Government Scheme: ಗೃಹ ಜ್ಯೋತಿ ಇದ್ದರೂ ಕೂಡ ಕರೆಂಟ್ ಬಿಲ್ ನಿರೀಕ್ಷೆಗಿಂತ ಹೆಚ್ಚಾಗಿ ಬರುತ್ತಿರುವವರು ಈ ರೀತಿ ಮಾಡಿ ಬಿಲ್ಲೇ ಬರಲ್ಲ!

Government Scheme: ಇದು ಪ್ರಖಂಡ ಬಿಸಿಲನ್ನು ಹೊಂದಿರುವಂತಹ ಬೇಸಿಗೆಗಾಲ. ಏನೇ ಉಪಯೋಗಿಸಿದರು ಕೂಡ ಸಭೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಫ್ಯಾನ್ ಹಾಗೂ ಎಸಿಯನ್ನು ಹೆಚ್ಚಾಗಿ ಈ ದಿನಗಳಲ್ಲಿ ಬಳಸುತ್ತಾರೆ. ಈಗ ಗೃಹ ಜ್ಯೋತಿ ಯೋಜನೆ ಎದುರು ಕೂಡ ಕರೆಂಟ್ ಬಿಲ್ ಮಾತ್ರ ಕಡಿಮೆ ಆಗ್ತಾ ಇಲ್ಲ ಅನ್ನೋರು ಇವತ್ತಿನ ಲೇಖನದಲ್ಲಿ ನಾವು ಹೇಳುವುದಕ್ಕೆ ಹೊರಟಿರುವಂತಹ ಉಪಾಯವನ್ನ ಫಾಲೋ ಮಾಡೋದು ಒಳ್ಳೆಯದು ಹಾಗೂ ಪಾಕೆಟ್ ಗೆ ಲಾಭದಾಯಕ ಕೂಡ ಹೌದು.

ವಿದ್ಯುತ್ ಬಿಲ್ ಹೆಚ್ಚಿಗೆ ಬರೋದನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿ!

