Learner Licence: ಲರ್ನರ್ ಡ್ರೈವಿಂಗ್ ಲೈಸನ್ಸ್ ಗಾಗಿ ಆನ್ಲೈನ್ ನಲ್ಲಿ ಹೇಗೆ ಅಪ್ಲೈ ಮಾಡೋದು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!

Learner Licence: ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರ ಅದೇನೆಂದರೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ಲರ್ನರ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ. ಅದನ್ನ ಪಡೆದುಕೊಳ್ಳುವುದಕ್ಕೆ ಇನ್ಮುಂದೆ ನೀವು ಬೇರೆ ಬೇರೆ ಕಡೆಗೆ ಅಲೆದಾಡಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು ಅದರ ಸಂಪೂರ್ಣ ಮಾಹಿತಿಯಿಲ್ಲಿದೆ ನೋಡಿ.

ಲರ್ನರ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸುವ ವಿಧಾನ!

  • sarathi.parivahan.gov.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿಗೆ ಹೋಗಿ ಆನ್ಲೈನ್ ಸರ್ವಿಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಲರ್ನರ್ ಲೈಸೆನ್ಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರಾಜ್ಯದ ಆಯ್ಕೆಯನ್ನು ಮಾಡಿ ನಂತರ ಅರ್ಜಿದಾರರ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  • ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ನಂಬರನ್ನು ನಮೂದಿಸಿದ ನಂತರ ಓಟಿಪಿ ಜನರೇಟ್ ಮಾಡಿ ಅದನ್ನ ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಈಗ ನೀವು ಅರ್ಜಿ ನಮೂನೆಯನ್ನು ಸರಿಯಾದ ರೀತಿಯಲ್ಲಿ ಕೇಳಿದ ವಿವರಗಳು ಆಧಾರದ ಮೇಲೆ ಭರ್ತಿ ಮಾಡಬೇಕಾಗಿರುತ್ತದೆ.
  • ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಹೆಸರು ವಿಳಾಸ ಹಾಗೂ ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ನೀವು ಸರಿಯಾದ ಕಡೆಯಲ್ಲಿ ಭರ್ತಿ ಮಾಡಬೇಕು.
  • ಇದಾದ ನಂತರ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ ಹಾಗೂ ನಂತರ ಈ ಪ್ರಕ್ರಿಯೆಗೆ ಕೇಳಲಾಗುವಂತಹ ಶುಲ್ಕವನ್ನು ನೀವು ಪಾವತಿ ಮಾಡಬೇಕಾಗಿರುತ್ತದೆ.
  • ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ್ರೆ ಸಾಕು ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಿದಂತಾಗುತ್ತದೆ ಹಾಗೂ ನಿಮ್ಮ ಬಳಕೆಗಾಗಿ ನೀವು ಪ್ರಿಂಟ್ ಔಟ್ ಅನ್ನು ಕೂಡ ತೆಗೆದುಕೊಳ್ಳ ಬಹುದಾಗಿದೆ.

ಲರ್ನರ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದಕ್ಕೆ ಮೊದಲು ಈ ಡಾಕ್ಯುಮೆಂಟ್ಗಳು ನಿಮ್ಮ ಬಳಿ ಇರಬೇಕು!

ಲರ್ನರ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಕೆಲವೊಂದು ಡಾಕ್ಯುಮೆಂಟ್ಸ್ ಗಳು ನಿಮ್ಮ ಬಳಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಅವುಗಳು ನಿಮ್ಮ ಬಳಿ ಇದ್ದರೆ ಮಾತ್ರ ನಿಮಗೆ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗುವುದು.

  • ನಿಮ್ಮ ಸಿಗ್ನೇಚರ್
  • ಪಾಸ್ಪೋರ್ಟ್ ಸೈಜ್ನ ಫೋಟೋ
  • ಆಧಾರ್ ಕಾರ್ಡ್
  • ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಶುಲ್ಕಬೇಕಾಗಿರುತ್ತದೆ.

ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಲರ್ನರ್ ಲೈಸೆನ್ಸ್ ನಿಮ್ಮ ಕೈ ಸೇರುತ್ತದೆ. ಇದಾದ ನಂತರ ನೀವು ಆರ್ ಟಿ ಓ ಕಚೇರಿಗಳಿಗೆ ಹೋಗಿ ಅಥವಾ ಇತ್ತೀಚಿನ ದಿನಗಳಲ್ಲಿ ಬಂದಿರುವಂತಹ ಹೊಸ ನಿಯಮ ಡ್ರೈವಿಂಗ್ ಟ್ಯೂಷನ್ ಕೇಂದ್ರಗಳಿಗೆ ಹೋಗುವ ಮೂಲಕ ಅಲ್ಲಿ ಕೂಡ ನಿಮ್ಮ ಡ್ರೈವಿಂಗ್ ಟೆಸ್ಟ್ ನೀಡಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದಾದಂತಹ ಅವಕಾಶ ಇದೆ. ಯಾವುದೇ ಕಾರಣಕ್ಕೂ ಡ್ರೈವಿಂಗ್ ಲೈಸೆನ್ಸ್ ಅಥವಾ ಲರ್ನರ್ ಲೈಸೆನ್ಸ್ ಇಲ್ಲದೆ ವಾಹನವನ್ನು ಹೊರಗೆ ಚಲಾಯಿಸುವುದಕ್ಕೆ ಹೋಗಬೇಡಿ. ದೊಡ್ಡ ಮೊತ್ತದ ಫೈನ್ ಕಟ್ಟ ಬೇಕಾದಂತಹ ಸಾಧ್ಯತೆ ಇದೆ.

Comments are closed.