Bajaj Loan: ಬಜಾಜ್ ಫೈನಾನ್ಸ್ ಕಂಪನಿಯ ಈ ಎರಡು ಸ್ಕಿಮ್ ಗಳ ಸಾಲಗಳನ್ನು ನೀಡದಂತೆ ನಿರ್ಬಂಧಿಸಿದ ಆರ್ ಬಿ ಐ; ಗ್ರಾಹಕರಿಗೆ ಉಂಟಾಗಲಿದೆ ನಷ್ಟ!?

Bajaj loan- Finance stopped these scheme Loan: ನಮ್ಮ ದೇಶದಲ್ಲಿ ಸಾಲವನ್ನು ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಿವೆ. ಇಷ್ಟೇ ಅಲ್ಲದೆ ಖಾಸಗಿ ಬ್ಯಾಂಕುಗಳು, ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಸಹ ಸಾರ್ವಜನಿಕರಿಗೆ ಸಾಲವನ್ನು ನೀಡುತ್ತವೆ. ಇವುಗಳ ಜೊತೆ ಹಲವಾರು ಪ್ರಸಿದ್ಧ ಸಂಸ್ಥೆಗಳು ಸಹ ಸಾಲ ಸೌಲಭ್ಯ ನೀಡುವ ಮೂಲಕ ಜನಮನ್ನಣೆ ಗಳಿಸಿವೆ. ಅಂತಹ ಸಂಸ್ಥೆಗಳಲ್ಲಿ ಬಜಾಜ್ ಸಂಸ್ಥೆಯ ಬಜಾಜ್ ಫೈನಾನ್ಸ್ (Finance) Bajaj Loan ಕೂಡ ಒಂದು. ಇದೀಗ ಆರ್ಬಿಐ ಇದರ ಎರಡು ಸ್ಕೀಂಗಳ ಮೇಲೆ ಸಾಲ ನೀಡದಂತೆ ನಿರ್ಬಂಧ ಹೇರಿದೆ.

Bajaj Finance stopped these scheme Loan here are the reasons.

ಎರಡು ಸ್ಕೀಂಗಳಲ್ಲಿ ಇನ್ಮುಂದೆ ಸಾಲ ಸಿಗಲ್ಲ:

ಭಾರತೀಯ ರಿಸರ್ವ ಬ್ಯಾಂಕ್ ಹಣಕಾಸಿನ ವಹಿವಾಟು ನಡೆಸುವ ಸಂಸ್ಥೆಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಅವುಗಳನ್ನು ಮೀರಿದರೆ ಅಂತಹ ಸಂಸ್ಥೆಗಳನ್ನೇ ನಿರ್ಬಂದಿಸಬಹುದು, ಅಥವಾ ಅ ಸಂಸ್ಥೆಗಳು ನೀಡುತ್ತಿರುವ ಸಾಲದ Bajaj Loan ಸ್ಕೀಂಗಳನ್ನು ನಿರ್ಬಂಧಿಸುವ ಅಧಿಕಾರ ಭಾರತೀಯ ರಿಸರ್ವ್ ಬ್ಯಾಂಕ್ಗೆ ಇರುತ್ತದೆ. ಇದೀಗ ಈ ಭಾರತೀಯ ರಿಸರ್ವ್ ಬ್ಯಾಂಕ್ ಬಜಾಜ್ ಫೈನಾನ್ಸ್ನ ಎರಡು ಸ್ಕೀಂಗಳಿಗೆ ನಿರ್ಬಂಧ ಹೇರಿದೆ.

