SBI Loan: SBI ನಲ್ಲಿ 15 ಲಕ್ಷಕ್ಕೆ ಕಾರ್ ಲೋನ್ ತಗೊಂಡ್ರೆ ಪ್ರತಿ ತಿಂಗಳು ಇಷ್ಟೇ ಬರೋದು EMI!

SBI Loan: ವಿಶೇಷವಾಗಿ ನಾವು ಮಾತನಾಡುತ್ತಿರುವುದು ಮಿಡಲ್ ಕ್ಲಾಸ್ ಜನರ ಬಗ್ಗೆ. ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಸ್ವಂತ ಮನೆಯನ್ನು ಹೊಂದಬೇಕು ಹಾಗೂ ಸ್ವಂತ ಕಾರನ್ನು ಖರೀದಿಸಬೇಕು ಎನ್ನುವಂತಹ ಆಸೆಯನ್ನು ಚಿಕ್ಕವಯಸ್ಸಿನಿಂದಲೂ ತಮ್ಮ ಜೊತೆಗೆ ಬೆಳೆಸಿಕೊಂಡು ಬಂದಿರುತ್ತಾರೆ. ಅದರಲ್ಲೂ ವಿಶೇಷವಾಗಿ ನಾವು ಮಾತಾಡ್ತಾ ಇರೋದು ಕಾರನ್ನು ಖರೀದಿಸುವ ಬಗ್ಗೆ. ಹೊಸ ಕಾರನ್ನು ಖರೀದಿಸಬೇಕು ಎನ್ನುವಂತಹ ಆಸೆಯಲ್ಲಿ ಸ್ವಲ್ಪ ಮಟ್ಟಿಗೆ ಡೌನ್ ಪೇಮೆಂಟ್ ಹಾಕಿ ನಂತರ ಉಳಿದ ಹಣವನ್ನು ಕಾರ್ ಲೋನ್ ಮೂಲಕ ಪಾವತಿಸುವ ಮೂಲಕ ಕಾರನ್ನು ಖರೀದಿಸುತ್ತಾರೆ.

ಇನ್ನು ಇವತ್ತಿನ ಲೇಖನದಲ್ಲಿ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಕಾರ್ ಲೋನ್ ನಲ್ಲಿ ಸಾಲ ಪಡೆದುಕೊಂಡು ಕಾರನ್ನು ಖರೀದಿ ಮಾಡಿದ್ರೆ ಎಷ್ಟು ಹಣವನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 15 ಲಕ್ಷ ರೂಪಾಯಿ ಕಾರ್ ಲೋನ್ ತಗೊಂಡ್ರೆ ಕಂತು ಹಾಗೂ ಬಡ್ಡಿ ಎಷ್ಟು?

ಭಾರತ ದೇಶದ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು 15 ಲಕ್ಷ ರೂಪಾಯಿಗಳಿಗೆ ಕಾರ್ ಲೋನ್ ಮಾಡಬೇಕು ಎನ್ನುವಂತಹ ಯೋಜನೆಯನ್ನು ಹೊಂದಿದ್ದರೆ ಬಡ್ಡಿಯ ವಿಚಾರಕ್ಕೆ ಬರೋದಾದ್ರೆ ನೀವು ಕಾರ್ ಲೋನ್ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 8.85 ರಿಂದ 9.80 ಪ್ರತಿಶತ ಬಡ್ಡಿಯನ್ನು ಕಟ್ಟಬೇಕಾಗುತ್ತೆ. ಎಲೆಕ್ಟ್ರಿಕ್ ಕಾರಿನ ಮೇಲೆ ಸ್ವಲ್ಪ ಮಟ್ಟಿಗೆ ಬಡ್ಡಿಯಲ್ಲಿ ರಿಯಾಯಿತಿ ಸಿಗುತ್ತೆ.

ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಷ್ಟು ನಿಮಗೆ ಕಡಿಮೆ ಬಡ್ಡಿಯಲ್ಲಿ ಕಾರ್ ಲೋನ್ ಸಿಗುತ್ತದೆ. ಇದಕ್ಕಾಗಿ ನಿಮ್ಮ ಕ್ರೆಡಿಟ್ ಸ್ಕೋರ್ 750 ರಿಂದ 800 ರವರೆಗೆ ಇರಬೇಕಾಗಿರುತ್ತದೆ. ಇಲ್ಲವಾದಲ್ಲಿ ಬಡ್ಡಿದರ ಹೆಚ್ಚಾಗುತ್ತದೆ.

EMI ಎಷ್ಟು ಕಟ್ಟಬೇಕು?

15 ಲಕ್ಷ ರೂಪಾಯಿಗಳ ಸಾಲಕ್ಕೆ ನೀವು 8.85% ಬಡ್ಡಿ ದರದಲ್ಲಿ ಕೇವಲ ಬಡ್ಡಿಯ ರೂಪದಲ್ಲಿ 3.61 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಕಟ್ಟಬೇಕಾಗುತ್ತದೆ. ಐದು ವರ್ಷಗಳ ಕಾಲ ನೀವು ಮರುಪಾವತಿ ಮಾಡುವಂತಹ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ರೆ ಪ್ರತಿ ತಿಂಗಳಿಗೆ ನೀವು 31,028 ರೂಪಾಯಿಗಳನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ. ಈ ಮೂಲಕ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 15 ಲಕ್ಷ ರೂಪಾಯಿಗಳ ಕಾರ್ ಲೋನ್ ಪಡೆದುಕೊಳ್ಳುವ ಮೂಲಕ ಅದನ್ನು ಪ್ರತಿ ತಿಂಗಳ ಕಂತಿನ ರೂಪದಲ್ಲಿ ಹೀಗೆ ಕಟ್ಟಬಹುದಾಗಿದೆ. ಈ ಬಡ್ಡಿದರ ಹಾಗೂ ಕಂತು ಎನ್ನುವುದು ಸಮಯದಿಂದ ಸಮಯಕ್ಕೆ ಸ್ಥಳದಿಂದ ಸ್ಥಳಕ್ಕೆ ಬೇರೆಯಾಗುವಂತಹ ಸಾಧ್ಯತೆ ಇರುತ್ತದೆ. ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾರಾದರೂ ಕಾರನ್ನು ಖರೀದಿ ಮಾಡುವಂತ ಯೋಜನೆಯನ್ನು ಹಾಕಿದ್ರೆ ಈ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.

Comments are closed.