Property Law: ಅಜ್ಜ-ಅಜ್ಜಿಯ ಆಸ್ತಿಯಲ್ಲಿ ಮೊಮ್ಮಕ್ಕಳಿಗೂ ಪಾಲಿದೆ ಎನ್ನೋದು ನಿಜಾನಾ; ಹೈಕೋರ್ಟ್ ನೀಡಿದ ತೀರ್ಪೇನು?

Property Law: ಭಾರತೀಯ ಕಾನೂನಿನಲ್ಲಿ ಆಸ್ತಿ ವಿಚಾರವಾಗಿ ಕಾಲ ಕಾಲಕ್ಕೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಜನರು ಸಾಮಾನ್ಯವಾಗಿ ಹೊಸದಾಗಿ ಬಂದಿರುವ ನಿಯಮಗಳ ಕುರಿತು ಹೆಚ್ಚಿನ ಅರಿವನ್ನು ಹೊಂದಿರುವುದಿಲ್ಲ. ಆಸ್ತಿಗೆ ಸಂಬಂಧಿಸಿದ ನಿಯಮಗಳು ಹಾಗೂ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರುವುದು ಬಹಳ ಮುಖ್ಯವಾಗುತ್ತದೆ. ಇದೀಗ ನಾವು ಅಜ್ಜ-ಅಜ್ಜಿಯ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆ ಎನ್ನುವದರ ಕುರಿತು ಇಲ್ಲಿದೆ ಮಾಹಿತಿ.

ಅಜ್ಜನ ಸ್ವಯಾರ್ಜಿತ ಆಸ್ತಿಯ ಮೇಲೆ ಮೊಮ್ಮಕ್ಕಳಿಗೆ ಹಕ್ಕಿಲ್ಲ:

ಅಜ್ಜ ಸ್ವಂತವಾಗಿ ದುಡಿದು ಕೊಂಡುಕೊಂಡಿರುವ ಆಸ್ತಿಯ ಮೇಲೆ ಮೊಮ್ಮಕ್ಕಳಿಗೆ ಯಾವುದೇ ರೀತಿಯಾದ ಹಕ್ಕು ಇರುವುದಿಲ್ಲ. ಅಜ್ಜನು ತನ್ನ ಸ್ವಯಾರ್ಜಿತ ಆಸ್ತಿಯನ್ನು ತನಗೆ ಇಷ್ಟ ಬಂದವರಿಗೆ ಹಸ್ತಾಂತರಿಸುವ ಅಧಿಕಾರ ಹೊಂದಿರುತ್ತಾರೆ. ಒಂದು ವೇಳೆ ಅಜ್ಜ ವಿಲ್ ಬರೆಯದೆ ಮರಣ ಹೊಂದಿದ ಸಂದರ್ಭದಲ್ಲಿ ಆ ಆಸ್ತಿಯ ಆತನ ಹೆಂಡತಿ, ಮಗ ಹಾಗೂ ಮಗಳಿಗೆ ಸೇರುತ್ತದೆ. ಅವರು ಆ ಆಸ್ತಿಯ ಮೇಲೆ ಕಾನೂನು ಬದ್ಧ ಹಕ್ಕುಗಳನ್ನು Property Law ಪಡೆದುಕೊಳ್ಳುತ್ತಾರೆ.

ಪೂರ್ವಜರ ಆಸ್ತಿಯ ಮೇಲೆ ಇದೆ ಹಕ್ಕು:

ಮೊಮ್ಮಕ್ಕಳಿಗೆ ತಮ್ಮ ಪೂರ್ವಜರ ಆಸ್ತಿ ಪಡೆದುಕೊಳ್ಳುವ ಹಕ್ಕನ್ನು ಕಾನೂನು ನೀಡಿದೆ. ಈ ಬಗ್ಗೆ ಯಾವುದೇ ವಿವಾದ ಉಂಟಾದರೂ ನ್ಯಾಯಕ್ಕಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದು. ಪೂರ್ವಜರಿಂದ ಪಿತ್ರಾರ್ಜಿತವಾಗಿ Property Law ಬಂದ ಆಸ್ತಿಗೆ ತಂದೆ ಅಥವಾ ಅಜ್ಜನಿಗೆ ಹೇಗೆ ಹಕ್ಕಿದೆಯೋ ಅದೇ ರೀತಿ ಮೊಮ್ಮಕ್ಕಳಿಗೂ ಹಕ್ಕು ಇರುತ್ತದೆ.

ಒಬ್ಬ ಪೂರ್ವಜರಿಂದ ತಲೆ ತಲಾಂತರವಾಗಿ ಹಸ್ತಾಂತರವಾಗಿ ಬಂದಿರುವ ಆಸ್ತಿಯನ್ನು ಪೂರ್ವಜರ ಆಸ್ತಿ ಎಂದು ಕರೆಯಲಾಗುತ್ತದೆ. ಅಂದರೆ ಮುತ್ತಜ್ಜನಿಂದ ಅಜ್ಜನಿಗೆ, ಅಜ್ಜನಿಂದ ತಂದೆಗೆ ಹೀಗೆ ತಲೆ ತಲಾಂತರದಿಂದ ವರ್ಗಾವಣೆ ಆಗುತ್ತ ಬಂದಿರುವ ಆಸ್ತಿಯಾಗಿರುತ್ತದೆ. ಈ ಆಸ್ತಿಗೆ Property Law ಸಂಬಂಧಿಸಿದ ನಿಯಮಗಳು ಸ್ವಯಂ-ಸ್ವಾದೀನ ಪಡಿಸಿಕೊಂಡ ಆಸ್ತಿ ನಿಯಮಗಳಿಗಿಂತ ಭಿನ್ನವಾಗಿರುತ್ತದೆ.

ವಕೀಲರ ಸಹಾಯ ಪಡೆಯೋದು ಉತ್ತಮ:

ಮೊಮ್ಮಗನು ಪೂರ್ವಜರ ಆಸ್ತಿಯ ಮೇಲೆ ಕಾನೂನುಬದ್ಧವಾಗಿ ಹಕ್ಕನ್ನು ಹೊಂದಿದ್ದರೆ ಆ ಆಸ್ತಿ ಪಡೆದುಕೊಳ್ಳಲು ವೃತ್ತಿಪರ ವಕೀಲರ ಸಹಾಯ ಪಡೆದುಕೊಳ್ಳುವುದು ಉತ್ತಮವಾಗಿದೆ. ಇದರಿಂದ ನಿಮ್ಮ ಜಮೀನಿಗೆ ಸಂಬಂಧಪಟ್ಟ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ನೀವು ತಪ್ಪಿಸಿಕೊಳ್ಳಬಹುದು. ಹಾಗಾಗಿ ಯಾವುದೇ ಆಸ್ತಿಗೆ ಸಂಬಂಧಪಟ್ಟ ವಿಚಾರಗಳು ಇದ್ದಲ್ಲಿ ವಕೀಲರ ಸಹಾಯ ಪಡೆದು ನ್ಯಾಯಾಲಯದ ಮೂಲಕ ನ್ಯಾಯ Property Law ಪಡೆದುಕೊಳ್ಳುವುದು ಉತ್ತಮ ಮಾರ್ಗವಾಗಿದೆ.

Comments are closed.