Personal loan: ನೀವು ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕ್ ಬ್ಯಾಂಕ್ ಅಲೆಯುವುದೂ ಬೇಡ, ಅಧಿಕ ಬಡ್ದಿ ಕಟ್ಟುವುದು ಬೇಡ; ಇಲ್ಲಿ ಪಡೆದುಕೊಳ್ಳಿ ಅತಿ ಕಡಿಮೆ ಬಡ್ಡಿಗೆ ಸಾಲ!

How to get Personal loan without Interest:  ಪ್ರತಿಯೊಬ್ಬರು ದುಡಿಯುವುದು, ಉದ್ಯೋಗ ಮಾಡುವುದು ಎಲ್ಲವೂ ಜೀವನ ಕಟ್ಟಿಕೊಳ್ಳುವ ಸಲುವಾಗಿಯೇ. ಆದರೂ ಜೀವನದಲ್ಲಿ ಕೆಲವೊಂದು ಸಲ ನಮ್ಮ ಮಿತಿಗಿಂತ ಹೆಚ್ಚು ಹಣ ಖರ್ಚು ಮಾಡುವ ಸಂದರ್ಭ ಬಂದುಬಿಡುತ್ತದೆ. ಅಂತಹ ಸಂದರ್ಭದಲ್ಲಿ ಸಾಲ ಮಾಡುವುದು ಅನಿವಾರ್ಯವಾಗಿಬಿಡುತ್ತದೆ. ಇಲ್ಲದಿದ್ದಲ್ಲಿ ಆ ಪರಿಸ್ಥಿತಿಯಿಂದ ಪಾರಾಗಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನರು ವೈಯಕ್ತಿಕ ಸಾಲದ Personal loan ಮೊರೆ ಹೋಗುತ್ತಾರೆ. ಆದರೆ ವೈಯಕ್ತಿಕ ಸಾಲಕ್ಕೆ ಬಡ್ಡಿಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ತುರ್ತು ಸಂದರ್ಭದಲ್ಲಿ ನೀವು ಈಗ ನಾವು ಹೇಳುವ ಸಾಲ ಪಡೆದುಕೊಂಡರೆ ನಿಮಗೆ ಬಡ್ಡಿ ಪ್ರಮಾಣ ಕಡಿಮೆ ಇರುತ್ತದೆ. ಅದು ಯಾವುದು ಎಂದು ಈಗ ನೋಡೋಣ.

How to get Personal loan without Interest here are the details.

ನಿಮಗೆ ಒಂದು ವೇಳೆ ಸಾಲ ಬೇಕೇ ಬೇಕು ಎಂದಾದರೆ ಈಗ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನೀವು ವೈಯಕ್ತಿಕ ಸಾಲ ಪಡೆಯುವ ಬದಲು ಕಡಿಮೆ ಬಡ್ಡಿದರದ ಈ ಸಾಲವನ್ನು Personal loan ಪಡೆದುಕೊಳ್ಳುವುದು ಉತ್ತಮ. ಇದರಿಂದ ನಿಮ್ಮ ಜೇಬಿನ ಭಾರವು ಕಡಿಮೆ ಆಗಲಿದೆ.

ಸಾಲದ ಪ್ರಯೋಜನ ಪಡೆದುಕೊಳ್ಳಿ!

ಇಂದು ನಾವು ನಿಮಗೆ ಸಾಲದ ಸುಲಭ ವಿಕಲ್ಪಗಳನ್ನು ತಿಳಿಸಿಕೊಡುತ್ತೇವೆ. ಇದರಿಂದ ನೀವು ಚಿಂತೆ ಮಾಡುವುದು ಬೇಡ. ನೀವು ಚಿನ್ನದ ಮೇಲಿನ ಸಾಲ, ಠೇವಣಿ ಮೇಲಿನ ಸಾಲ ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡಗಳ ಮೇಲೂ ಸಾಲ ಪಡೆದುಕೊಳ್ಳಬಹುದು. ಈ ಸಾಲಗಳು ವೈಯಕ್ತಿಕ ಸಾಲಗಳಿಗೆ Personal loan ಹೋಲಿಸಿದರೆ ಕಡಿಮೆ ಬಡ್ಡಿದರ ಹೊಂದಿದೆ.

