Darshan case: ತನಿಖೆಯಲ್ಲಿ ಕೇಳಿ ಬರ್ತಾ ಇರೋ ಅಂಶಗಳು ದರ್ಶನ್ ರವರೆ ಇದಕ್ಕೆ ನೇರ ಕಾರಣ ಅಂತ ಹೇಳ್ತಾ ಇದೆ!

Darshan case: ರೇಣುಕಾ ಸ್ವಾಮಿ ಚಿತ್ರದುರ್ಗ ಮೂಲದ ವ್ಯಕ್ತಿ ಬೆಂಗಳೂರಿನ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡ್ತಾ ಇದ್ದ. ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿರುವಂತಹ ಮಾಹಿತಿಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಸಹಚರರ ಬಳಿ ಆತನನ್ನು ಕಿಡ್ನಾಪ್ ಮಾಡಿಸಿ ಶೆಡ್ ಗೆ ತಂದು ಆತನ ಕಥೆ ಮುಗಿಸಿದ್ದಾರೆ ಎನ್ನುವ ರೀತಿಯಲ್ಲಿ ಎಲ್ಲಾ ಕಡೆ ಮಾಹಿತಿಗಳು ಸರ್ಕ್ಯುಲೇಟ್ ಆಗುತ್ತಿದೆ. ನೆನ್ನೆ ಎಷ್ಟು ನೀವು ಸರಿಯಾಗಿ ನೋಡಿದ್ರೆ ರೇಣುಕಾ ಸ್ವಾಮಿ ಮರಣ ಹೊಂದಿರುವಂತಹ ಸ್ಥಳಕ್ಕೆ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಪ್ರತಿಯೊಬ್ಬ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳದ ಮಹಜರನ್ನು ಕೂಡ ಮಾಡಲಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಈಗ ಒಂದಲ್ಲ ಒಂದು ಕಡೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಪ್ರಕರಣಕ್ಕೆ ನೇರವಾಗಿ ಸಂಬಂಧ ಹೊಂದಿದ್ದಾರೆ ಅನ್ನೋದು ಖಾತರಿ ಆಗುತ್ತಿದೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಈ ಪ್ರಕರಣದ ಸಂದರ್ಭದಲ್ಲಿ ಕೆಲವೊಂದು ನೇರ ಲಿಂಕ್ ಅನ್ನು ಹೊಂದಿರುವಂತಹ ಕೆಲವೊಂದು ಸುಳಿವುಗಳು ಕಂಡುಬಂದಿದ್ದು ಅವುಗಳೇ ಇದಕ್ಕೆ ಕಾರಣ ಎಂದು ಹೇಳಬಹುದು. ಹಾಗಿದ್ರೆ ಈ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನೇರವಾಗಿ ಕನೆಕ್ಟೆಡ್ ಆಗಿರಬಹುದು ಅನ್ನೋದಕ್ಕೆ ಯಾವೆಲ್ಲಾ ಸುಳಿವು ಸಿಕ್ಕಿದೆ ಎಂಬುದಾಗಿ ತಿಳಿಯೋಣ ಬನ್ನಿ.

ಈ ಅಂಶಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪ್ರಕರಣಕ್ಕೆ ನೇರವಾಗಿ ಸಂಬಂಧ ಹೊಂದಿದ್ದಾರೆ ಎಂಬುದಾಗಿ ತಿಳಿಸುತ್ತೆ.

  • ಮೊದಲನೆದಾಗಿ ಆರಂಭದಲ್ಲಿ ಈ ಮರ್ಡ-ರ್ ಪ್ರಕರಣದಲ್ಲಿ ಆರೋಪಿಗಳು ಎಂಬುದಾಗಿ ಶರಣಾಗತರಾದವರಿಗೆ ಹಾಗೂ ದರ್ಶನ್ ರವರಿಗೆ ತಡರಾತ್ರಿಯಲ್ಲಿ ಸಾಕಷ್ಟು ಬಾರಿ ಕಾಲ್ ಎಕ್ಸ್ಚೇಂಜ್ ಆಗಿರುವುದು ಸಾಬೀತಾಗಿದೆ.
  • ದರ್ಶನ್ ರವರು ಕೂಡ ನಾನು ನೇರವಾಗಿ ಮಾಡಿಲ್ಲ ಆದರೆ ನಮ್ಮ ಹುಡುಗರಿಗೆ ವಾರ್ನಿಂಗ್ ನೀಡಲು ಹೇಳಿದ್ದೇನೆ ಎನ್ನುದಾಗಿ ಕೊನೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಕೇಳಿಬಂದಿದೆ.
  • ಇದು ಆಚಾತುರ್ಯದಿಂದಲೇ ಆಗಿರಬಹುದು ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಾರಣದಿಂದಲೇ ಇದು ನಡೆದಿದೆ ಅನ್ನೋದು ಅವರನ್ನ ನೇರ ಆರೋಪಿಯನ್ನಾಗಿ ಮಾಡುವುದಕ್ಕೆ ಕಾನೂನಾತ್ಮಕವಾಗಿ ಪ್ರತಿಯೊಂದು ಸಾಕ್ಯಾಧಾರಗಳು, ಪೂರಕವಾಗಿವೆ ಎನ್ನುವಂತಹ ತನಿಖೆಯ ವರದಿಗಳು ಕೇಳಿ ಬರುತ್ತಿವೆ.
  • ಎಲ್ಲಕ್ಕಿಂತ ಪ್ರಮುಖವಾಗಿ ರೇಣುಕಾ ಸ್ವಾಮಿ ಇದ್ದಂತಹ ಆ ಶೆಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಬಂದಿದ್ದರು ಎನ್ನುವುದಕ್ಕೆ ಅವರ ಫೋನ್ ನೆಟ್ವರ್ಕ್ ಹಾಗೂ ಅವರ ವಾಹನ ಅಲ್ಲಿಗೆ ಬಂದಿತ್ತು ಎನ್ನುವುದಕ್ಕೆ ಸಿಸಿಟಿವಿ ಫೂಟೇಜ್ ಕೂಡ ದೊರಕಿದೆ ಹಾಗೂ ಅವರ ವಾಹನವನ್ನು ಕೂಡ ಸೀಜ್ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ತನಿಖೆಯಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ಅಧಿಕೃತವಾಗಿ ಹೊರ ಬರಬಹುದಾದ ಸಾಧ್ಯತೆ ಇದೆ. ಸದ್ಯಕ್ಕೆ ಇಮೇಲ್ ಇರುವಂತಹ ಮಾಹಿತಿಗಳು ಮಾಧ್ಯಮ ಮೂಲಗಳು ತಮ್ಮ ಮಾಹಿತಿಗಳಲ್ಲಿ ಬಿತ್ತರಿಸಿವೆ. ಹೀಗಾಗಿ ಈ ವಿಚಾರದ ಬಗ್ಗೆ ಪೊಲೀಸರೇ ಅಧಿಕೃತವಾಗಿ ಮಾಧ್ಯಮಗೋಷ್ಠಿಯಲ್ಲಿ ಹೇಳುವುದರ ಮೂಲಕ ಪ್ರತಿಯೊಂದು ವಿಚಾರಗಳನ್ನ ಬಯಲಿಗೆ ಎಳೆಯಬಹುದಾಗಿದೆ.

Comments are closed.