  1. ಯಾವತ್ತು ಕೂಡ ಉಚಿತವಾಗಿ ವಿದ್ಯುತ್ ಸಿಗುತ್ತದೆ ಎಂದ ಮಾತ್ರಕ್ಕೆ ನೀವು ವಿದ್ಯುತ್ ಬಳಕೆ ಮಾಡದೇ ಇರುವ ಸಂದರ್ಭದಲ್ಲಿ ಕೂಡ ಅದರ ಸ್ವಿಚ್ ಅನ್ನು ಆನ್ ಮಾಡಿ ಇಡುವುದು ಒಳ್ಳೆಯದಲ್ಲ. ಅದರಲ್ಲೂ ಈ ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿರುತ್ತದೆ ಹೀಗಾಗಿ ಆದಷ್ಟು ಇದರ ಬಗ್ಗೆ ನಿಗಾ ವಹಿಸಿ.
  2. ಸಾಕಷ್ಟು ಜನರು ಟಿವಿ ನೋಡುವ ಸಂದರ್ಭದಲ್ಲಿ ಅದನ್ನು ಆಫ್ ಮಾಡುವುದಕ್ಕೆ ರಿಮೋಟ್ ಅನ್ನು ಬಳಸುತ್ತಾರೆ. ರಿಮೋಟ್ ನಲ್ಲಿ ಆಫ್ ಮಾಡಿದ್ರೆ ಅದು ಸಂಪೂರ್ಣವಾಗಿ ಆಫ್ ಆದ ರೀತಿಯಲ್ಲಿ ಇರೋದಿಲ್ಲ ಅದು ನೀವು ಇನ್ನೊಮ್ಮೆ ಟಿವಿ ನೋಡೋದಕ್ಕೆ ಬರುವವರೆಗೂ ಕೂಡ ಆನ್ ಆಗಿರುತ್ತದೆ. ಹೀಗಾಗಿ ನಿಜಕ್ಕೂ ಕೂಡ ಆಫ್ ಮಾಡಬೇಕು ಹಾಗೂ ಎನರ್ಜಿಯನ್ನು ಉಳಿಸಬೇಕು ಅಂದ್ರೆ ನೀವು ಅದರ ಮುಖ್ಯ ಸ್ವಿಚ್ ಅನ್ನು ಆಫ್ ಮಾಡಬೇಕು.
  3. ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರ ಮನೆಯಲ್ಲಿ ಮನೆಯ ಕೋಣೆಯನ್ನು ತಂಪಾಗಿರಿಸಿಕೊಳ್ಳಲು ಎಸಿ ಯನ್ನು ಬಳಸಲಾಗುತ್ತದೆ. ಇದರಿಂದಾಗಿ ಹೆಚ್ಚಿನ ವಿದ್ಯುತ್ ಅನ್ನು ಬಳಸಿಕೊಳ್ಳಬೇಕಾಗುತ್ತದೆ ಅದರ ಬದಲಿಗೆ ನೀವು ಒಮ್ಮೆ ಏಸಿಯಿಂದಾಗಿ ಕೋಣೆ ತಂಪಾದಾಗ ಕೂಡಲೇ ಅದನ್ನು ಆಫ್ ಮಾಡುವುದರ ಮೂಲಕ ಎಸಿಯನ್ನು ಕೂಡ ಬಳಸಿಕೊಂಡಂತಾಗುತ್ತದೆ ಹಾಗೂ ಕೋಣೆ ಕೂಡ ತಂಪಾಗಿರುತ್ತದೆ ಜೊತೆಗೆ ಎನರ್ಜಿಯನ್ನು ಕೂಡ ಉಳಿಸಿದಂತಾಗುತ್ತದೆ.
  4. ಐದು ಸ್ಟಾರ್ ರೇಟಿಂಗ್ ಹೊಂದಿರುವಂತಹ ಉಪಕರಣಗಳನ್ನು ಬಳಸಿಕೊಳ್ಳುವುದರ ಮೂಲಕ ನೀವು 30 ರಿಂದ 40 ಪ್ರತಿಶತ ವಿದ್ಯುತ್ ಅನ್ನು ಉಳಿತಾಯ ಮಾಡಬಹುದಾಗಿದೆ. ಇವುಗಳ ಬೆಲೆ ಹೆಚ್ಚಾಗಿರಬಹುದು ಆದರೆ ಇವುಗಳು ಬಳಸುವಂತಹ ವಿದ್ಯುತ್ ಬಳಕೆ ಕಡಿಮೆಯಾಗಿರುತ್ತವೆ.
  5. ಕೊನೆಯದಾಗಿ ಹಾಗೂ ಪ್ರಮುಖವಾಗಿ ನಾವು ಲ್ಯಾಪ್ಟಾಪ್ ಅಥವಾ ಮೊಬೈಲ್ ಗಳಂತಹ ಗ್ಯಾಜೆಟ್ ಗಳನ್ನು ಚಾರ್ಜ್ ಮಾಡಿದ ನಂತರ ಅವುಗಳನ್ನು ಡಿಸ್ಕನೆಕ್ಟ್ ಮಾಡಿದ ಮೇಲೆ ಸ್ವಿಚ್ ಆಫ್ ಮಾಡೋದನ್ನ ಮರೆತು ಬಿಡುತ್ತೇವೆ. ಕನೆಕ್ಟ್ ಆಗಿಲ್ಲ ಹೀಗಾಗಿ ವಿದ್ಯುತ್ ಬಳಸಿಕೊಳ್ಳುವುದಿಲ್ಲ ಅನ್ನುವುದಾಗಿ ಸಾಕಷ್ಟು ಜನರಲ್ಲಿ ತಪ್ಪು ಕಲ್ಪನೆ ಇದೆ. ಸ್ವಿಚ್ ಆಫ್ ಮಾಡುವವರೆಗೂ ಕೂಡ ಅದರಲ್ಲಿ ವಿದ್ಯುತ್ ಅರಿವು ಇರುತ್ತದೆ. ಹಾಗೂ ವಿದ್ಯುತ್ ಬಿಲ್ ಕೂಡ ಹೆಚ್ಚಾಗುವುದಕ್ಕೆ ಇದು ಒಂದು ರೀತಿಯಲ್ಲಿ ಕಾರಣ ಆಗಿರುತ್ತದೆ.

Comments are closed.