Driving Licence: ಆಧಾರ್ ಕಾರ್ಡ್ ಗೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

Driving Licence Aadhaar Card Link: ದೇಶದಲ್ಲಿ ವಾಹನ ಚಾಲನೆ ಮಾಡಲು ಸರ್ಕಾರದ ಪರವಾನಿಗೆ ಅಗತ್ಯ. ಪರವಾನಿಗೆ ಇಲ್ಲದೆ, ಸರ್ಕಾರಿ ಸಂಚಾರ ನಿಯಮಗಳನ್ನು ಮೀರಿ ಚಾಲನೆ ಮಾಡಿದರೆ ಸಾವಿರಾರು ರೂ. ದಂಡ ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ವಾಹನ ಚಾಲನೆ ಮಾಡುವವರಿಗೆ ಡ್ರೈವಿಂಗ್ ಲೈಸೆನ್ಸ್ Driving Licence ಮುಖ್ಯ ದಾಖಲೆಯಾಗಿದೆ. ಸದ್ಯ ಸರ್ಕಾರವು ಆಧಾರ್ ಕಾರ್ಡ್ ನೊಂದಿಗೆ  ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ನೀವು ಡ್ರೈವಿಂಗ್ ಲೈಸೆನ್ಸ್ ನ್ನು ಆನ್ಲೈನ್ ಇಲ್ಲವೇ ಆಫ್ಲೈನ್ ನಲ್ಲಿ ಕೂಡ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬಹುದಾಗಿದೆ. ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ಗೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡುವುದು ಹೇಗೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

How to do Driving Licence Aadhaar Card Link here are the Details

ಆನ್ಲೈನ್ ನಲ್ಲಿ ಲಿಂಕ್ ಮಾಡುವ ವಿಧಾನ:

ಮೊದಲು ನೀವು ನಿಮ್ಮ ಬ್ರೌಸರ್ ಒಪನ್ ಮಾಡಬೇಕು. ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving Licence) ನೀಡಿದ ರಾಜ್ಯದ ರಸ್ತೆ ಸಾರಿಗೆ ಪೋರ್ಟೆಲ್ ಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಲಿಂಕ್ ಆಯ್ಕೆ ಕಾಣಿಸುತ್ತದೆ. ಅದನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಮೆನು ಕಾಣಿಸುತ್ತದೆ. ಆ ಪಟ್ಟಿಯಲ್ಲಿ ಡ್ರೈವಿಂಗ್ ಲೈಸೆನ್ಸ್ Driving Licence ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ನಮೂದಿಸಿ. ನಂತರ ವಿವರಗಳನ್ನು ಪಡೆಯಿರಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ವಿವರಗಳು ಕಾಣಿಸಿಕೊಳ್ಳುತ್ತವೆ. ನಂತರ ಅಲ್ಲಿ ನೀಡಿರುವ ಬಾಕ್ಸ್ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಭರ್ತಿ ಮಾಡಬೇಕು. ಈ ಎಲ್ಲ ವಿವರ ಭರ್ತಿ ಮಾಡಿದ ಬಳಿಕ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ವೇಳೆ ನೀವು ನೋಂದಾಯಿಸಿರುವ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದು ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಗೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಆಗುತ್ತದೆ.

ಆಫ್ಲೈನ್ನಲ್ಲಿ ಲಿಂಕ್ ಮಾಡುವ ವಿಧಾನ:

ಮೊದಲು ನಿಮಗೆ ಚಾಲನಾ ಪರವಾನಿಗೆ ನೀಡಿರುವ ಆರ್ ಟಿ ಓ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡುವ ಫಾರ್ಮ್ ಪಡೆದುಕೊಂಡು ಅದನ್ನು ಭರ್ತಿ ಮಾಡಬೇಕು. ಇದರಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ಹಾಗೂ ಆಧಾರ್ ನಂಬರ್ ನ್ನು ಕಡ್ಡಾಯವಾಗಿ ನೀಡಬೇಕು. ಇದರ ಜೊತೆ ಆಧಾರ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ Driving Licence ನ್ನು ಸ್ವಯಂ ದೃಢೀಕರಿಸಿದ ಪ್ರತಿಯನ್ನು ಲಗತ್ತಿಸಬೇಕು. ಮೌಲ್ಯಮಾಪನ ಹಾಗೂ ಪರಿಶೀಲನೆಯನ್ನು ಆರ್ ಟಿ ಒ ಅಧಿಕಾರಿಗಳು ಮಾಡುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ಗೆ ಡ್ರೈವಿಂಗ್ ಲೈಸೆನ್ಸ್ ಲಿಂಕ್ ಮಾಡಲಾಗುತ್ತದೆ.

ಹೀಗೆ ಆಧಾರ್ ಕಾರ್ಡ್ಗೆ ಡ್ರೈವಿಂಗ್ ಲೈಸೆನ್ಸ್ ನ್ನು ಆನ್ಲೈನ್ ಇಲ್ಲವೇ ಆಫ್ಲೈನ್ ಎರಡರಲ್ಲೂ ಭರ್ತಿ ಮಾಡಬಹುದಾಗಿದೆ. ನಿಮಗೆ ಯಾವುದು ಸುಲಭವೋ ಅದನ್ನು ಮಾಡುವುದು ಉತ್ತಮ. ಸರ್ಕಾರ ನಿಯಮ ಜಾರಿಗೆ ತಂದ ನಂತರ ಅದನ್ನು ಅನುಸರಿಸುವುದು ಅಥವಾ ಪಾಲನೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.

Comments are closed.