆಲ್ಮೆಟ್ ಗಳನ್ನು ಬಳಸಿಕೊಳ್ಳಲು ಹೋಗೋದಿಲ್ಲ. ಹೆಲ್ಮೆಟ್ ಇರೋದು ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದಕ್ಕೆ ಆದರೂ ಕೂಡ ನಮ್ಮ ಭಾರತೀಯರು ಹೆಲ್ಮೆಟ್ ಅನ್ನು ಬಳಸಿಕೊಳ್ಳಲು ಕೇವಲ ಪೊಲೀಸರ ಭಯದಿಂದಾಗಿ ಮಾತ್ರ. ಇನ್ನು ಈ ಬೇಸಿಗೆ ಕಾಲದ ಸಂದರ್ಭದಲ್ಲಿ ಹೆಲ್ಮೆಟ್ ಅನ್ನು ಕೆಲವೊಂದು ರೀತಿಯಲ್ಲಿ ನಿರ್ವಹಣೆ ಮಾಡುವುದು ಅತ್ಯಂತ ಅಗತ್ಯವಾಗಿರುತ್ತದೆ. ಹೀಗಾಗಿ ಇವತ್ತಿನ ಈ ಲೇಖನದ ಮೂಲಕ ಯಾವ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ನೀವು ಅವುಗಳ ಸರಿಯಾದ ಉಪಯೋಗವನ್ನು ಮಾಡಿಕೊಳ್ಳಬಹುದಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೆಲ್ಮೆಟ್ ನಿರ್ವಹಣೆ

ಹೆಲ್ಮೆಟ್ ಅನ್ನು ಸರಿಯಾದ ರೀತಿಯಲ್ಲಿ ಸ್ವಚ್ಛವಾಗಿ ಇರಿಸಿಕೊಳ್ಳದೆ ಹೋದಲ್ಲಿ ಇದರಿಂದಾಗಿ ನಿಮ್ಮ ತಲೆ ಕೂದಲು ಉದುರುವಿಕೆ ಹಾಗೂ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತದೆ.

