Google Pay Loan: ಗೂಗಲ್ ಪೇನಲ್ಲಿ ಪೇಮೆಂಟ್ ಮಾತ್ರವಲ್ಲ, ಕ್ಷಣದಲ್ಲಿ ಪಡೆಯಬಹುದು ಸಾಲ, ಶ್ಯೂರಿಟಿ ಬೇಡ, ಬ್ಯಾಂಕ್ ಗೆ ಹೋಗೋದು ಬೇಡ!

Get personal Google Pay Loan: ದೇಶದ ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ ಒಂದು ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಗೂಗಲೇ ಮೂಲಕ ಸಣ್ಣ ವ್ಯಾಪಾರಿಗಳು ತಕ್ಷಣ ಸಾಲ ಪಡೆದುಕೊಳ್ಳಬಹುದು. ಇದು ವೈಯಕ್ತಿಕ ಸಾಲವಾಗಿರುತ್ತದೆ. ಇದನ್ನು ಪಡೆಯುವುದು ಹೇಗೆ? ಮರುಪಾವತಿ ಮಾಡುವುದು ಹೇಗೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

Get Google Pay Loan within minute without surety. Here are the Details.

ಸಣ್ಣ ವ್ಯಾಪಾರಿಗಳಾದ ಹಣ್ಣಿನ ವ್ಯಾಪಾರ ಮಾಡುವವರು, ಹೂವಿನ ವ್ಯಾಪಾರ ಮಾಡುವವರು, ಸಣ್ಣ ಸಣ್ಣ ಚಹದ ಅಂಗಡಿ ನಡೆಸುವವರು, ಬೀದಿಬದಿ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಇಂಡಿಯಾ ಸಂಸ್ಥೆಯ ಗೂಗಲ್ ಪೇ ಸಾಲ Google Pay Loan ನೀಡಲು ಮುಂದಾಗಿದೆ. ಇನ್ಮುಂದೆ ಸಣ್ಣ ಮಟ್ಟದ ಸಾಲ ನೀಡಲಾಗುತ್ತದೆ ಎಂದು ಅದು ತಿಳಿಸಿದೆ. ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್ಗಳಲ್ಲಿ ಒಂದಾಗಿರುವ ಜೀ ಪೇ ಸ್ಯಾಚೆಟ್ ಸಾಲ ನೀಡಲು ನಿರ್ಧರಿಸಿದೆ. ಸ್ಯಾಚೆಟ್ ಸಾಲ ಎಂದರೆ ನ್ಯಾನೋ-ಕ್ರೆಡಿಟ್ ಅಥವಾ ಬೈಟ್ ಗಾತ್ರದ ಸಾಲದ ಒಂದು ವಿಧವಾಗಿದೆ. ಇದು ತಕ್ಷಣದಲ್ಲಿ ಮಂಜೂರಿಯಾಗುತ್ತದೆ. ಈ ರೀತಿ ಸಾಲವನ್ನು ಹತ್ತು ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳ ವರೆಗೆ ಪಡೆದುಕೊಳ್ಳಬಹುದು. ಆದರೆ ಗೂಗಲ್ ಪೇನಲ್ಲಿ 15 ಸಾವಿರ ರೂ.ಗಳವರೆಗೆ ಪಡೆದುಕೊಳ್ಳಬಹುದು.

ಮರುಪಾವತಿ ಹೇಗೆ?:

