Splendor Bike: ಹಳೆಯ ಸ್ಪ್ಲೆಂಡರ್ ಬೈಕ್ ಹೊಂದಿರುವವರಿಗೆ ಗುಡ್ ನ್ಯೂಸ್! RTO ಕೊಟ್ಟ ಬಂಪರ್ ಆಫರ್ ಏನ್ ಗೊತ್ತಾ?

Splendor Bike: ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು ಸ್ಪ್ಲೆಂಡರ್ ಬೈಕ್ ಮಧ್ಯಮ ವರ್ಗದ ಕುಟುಂಬದ ಬೈಕ್ ಖರೀದಿ ಮಾಡುವ ಸಂದರ್ಭದಲ್ಲಿ ಆಯ್ಕೆ ಮಾಡುವಂತಹ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಬೈಕ್ ಆಗಿದೆ. ಯಾಕೆಂದರೆ ಸ್ಪ್ಲೆಂಡರ್ ಬೈಕ್ ಅನ್ನು ಖರೀದಿ ಮಾಡಿದ್ರೆ ಹೈಯೆಸ್ಟ್ ಮೈಲೇಜ್ ನೀಡುತ್ತದೆ ಹಾಗೂ ಖರೀದಿ ಮಾಡುವ ಸಂದರ್ಭದಲ್ಲಿ ಕೂಡ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಖರೀದಿ ಮಾಡಿದ ನಂತರ ಹೆಚ್ಚಾಗಿ ಮೈನ್ಟೈನ್ ಮಾಡಬೇಕಾದ ಖರ್ಚು ಕೂಡ ಸ್ಪ್ಲೆಂಡರ್ ಬೈಕ್ ಮೇಲೆ ಇರುವುದಿಲ್ಲ. ಇದಕ್ಕಾಗಿ ಪ್ರತಿಯೊಬ್ಬರೂ ಕೂಡ ಈ ಬೈಕನ್ನೇ ಖರೀದಿ ಮಾಡುವಂತಹ ಯೋಚನೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗಿರುವುದು ಕೂಡ ನೀವು ಕಂಡಿದ್ದೀರಿ. ಈಗ ನಿಮ್ಮ ಸ್ಪ್ಲೆಂಡರ್ ಬೈಕ್ ಅನ್ನು ಕೂಡ ಎಲೆಕ್ಟ್ರಿಕ್ ಕಿಟ್ ಮುಖಾಂತರ ಎಲೆಕ್ಟ್ರಿಕ್ ಬೈಕನ್ನಾಗಿ ಪರಿವರ್ತನೆ ಮಾಡಬಹುದಾಗಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

GoGoA1 ಕಿಟ್ ಮೂಲಕ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ನ್ನಾಗಿ ಪರಿವರ್ತನೆ ಮಾಡುವುದು ಹೇಗೆ?

  • ಹೀರೋ ಸ್ಪ್ಲೆಂಡರ್ ನಲ್ಲಿ ಪೆಟ್ರೋಲ್ ಇಂಜಿನ್ ಬದಲಿಗೆ ಪವರ್ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಎಲೆಕ್ಟ್ರಿಕ್ ಬ್ಯಾಟರಿಯನ್ನು ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಪಟ್ಟಂತಹ ಘಟಕಗಳನ್ನು ಕೂಡ ಅಳವಡಿಸಲಾಗುತ್ತದೆ.
  • RTO ಈ ಎಲೆಕ್ಟ್ರಿಕ್ ಪರಿವರ್ತನೆ ಮಾಡುವಂತಹ ಕಿಟ್ ಅನ್ನು ಈಗಾಗಲೇ ಅಪ್ರೂವ್ ಮಾಡಿದ ಹೀಗಾಗಿ ಯಾವುದೇ ರೀತಿಯ ಕಾನೂನು ಸಮಸ್ಯೆ ಇಲ್ಲ.
  • ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ನಿಮಗೆ ಇದು 151 km ಗಳ ಮೈಲೇಜ್ ನೀಡುತ್ತದೆ.
  • ಕಿಟ್ ಬೆಲೆ ಕೇವಲ 35,000 ಆಗಿರುತ್ತದೆ ಆದರೆ ಬ್ಯಾಟರಿ ಸಹಿತ 95,000 ಗಳಿಗೆ ಇದು ನಿಮಗೆ ಸಿಗುತ್ತದೆ.

ಸ್ಪ್ಲೆಂಡರ್ ಎಲೆಕ್ಟ್ರಿಕ್ ಕಿಟ್ ಯಾಕಾಗಿ ಅಷ್ಟೊಂದು ಬೇಡಿಕೆ ಇದೆ?

  • ಪೆಟ್ರೋಲ್ ಬೆಲೆ ಯಾವ ರೀತಿಯಲ್ಲಿ ಏರಿಕೆ ಆಗಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಹೀಗಾಗಿ ಈಗ ಟ್ರೆಂಡಿಂಗ್ ನಲ್ಲಿ ಇರುವಂತಹ ಎಲೆಕ್ಟ್ರಿಕ್ ರೂಪಾಂತರದಲ್ಲಿ ಈ ಬೈಕ್ ಅನ್ನು ನೋಡೋದಕ್ಕೆ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಪರಿಸರ ಮಾಲಿನ್ಯದ ವಿಚಾರದಲ್ಲಿ ಕೂಡ ನಾವು ಈ ಬದಲಾವಣೆಯನ್ನು ಸ್ವಾಗತಿಸಬಹುದಾಗಿದೆ.
  • ಈಗಾಗಲೇ ಪರಿಸರ ಸ್ನೇಹಿ ರೂಪದಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್ ಆಗುತ್ತಿರುವಂತಹ ಸಾಕಷ್ಟು ಎಲೆಕ್ಟ್ರಿಕ್ ಬೈಕುಗಳ ಸಾಲಿನಲ್ಲಿ ಸ್ಪ್ಲೆಂಡರ್ ಕೂಡ ಸೇರಿದ್ರೆ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಈ ಬೈಕ್ ಅನ್ನು ಖರೀದಿ ಮಾಡುವಂತಹ ಮನಸ್ಸು ಮಾಡ್ತಾರೆ. ಇದು ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು.

ಈ ರೀತಿ ಎಲೆಕ್ಟ್ರಿಕ್ ಕಿಟ್ ರೂಪಾಂತರದ ಮೂಲಕ GoGoA1 ಸಂಸ್ಥೆ ಸ್ಪ್ಲೆಂಡರ್ ಬೈಕ್ ಗಳನ್ನು ಈ ಮೇಲೆ ತಿಳಿಸಿರುವ ಅಂತಹ ಬೆಲೆಗೆ ರೂಪಾಂತರ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದು ಕಾನೂನಿನ ಸಮಸ್ಯೆ ಕೂಡ ಇದಕ್ಕೆ ಇರುವುದಿಲ್ಲ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

Comments are closed.