  • ನಿಮ್ಮ ಹೆಲ್ಮೆಟ್ ಒಳಗೆ ಕೆಲವೊಂದು ಕಡೆಗಳಲ್ಲಿ ಗಾಳಿ ಓಡಾಡುವುದಕ್ಕಾಗಿ ರಂದ್ರಗಳನ್ನು ಇರಿಸಲಾಗಿರುತ್ತದೆ ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ. ಅದರಲ್ಲಿ ಇರುವಂತಹ ಕ್ರಿಮಿ ಕೀಟಗಳನ್ನು ನೀವು ಸ್ವಚ್ಛ ಮಾಡಿರಬೇಕಾಗಿರುತ್ತದೆ. ಇದರಿಂದಾಗಿ ಉತ್ತಮ ಗಾಳಿಯ ಓಡಾಟ ಆಗುವುದರಿಂದಾಗಿ ನಿಮಗೆ ಸೆಕೆ ಕೂಡ ಆಗುವುದಿಲ್ಲ ಹಾಗೂ ಗಾಳಿ ಕೂಡ ಚೆನ್ನಾಗಿ ಓಡಾಡುತ್ತದೆ.
  • ಈ ಬಾರಿ ಯಾವ ರೀತಿಯಲ್ಲಿ ಬೇಸಿಗೆಗಾಲ ಸೆಖೆಯನ್ನು ಹೊತ್ತು ತಂದಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ. ಹೆಲ್ಮೆಟ್ ನಲ್ಲಿ ಬೆವರು ಶೇಖರಣೆ ಯಾದರೆ ಅಲ್ಲಿ ಕೆಟ್ಟ ವಾಸನೆ ಬರುವುದು ಹಾಗೂ ಇನ್ನು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ನೀವು ಹೆಲ್ಮೆಟ್ ನಲ್ಲಿ ಎದುರಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕೂದಲನ್ನು ಮುಚ್ಚಿಕೊಳ್ಳುವುದಕ್ಕಾಗಿ ಕ್ಯಾಪ್ ಗಳನ್ನು ಬಳಸಿಕೊಳ್ಳುವುದು ಒಳ್ಳೆಯದು ಇಲ್ಲವಾದಲ್ಲಿ ಹೆಲ್ಮೆಟ್ ಗಳನ್ನು ಖರೀದಿಸುವ ಸಂದರ್ಭದಲ್ಲಿ Sweat Wicking ಹೆಲ್ಮೆಟ್ ಗಳನ್ನು ಬಳಸುವುದೇ ಉತ್ತಮ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ.
  • ಇನ್ನು ಸ್ವಚ್ಛಗೊಳಿಸುವುದರ ಬಗ್ಗೆ ಮಾತನಾಡುವುದಾದರೆ ಸಾಕಷ್ಟು ಬಾರಿ ನಾವು ಹೆಲ್ಮೆಟ್ ಧರಿಸಿ ಲಾಂಗ್ ರೈಡ್ ಹಾಗೂ ಪದೇಪದೇ ಪ್ರಯಾಣ ಮಾಡುತ್ತಲೇ ಇರುತ್ತೇವೆ ಹೀಗಾಗಿ ಅವುಗಳನ್ನು ಸ್ವಚ್ಛ ಮಾಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಹೀಗಾಗಿ ಬೆಚ್ಚಗಿನ ನೀರಿ ಸೋಪ್ ಅನ್ನು ಬಳಸಿ ಸ್ಪಂಜು ಅಥವಾ ಬಟ್ಟೆಯ ಮೂಲಕ ಹೆಲ್ಮೆಟ್ ಒಳ ಭಾಗವನ್ನು ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ. ಇದಕ್ಕಾಗಿ ಕೆಲವೊಂದು ಸ್ಪ್ರೇ ಹಾಗೂ ಕ್ಲೀನರ್ಗಳು ಕೂಡ ನಿಮಗೆ ಮಾರುಕಟ್ಟೆಯಲ್ಲಿ ದೊರಕುತ್ತದೆ. ಹೆಲ್ಮೆಟ್ ಏನು ನೀವು ಯಾವುದೇ ಕಾರಣಕ್ಕೂ ತೇವಾಂಶದ ಜೊತೆಗೆ ಧರಿಸುವುದಕ್ಕೆ ಹೋಗಬೇಡಿ.
  • ಸಾಮಾನ್ಯವಾಗಿ ಹೆಲ್ಮೆಟ್ ವಾಸನೆ ಬಂದಾಗ ಪರ್ಫ್ಯೂಮ್ ಹೊಡೆದು ಅದನ್ನು ನೀವು ಬಳಸ್ತೀರಿ ಆದರೆ ಅದು ಕೇವಲ ಒಂದು ಬಾರಿ ಬಳಸುವುದಕ್ಕೆ ಸೂಕ್ತ. ಪದೇ ಪದೇ ಬಳಸುವುದಕ್ಕಾಗಿ ನೀವು ಅದನ್ನು ಒಳಗಿನ ಭಾಗ ಕ್ಲೀನ್ ಮಾಡಿ ನಂತರ ಒಣಗಿಸುವ ಸಂದರ್ಭದಲ್ಲಿ ಪರ್ಫ್ಯೂಮ್ಸ್ ಪ್ರೇ ಹೊಡೆದರೆ ಅದು ವರ್ಕ್ ಔಟ್ ಆಗುತ್ತದೆ. ನೇರವಾಗಿ ಸೂರ್ಯನ ಬೆಳಕು ಹೆಲ್ಮೆಟ್ ಮೇಲೆ ಪದೇ ಪದೇ ಬೀಳುವುದರಿಂದ ಅದು ಹಾನಿಗೆ ಒಳಗಾಗುವುದು ಹೀಗಾಗಿ ನೀವು ಎಲ್ಲಾದರೂ ಬೈಕ್ ಪಾರ್ಕ್ ಮಾಡಿ ಹೆಲ್ಮೆಟ್ ಅನ್ನು ಅಲ್ಲಿಗೆ ಬಿಟ್ಟು ಹೋಗುವುದರ ಬದಲು ನಿಮ್ಮ ಜೊತೆಗೆ ಒಳಗೆ ತೆಗೆದುಕೊಂಡು ಹೋಗಿ.

Comments are closed.