Loan: ಬೇರೆ ಯಾವ ದಾಖಲೆಯೂ ಬೇಡ, ಆಧಾರ್ ಕಾರ್ಡ್ ಒಂದಿದ್ರೆ ಸಿಗತ್ತೆ ಹತ್ತು ಲಕ್ಷದ ವರೆಗೆ ಲೋನ್; ಅಪ್ಲೈ ಮಾಡೋದು ಹೇಗೇ ನೋಡಿ!

Loan: ಹಣದ ಅವಶ್ಯಕತೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ಬಂದೇ ಬರುತ್ತದೆ. ಆ ಸಂದರ್ಭದಲ್ಲಿ ನಾವು ದುಡಿದಿರುವಂತಹ ಹಣ ಸಾಕಾಗದೆ ಹೋದಲ್ಲಿ ನಾವು ಮಾಡುವಂತಹ ಮೊದಲನೇ ಕೆಲಸ ಅಂದ್ರೆ ಅದು ಬ್ಯಾಂಕಿನಿಂದ ಸಾಲವನ್ನು ಪಡೆದುಕೊಳ್ಳುವುದು. ಅದರಲ್ಲೂ ವಿಶೇಷವಾಗಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಕೇವಲ ಆಧಾರ್ ಕಾರ್ಡ್ ಮೂಲಕ ಯಾವ ರೀತಿಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ. ಈ ಸುಲಭ ಮಾರ್ಗದಿಂದ ಸಾಲವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಆಧಾರ್ ಮೂಲಕ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾಗಿರುವ ಅರ್ಹತೆಗಳು!

  • ಆಧಾರ್ ಮೂಲಕ ಸಾಲವನ್ನು ಪಡೆದುಕೊಳ್ಳುವುದಕ್ಕೆ ಆ ವ್ಯಕ್ತಿಯ ವಯಸ್ಸು 21 ವರ್ಷಕ್ಕಿಂತ ಮೇಲಾಗಿರಬೇಕು ಹಾಗೂ ಮೊಬೈಲ್ ನಂಬರ್ ಗೆ ಪ್ರಮುಖವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
  • ಪ್ರಮುಖವಾಗಿ ಪರ್ಸನಲ್ ನೀಡುವ ಸಂದರ್ಭದಲ್ಲಿ ಪ್ರತಿಯೊಂದು ಬ್ಯಾಂಕ್ ಗಳು ಚೆಕ್ ಮಾಡುವ ರೀತಿಯಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಕನಿಷ್ಠಪಕ್ಷ 750 ಅಂಕಗಳಿಗಿಂತ ಹೆಚ್ಚಾಗಿರಬೇಕು. ಇಲ್ಲವಾದಲ್ಲಿ ಲೋನ್ ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದು.
  • ನಿಮ್ಮ ಸಿಬಿಲ್ ಸ್ಕೋರ್ ಈ ಹಿಂದೆ ನೀವು ಸಾಲ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಕಟ್ಟಿದ್ದಿರೋ ಇಲ್ವೋ ಅನ್ನೋದರ ಮಾಪನವಾಗಿದ್ದು ಅದು ಚೆನ್ನಾಗಿದ್ರೆ ಮಾತ್ರ ನಿಮಗೆ ಕಡಿಮೆ ಬಡ್ಡಿಯಲ್ಲಿ ಹಣ ಸಿಗುತ್ತದೆ ಇಲ್ಲವಾದಲ್ಲಿ ಬ್ಯಾಂಕಿನವರು ನಿಮ್ಮ ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತಾರೆ ಅನ್ನೋದನ್ನ ನೆನಪಲ್ಲಿಟ್ಟುಕೊಳ್ಳಿ. ಇನ್ನು ಈ ಎಲ್ಲ ವಿಚಾರಗಳನ್ನು ಸಾಲ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಸರಿಯಾದ ರೀತಿಯಲ್ಲಿ ಚೆಕ್ ಮಾಡಿ ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ವಿಧಾನ!

ಆನ್ಲೈನಲ್ಲಿ ನಿಮಗೆ ಆಧಾರ್ ಕಾರ್ಡ್ ಬಳಸಿಕೊಂಡು ಸಾಲವನ್ನು ಪಡೆದುಕೊಳ್ಳುವಂತಹ ಸಾಕಷ್ಟು ಅಧಿಕೃತ ವೆಬ್ಸೈಟ್ಗಳು ಸಿಗಬಹುದಾಗಿದೆ ಅವುಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ನಂತರ ಲೋನ್ ಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಅರ್ಜಿ ಸಲ್ಲಿಸುವಂತಹ ವಿಧಾನ ಈ ಕೆಳಗಿನಂತಿರುತ್ತದೆ.

  • ಮೊದಲಿಗೆ ನೀವು ಲೋನ್ ಪಡೆದುಕೊಳ್ಳುವಂತಹ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಗೆ ಹೋಗಬೇಕಾಗಿರುತ್ತದೆ. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ನಿಮ್ಮ ಫೋನ್ ನಂಬರ್ ಮೂಲಕ ನೋಂದಾವಣೆ ಮಾಡಿ ಕೊಳ್ಳಬೇಕಾಗುತ್ತದೆ.
  • ಅಲ್ಲಿ ಕೇಳಲಾಗುವಂತಹ ವಿವರಗಳನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ರೀತಿಯಲ್ಲಿ ತುಂಬಿ. ಅಲ್ಲಿ ಇನ್ಸ್ಟಂಟ್ ಪರ್ಸನಲ್ ಲೋನ್ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಅಲ್ಲಿ ನಿಮಗೆ ಒಂದು ಸಾವಿರದಿಂದ ಹತ್ತು ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ನಿಮಗೆ ಬೇಕಾಗಿರುವಂತಹ ಹಣದ ಮೊತ್ತವನ್ನು ಆಯ್ಕೆ ಮಾಡಿ eKYC ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಮುಗಿಸಿಕೊಳ್ಳಿ.
  • ಇದಾದ ನಂತರ ನೀವು ಅರ್ಜಿ ಸಲ್ಲಿಸಿರುವ ಅಂತಹ ಸಂಸ್ಥೆಯಿಂದ ಕಾಲ್ ಮೂಲಕ ಈ ವಿಚಾರದ ಬಗ್ಗೆ ನಿಮ್ಮಿಂದ ಕನ್ಫರ್ಮೇಶನ್ ಪಡೆದುಕೊಳ್ಳುತ್ತಾರೆ. ಈ ಸಾಲದ ಮೇಲೆ 12 ರಿಂದ 16 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ ಹಾಗೂ ಕೆಲವೇ ದಿನಗಳಲ್ಲಿ ನೀವು ಅರ್ಜಿ ಸಲ್ಲಿಸಿರುವಂತಹ ಲೋನ್ ಮೊತ್ತ ನಿಮ್ಮ ಬ್ಯಾಂಕಿನ ಖಾತೆಗೆ ವರ್ಗಾವಣೆ ಆಗಿರುತ್ತದೆ.

Comments are closed.