Current Bill: ಇನ್ಮುಂದೆ ಕರೆಂಟ್ ಬಿಲ್ ಕಟ್ಟೋರಿಗೆ ಚಿಂತೆಇಲ್ಲ; ಬಂದಿದೆ ಹೊಸ ಯೋಜನೆ!

Current Bill: ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನೋಂದಾಯಿಸಿರುವವರಿಗೆ ತಿಂಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರ್ತಾ ಇದೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡಿಕೊಳ್ಳದ ಅಥವಾ ಆ ಅರ್ಹತೆಯನ್ನು ಇಲ್ಲದಂತಹ ಗ್ರಾಹಕರಿಗೂ ಕೂಡ ಒಂದು ಉತ್ತಮ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಈ ಮಾಹಿತಿಯನ್ನು ಪಡೆದುಕೊಳ್ಳೋಣ.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ!

ಪರಿಸರ ಸ್ನೇಹಿ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವಿದ್ಯುತ್ ಅನ್ನು ಪಡೆದುಕೊಳ್ಳುವಂತಹ ಸಂಪನ್ಮೂಲವೇ ಸೌರ ಸಂಪರ್ಕವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದಕ್ಕೆ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆ ಮಾಡುವಂತಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನು ಅಳವಡಿಸಿಕೊಳ್ಳುವುದರಿಂದಾಗಿ ಮನೆಯಲ್ಲಿ ಒಂದು ತಿಂಗಳಿಗೆ 300 ಯೂನಿಟ್ ವರೆಗೂ ಕೂಡ ಉಚಿತ ವಿದ್ಯುತ್ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಒಂದು ಕೋಟಿ ಕುಟುಂಬಗಳಲ್ಲಿ 18 ಸಾವಿರ ಕೋಟಿಗೂ ಹೆಚ್ಚಿನ ವಿದ್ಯುತ್ ಖರ್ಚನ್ನು ತಗ್ಗಿಸಬಹುದಾಗಿದೆ ಎಂಬಂತಹ ಯೋಜನೆಯನ್ನು ಕೂಡ ಈಗಾಗಲೇ ನಿರ್ಮಿಸಲಾಗಿದೆ. ಸೂರ್ಯಘರ್ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಘಟಕವನ್ನು ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸಿಕೊಳ್ಳುವುದರ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಬಳಕೆಯನ್ನು ಕೂಡ ಮಾಡಬಹುದಾಗಿದ್ದು ಇದು ಸಾಕಷ್ಟು ಬುದ್ಧಿವಂತ ನಿರ್ಧಾರವಾಗಿರಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಯೋಜನೆಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು!

ಯೋಜನೆಯಲಿ ರಿಜಿಸ್ಟರ್ ಮಾಡಿಕೊಳ್ಳುವವರು ಕುಟುಂಬದಲ್ಲಿ ಸರ್ಕಾರಿ ನೌಕರರನ್ನು ಹೊಂದಿರಬಾರದು ಅನ್ನೋದನ್ನ ಪ್ರಮುಖವಾಗಿ ತಿಳಿದುಕೊಳ್ಳಬೇಕು. ಅವರ ವಾರ್ಷಿಕ ಆದಾಯ 1.50 ಲಕ್ಷಕ್ಕಿಂತ ಹೆಚ್ಚಿರಬಾರದು.

ಬೇಕಾಗಿರೋ ಡಾಕ್ಯುಮೆಂಟ್ಸ್ ಗಳು!

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಕರೆಂಟ್ ಬಿಲ್
  • ರೆಸಿಡೆನ್ಸಿ ಸರ್ಟಿಫಿಕೇಟ್
  • ಮೊಬೈಲ್ ನಂಬರ್ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಡಿಟೈಲ್ಸ್ ಬೇಕಾಗಿರುತ್ತೆ.

ಅರ್ಜಿ ಸಲ್ಲಿಸುವಂತಹ ವಿಧಾನವನ್ನು ಹಂತ ಹಂತವಾಗಿ ವಿವರಿಸಲಾಗಿದೆ!

  • ಮೊದಲಿಗೆ ನೀವು ಈ ಸೂರ್ಯ ಘರ್ ಯೋಜನೆಯ ಅಧಿಕೃತ ಸರ್ಕಾರಿ ವೆಬ್ಸೈಟ್ಗೆ ಭೇಟಿ ನೀಡಬೇಕು ಹಾಗೂ ಅಲ್ಲಿ ರೂಫ್ ಟಾಪ್ ಸೋಲಾರ್ ಎನ್ನುವಂತಹ ಆಯ್ಕೆ ನಿಮಗೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಅಲ್ಲಿ ಕೇಳಿದಾಗುವಂತಹ ನಿಮ್ಮ ರಾಜ್ಯ ಜಿಲ್ಲೆ ಹಾಗೂ ಇನ್ನಿತರ ವಿವರಗಳನ್ನು ಸರಿಯಾದ ರೀತಿಯಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇದಾದ ನಂತರ ನಿಮ್ಮ ವಿದ್ಯುತ್ ಇಲಾಖೆ ಅಂದರೆ ಎಸ್ಕಾಂ ಯಾವುದು ಅನ್ನೋದನ್ನ ಸರಿಯಾದ ರೀತಿಯಲ್ಲಿ ನಮೂದಿಸಬೇಕು ಹಾಗೂ ನಿಮ್ಮ ಕಸ್ಟಮರ್ ಐಡಿಯನ್ನು ಕೂಡ ಅಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಅದಾದ ನಂತರ ಮುಂದಿನ ಪುಟದಲ್ಲಿ ಅರ್ಜಿ ಫಾರ್ಮ್ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ ಹಾಗೂ ಅದರಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀಡಬೇಕು ಹಾಗೂ ಡಾಕ್ಯುಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗಿರುತ್ತದೆ.
  • ಒಮ್ಮೆ ಎಲ್ಲವನ್ನು ಚೆಕ್ ಮಾಡಿದ ನಂತರ ಕೊನೆಯಲ್ಲಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಸಾಕು ನೀವು ಈ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತಾಗುತ್ತದೆ.
  • ಈ ಸೋಲಾರ್ ರೂಫ್ ಟಾಪ್ ಯೋಜನೆ ಅಡಿಯಲ್ಲಿ ಸರ್ಕಾರದಿಂದ ನಿಮಗೆ 78,000ಗಳ ಸಹಾಯಧನ ಕೂಡ ದೊರಕುತ್ತದೆ ಅನ್ನೋದನ್ನ ಇಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಯಾವುದೇ ಯೋಜನೆಗಳು ಕೂಡ ಈ ವಿಭಾಗದಲ್ಲಿ ಕಂಡು ಬಂದರೂ ಕೂಡ ಸೂರ್ಯ ಘರ್ ಯೋಜನೆಯ ಮುಂದೆ ಎಲ್ಲವೂ ಕೂಡ ನಶ್ವರ ಎಂದು ಹೇಳಬಹುದಾಗಿದೆ.

Comments are closed.