ಬಜಾಜ್ ಫೈನಾನ್ಸ್ ಸಂಸ್ಥೆಯ ಇಕಾಂ ಹಾಗೂ ಇನ್ಸ್ಟಾ ಇಎಂಐ ಕಾರ್ಡ್ಗಳಿಗೆ ನಿರ್ಬಂಧ ಹೇರಲಾಗಿದೆ. ಆರ್ಬಿಐ ನವೆಂಬರ್ 15ರಿಂದ ಜಾರಿಗೆ ಬರುವಂತೆ ಈ ಆದೇಶ ನೀಡಿದೆ. ಈ ಎರಡು ಸ್ಕೀಂಗಳಲ್ಲಿ ಬಜಾಜ್ ಫೈನಾನ್ಸ್ ಸಂಸ್ಥೆಯು ಡಿಜಿಟಲ್ ಮಾರ್ಗಸೂಚಿಗಳನ್ನು ಮೀರಿ ಸಾಲ Bajaj Loan ನೀಡಿದ್ದು ಈ ರೀತಿಯ ನಿರ್ಬಂಧ ಹೇರಲು ಪ್ರಮುಖ ಕಾರಣವಾಗಿದೆ.

Google Pay ನಲ್ಲಿ ಪೇಮೆಂಟ್ ಮಾತ್ರವಲ್ಲ, ಕ್ಷಣದಲ್ಲಿ ಪಡೆಯಬಹುದು ಸಾಲ, ಶ್ಯೂರಿಟಿ ಬೇಡ, ಬ್ಯಾಂಕ್ ಗೆ ಹೋಗೋದು ಬೇಡ!

ನಿರ್ಬಂಧ ಹೇರಲು ಕಾರಣಗಳು:

 ಬಜಾಜ್ ಫೈನಾನ್ಸ್ ಸಂಸ್ಥೆಯು ಇಕಾಂ ಹಾಗೂ ಇನ್ಸ್ಟಾ ಇಎಂಐ  ಈ ಎರಡು ವಿಭಾಗದಲ್ಲಿ ಸಾಲ Bajaj Loan ನೀಡುವ ವೇಳೆ ಗ್ರಾಹಕರಿಗೆ ಕೆಲವೊಂದು ನಿಯಮಗಳನ್ನು ಮರೆಮಾಚಿತ್ತು. ಇದು ಭಾರತೀಯ ರಿಸರ್ವ ಬ್ಯಾಂಕ್ ನೀಡಿದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಇದನ್ನು ಬಜಾಜ್ ಫೈನಾನ್ಸ್ ಸಂಸ್ಥೆಯು ಸರಿಪಡಿಸಿಕೊಂಡರೆ ಅದು ಆರ್ಬಿಐಗೆ ಮನವರಿಕೆಯಾದರೆ ನಿರ್ಬಂಧ ತೆರವು ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಆರ್ಬಿಐ ತಿಳಿಸಿದೆ.

ಬಜಾಜ್ ಫೈನಾನ್ಸ್ ಸಂಸ್ಥೆಯ ಇನ್ಸ್ಟಾ ಇಎಂಐ ಅಡಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಬಳಕೆ ಮಾಡಿ ಶಾಪಿಂಗ್ ಮಾಡಿದಲ್ಲಿ ಅದು ಬಡ್ಡಿರಹಿತ ಇಎಂಐ ಆಗಿ ಪರಿವರ್ತನೆ ಆಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಪಾಲನೆ ಕಡ್ಡಾಯ:

ಆರ್ಬಿಐ ತನ್ನ ವ್ಯಾಪ್ತಿಯ ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಅದರ ಅನ್ವಯವೇ ಆ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು. ಅದನ್ನು ಉಲ್ಲಂಘಿಸಿದಲ್ಲಿ ಆರ್ಬಿಐ ಆ ಸಂಸ್ಥೆಯ ಲೈಸೆನ್ಸ್ ರದ್ದು ಮಾಡಬಹುದು, ನಿರ್ಬಂಧ ಹೇರಬಹುದು ಇಲ್ಲವೇ ದೊಡ್ಡ ಮೊತ್ತದ ದಂಡ ವಿಧಿಸುವ ಅಧಿಕಾರ ಹೊಂದಿರುತ್ತದೆ. ಈ ಹಿಂದೆಯು ಆರ್ಬಿಐ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.

Comments are closed.