Bigg Boss: ವೀಕ್ಷಕರು ಅಂದುಕೊಂಡಿದ್ದಕ್ಕಿಂತ ಬೇಗ ಪ್ರಸಾರವಾಗತ್ತಾ ಹೊಸ ಬಿಗ್ ಬಾಸ್ ಸೀಸನ್; ಯಾವಾಗಿಂದ ಗೊತ್ತಾ?

Bigg Boss: ಕಿರುತೆರೆಯ ಕಾರ್ಯಕ್ರಮಗಳಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹ ರಿಯಾಲಿಟಿ ಶೋ ಕಾರ್ಯಕ್ರಮ ಅಂದ್ರೆ ಅದು ಬಿಗ್ ಬಾಸ್ ಕಾರ್ಯಕ್ರಮ. ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡೋದಕ್ಕೆ ಅಂತಾನೇ ಒಂದು ವಿಶೇಷವಾದ ವೀಕ್ಷಕ ವರ್ಗವಿದೆ. ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ಅಲ್ಲಿನ ಭಾಷೆಯ ಸೂಪರ್ ಸ್ಟಾರ್ ಗಳು ನಡೆಸಿಕೊಡುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಮಾತನಾಡುವುದಾದರೆ ನಾನಿ ಹಾಗೂ ಜೂನಿಯರ್ ಎಂಟಿಆರ್ ರವರು ಕೂಡ ಈ ಮೊದಲು ಬಿಗ್ ಬಾಸ್ ತೆಲುಗು ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಕೊಡುತ್ತಿದ್ದರು. ಈಗ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಎವರ್ಗ್ರೀನ್ ಹೀರೋ ಆಗಿರುವಂತಹ ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಡುತ್ತಿದ್ದಾರೆ.

ಹೊಸದಾಗಿ ಪ್ರಾರಂಭ ಆಗಲಿದೆ ತೆಲುಗು ಬಿಗ್ ಬಾಸ್!

6ನೇ ಸೀಸನ್ ಫ್ಲಾಪ್ ಆಗಿದ್ದ ಕಾರಣದಿಂದಾಗಿ ಏಳನೇ ಸೀಸನ್ ಅನ್ನು ಬೇರೆ ಬೇರೆ ನಿಯಮಗಳನ್ನು ಅಳವಡಿಸಿಕೊಂಡು ಹೊಸ ಆಟಗಳ ಜೊತೆಗೆ ಪ್ರೇಕ್ಷಕರ ಮುಂದೆ ತರಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಕಳೆದ ಬಾರಿ ಆದರೆ ತೆಲುಗು ಬಿಗ್ ಬಾಸ್ 7ನೇ ಸೀಸನ್ ಗೆಲುವನ್ನು ಖಂಡಿತ ಹಾಗೂ ದೊಡ್ಡ ಮಟ್ಟಿಗೆ ಜನಪ್ರಿಯತೆಯನ್ನು ಕೂಡ ವಾಹಿನಿಗೆ ತಂದುಕೊಟ್ಟಿತ್ತು. ಇದರಲ್ಲಿ ಕಾಮನ್ ಮ್ಯಾನ್ ಆಗಿದ್ದ ಪಲ್ಲವಿ ಪ್ರಶಾಂತ್ ಬೇರೆ ಎಲ್ಲ ಸೆಲೆಬ್ರಿಟಿಗಳನ್ನು ಹಿಂದಿಕ್ಕಿ ಒಬ್ಬ ರೈತನಾಗಿ ಈ ಕಾರ್ಯಕ್ರಮವನ್ನು ಕಳೆದು ಬಾರಿ ಗೆದ್ದಿದ್ರು. ಇವರ ಜನಪ್ರಿಯತೆ ಯಾವುದೇ ಹೀರೋಗಿಂತ ಕಡಿಮೆ ಇಲ್ಲ ಅನ್ನೋದನ್ನ ಕಳೆದ ಬಾರಿಯ ಬಿಗ್ ಬಾಸ್ ನಿರೂಪಿಸಿತ್ತು. ಅದೇ ಕಾರಣಕ್ಕಾಗಿ ಈ ಬಾರಿಯ ಬಿಗ್ ಬಾಸ್ ಕೂಡ ತೆಲುಗಿನಲ್ಲಿ ವೇಗವಾಗಿ ಪ್ರಾರಂಭ ಆಗುವ ಮುನ್ಸೂಚನೆ ಸಿಕ್ಕಿದೆ.

ತೆಲುಗು ಬಿಗ್ ಬಾಸ್ ಸೀಸನ್ 8 ಅತಿ ಶೀಘ್ರದಲ್ಲಿ ಪ್ರಾರಂಭ ಆಗಲಿರುವ ಹಿನ್ನೆಲೆಯಲ್ಲಿ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ಎವರ್ಗ್ರೀನ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ ಅವರೇ ಹೋಸ್ಟ್ ಆಗಿ ನಿರೂಪಣೆ ಮಾಡಿಕೊಡಲಿದ್ದಾರೆ. ಈಗಾಗಲೇ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವಂತಹ ಲಿಸ್ಟ್ ಅನ್ನು ಕೂಡ ತಂಡ ತಯಾರು ಮಾಡುವುದಕ್ಕೆ ಸಿದ್ಧವಾಗಿದ್ದು ತೆರೆಮರೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ ತಿಂಗಳಲ್ಲಿ 7ನೇ ಸೀಸನ್ ಕಂಡುಬಂದಿದ್ದು ಹೀಗಾಗಿ ಎಂಟನೇ ಸೀಸನ್ ಯಾವಾಗ ಕಂಡುಬರುತ್ತದೆ ಎನ್ನುವುದಾಗಿ ಪ್ರೇಕ್ಷಕರು ಪ್ರಶ್ನೆ ಕೇಳುತ್ತಿದ್ದಾರೆ.

ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಜೂನ್ ತಿಂಗಳ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ತೆಲುಗು ಬಿಗ್ ಬಾಸ್ ಸೀಸನ್ 8 ಪ್ರಾರಂಭ ಆಗಲಿದೆ ಎನ್ನುವಂತಹ ಮಾಹಿತಿಗಳು ವಾಹಿನಿಯ ಮೂಲಗಳಿಂದ ತಿಳಿದು ಬಂದಿದೆ. ತೆಲುಗು ಬಿಗ್ ಬಾಸ್ ಪ್ರೇಕ್ಷಕರಿಗೆ ಈ ಸುದ್ದಿ ಸಂತೋಷವನ್ನು ನೀಡುತ್ತಿದ್ದು ಅಭಿಮಾನಿಗಳು ಈ ಕಾರ್ಯಕ್ರಮಕ್ಕಾಗಿ ಎದುರು ನೋಡುತ್ತಿದ್ದಾರೆ. ಕನ್ನಡದಲ್ಲಿ ಕೂಡ ಬಿಗ್ ಬಾಸ್ ಅಭಿಮಾನಿಗಳು ಕಿಚ್ಚ ಸುದೀಪ್ ರವರ ನೇತೃತ್ವದಲ್ಲಿ ಯಾವಾಗ ಬಿಗ್ ಬಾಸ್ ಪ್ರಾರಂಭವಾಗುತ್ತದೆ ಎನ್ನುವಂತಹ ಕಾಯುವಿಕೆಯಲ್ಲಿದ್ದಾರೆ.

Comments are closed.