ನೀವು ಗೂಗಲೇ ಪೇ ಬಳಸಿ 15 ಸಾವಿರ ರೂ. ಸಾಲ Google Pay Loan ಪಡೆದುಕೊಂಡರೆ ದಿನವೊಂದಕ್ಕೆ 111 ರೂ.ನಂತೆ ಮರುಪಾವತಿ ಮಾಡಬೇಕಾಗುತ್ತದೆ. ಇನ್ನು ಈ ಸಾಲ ನೀಡಲು ಜೀ ಪೇ ಡಿಎಂಐ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಂತ ಉದ್ಯೋಗ ಮಾಡಲು ಅಥವಾ ಅದರ ಸಂಕಷ್ಟ ಕಾಲಕ್ಕೆ ಈ ಹಣ ಸಹಾಯಕ್ಕೆ ಬರಲಿದೆ. ಇದರ ಜೊತೆ ಜೀ ಪೇ ಲೆಟರ್ ಸಹಭಾಗಿತ್ವದಲ್ಲಿ ಸಣ್ಣ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಸಕ್ರಿಯಗೊಳಿಸಲು ಇದು ಸಹಾಯ ಮಾಡುತ್ತದೆ.

ಜಿ ಪೇ ಕ್ರೆಡಿಟ್ ಲೈನ್ ಆರಂಭ:

ವ್ಯಾಪಾರಿಗಳು ವಸ್ತುಗಳನ್ನು ಪಡೆದುಕೊಳ್ಳಲು ಆನ್ಲೈನ್ (Online) ಅಥವಾ ಆಫ್ಲೈನ್ (Offline) ವಿತರಕರಲ್ಲಿ ಈ ಸಾಲವನ್ನು ಬಳಸಿ ವಸ್ತುಗಳನ್ನು ಕೊಂಡುಕೊಳ್ಳಬಹುದು. ಇದರ ಜೊತೆ ಜಿಪೇ ಈಗಾಗಲೇ ಐಸಿಐಸಿಐ ಬ್ಯಾಂಕ್ ಸಹಭಾಗಿತ್ವದಲ್ಲಿ ಯುಪಿಐ ಮೇಲೆ ಕ್ರೆಡಿಟ್ ಲೈನ್ ಪ್ರಾರಂಭಿಸಿದೆ. ಇನ್ನು ಎಕ್ಸಿಸ್ ಬ್ಯಾಂಕ್ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳನ್ನು Google Pay Loan ನೀಡಲು ಮುಂದಾಗಿದೆ. ಇದನ್ನು ಗೂಗಲ್ ಇಂಡಿಯಾಕ್ಕೂ ವಿಸ್ತರಿಸಿದೆ.

167 ಲಕ್ಷ ಕೋಟಿ ರೂ. ವ್ಯವಹಾರ:

ಗೂಗಲ್ ಪೇ ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 167 ಲಕ್ಷ ಕೋಟಿ ರೂ. ಮೌಲ್ಯದ ವ್ಯವಹಾರ ನಡೆಸಿದೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಅಂಬರೀಷ್ ಕೆಂಗೆ ಮಾಹಿತಿ ನೀಡಿದ್ದಾರೆ. ಈ ಸಾಲವನ್ನು ಪಡೆದುಕೊಳ್ಳಲು ವ್ಯಕ್ತಿಯ ಮಾಸಿಕ ಆದಾಯ 3೦ ಸಾವಿರ ರೂ.ಗಳಿಗಿಂತ ಕಡಿಮೆ ಇರಬೇಕು. ಈ ಸಾಲವನ್ನು ಎರಡು ಶ್ರೇಣಿಗಳಲ್ಲಿ ನೀಡಲಾಗುತ್ತದೆ. ಪಟ್ಟಣದ ಒಳಗೆ ವ್ಯವಹಾರ ಮಾಡುವವರು, ಪಟ್ಟಣದ ಹೊರಗೆ ಅಥವಾ ಗ್ರಾಮೀಣ ಭಾಗದಲ್ಲಿ ವ್ಯವಹಾರ ಮಾಡುವವರು ಎಂದು ವಿಭಾಗಿಸಿ ಸಾಲ Google Pay Loan ನೀಡಲಾಗುತ್ತದೆ ಎಂದು ಗೂಗಲ್ ಇಂಡಿಯಾ ಸಂಸ್ಥೆ ತಿಳಿಸಿದೆ.

Comments are closed.