ಪಬ್ಲಿಕ್ ಪ್ರಾವಿಡೆಂಟ್ ಮೇಲಿನ ಸಾಲ (Loan on PF):

ನಿಮ್ಮ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಪಿಪಿಎಫ್ನಲ್ಲಿ ಹೂಡಿಕೆ ಮಾಡಿದ್ದರೆ ನೀವು ಈ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು ಪಿಪಿಎಫ್ ಮೇಲೆ ಹೂಡಿಕೆ ಮಾಡಿರುತ್ತಾರೆ. ಹಾಗಾಗಿ ಇದನ್ನು ಬಳಸಿಕೊಂಡು ನಿಮ್ಮ ತುರ್ತು ಹಣದ ಅವಶ್ಯಕತೆ ನೀಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ಪಿಪಿಎಫ್ ಖಾತೆ ಆರಂಭಿಸಿ ಒಂದು ವರ್ಷ ಕಳೆದಿರಬೇಕು. ನಿಮ್ಮ ಪಿಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎನ್ನುವುದರ ಆಧಾರದ ಮೇಲೆ ನಿಮಗೆ ಸಾಲ ನೀಡಲಾಗುತ್ತದೆ. ಈ ಸಾಲದ ಮೇಲೆ ಪ್ರಸ್ತುತ ವಾರ್ಷಿಕ ಶೇ. 7.1 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಈ ಮೊದಲು ಈ ಸಾಲಕ್ಕೆ ವಾರ್ಷಿಕ 8.1 ರಷ್ಟು ಬಡ್ಡಿದರ ವಿಧಿಸಲಾಗುತ್ತಿತ್ತು.

ಗೂಗಲ್ ಪೇನಲ್ಲಿ ಪೇಮೆಂಟ್ ಮಾತ್ರವಲ್ಲ, ಕ್ಷಣದಲ್ಲಿ ಪಡೆಯಬಹುದು Loan, ಶ್ಯೂರಿಟಿ ಬೇಡ, ಬ್ಯಾಂಕ್ ಗೆ ಹೋಗೋದು ಬೇಡ!

ಚಿನ್ನದ ಮೇಲಿನ ಸಾಲ (Gold Loan):

ನೀವು ಶೀಘ್ರವಾಗಿ ಹಾಗೂ ಕಡಿಮೆ ಬಡ್ಡಿದರದ ಸಾಲ ಪಡೆದುಕೊಳ್ಳಲು ಚಿನ್ನವನ್ನು ಬಳಕೆ ಮಾಡುವುದು ಅತ್ಯುತ್ತಮ ಉಪಾಯವಾಗಿದೆ. ನೀವು ವೈಯಕ್ತಿಕ ಸಾಲ ಪಡೆದುಕೊಳ್ಳುವ ಬದಲು ನಿಮ್ಮ ಬಳಿ ಇರುವ ಚಿನ್ನವನ್ನು ಅಡ ಇಟ್ಟು ಸಾಲ ಪಡೆದುಕೊಳ್ಳುವುದು ಒಳ್ಳೆಯದು. ಸ್ಟೇಟ್ ಬ್ಯಾಂಕ್ ಇಂಡಿಯಾದ ಪ್ರಕಾರ ನೀವು ಮೂರು ಲಕ್ಷ ರೂ. ಒಳಗಿನ ಚಿನ್ನದ ಮೇಲಿನ ಸಾಲಗಳಿಗೆ ಯಾವುದೇ ಸಂಸ್ಕರಣಾ ಶುಲ್ಕ ಪಾವತಿ ಮಾಡುವು ಅಗತ್ಯ ಇರುವುದಿಲ್ಲ. ಪ್ರಸ್ತುತ ಚಿನ್ನದ ಮೇಲಿನ ಸಾಲಕ್ಕೆ ವಾರ್ಷಿಕ ಶೇ. 8.7೦ ಬಡ್ಡಿದರ ವಿಧಿಸಲಾಗುತ್ತದೆ.

ಠೇವಣಿ ಮೇಲಿನ ಸಾಲ (Loan on deposits):

ನೀವು ಖಾತೆ ಹೊಂದಿರುವ ಬ್ಯಾಂಕ್ನಲ್ಲಿ ಹಣವನ್ನು ಠೇವಣಿಯಾಗಿ ಇಟ್ಟಿದ್ದರೆ ನೀವು ವಯಕ್ತಿಕ ಸಾಲ ಪಡೆಯುವ ಬದಲು ಈ ಠೇವಣಿ ಮೇಲೆ ಸಾಲ ಪಡೆದುಕೊಳ್ಳಬಹುದು. ನೀವು ಠೇವಣಿ ಇಟ್ಟಿರುವ ಹಣದ ಶೇ.9೦ ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಅಂದರೆ ನೀವು 1 ಲಕ್ಷ ರೂ. ಠೇವಣಿ ಇಟ್ಟಿದ್ದರೆ ನಿಮಗೆ 9೦ ಸಾವಿರ ರೂ.ಗಳ ವರೆಗೆ ಸಾಲ Personal loan ನೀಡಲಾಗುತ್ತದೆ. ಅಲ್ಲದೆ ಈ ಸಾಲಕ್ಕೆ ನೀವು ಯಾವುದೇ ರೀತಿಯ ಸಂಸ್ಕರಣಾ ಶುಲ್ಕ ಪಾವತಿ ಮಾಡುವುದು ಬೇಕಾಗಿಲ್ಲ.

Comments are closed.