UPI Lite: ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಇನ್ನಷ್ಟು ಸುಲಭ; ಪಿನ್ ನಂಬರ್ ಕೂಡ ಇಲ್ಲದೇ ಕ್ಷಣಮಾತ್ರದಲ್ಲಿ ಆಗುತ್ತೆ ಪೇಮೆಂಟ್!  

UPI Lite new version released by Google Pay:  ಇದೀಗ ಎಲ್ಲವೂ ಆನ್ಲೈನ್ ಮಯವಾಗಿದೆ. ಪ್ರತಿಯೊಂದು ಕೆಲಸವನ್ನು ಆನ್ಲೈನ್ ಮುಖಾಂತರ ಕುಳಿತಲ್ಲಿಯೇ ಮಾಡಬಹುದು. ಮನೆಗೆ ಬೇಕಾಗುವ ಕಿರಾಣಿ ಸಾಮಗ್ರಿಗಳು, ಊಟ, ತಿಂಡಿ, ಇಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಹೀಗೆ ಎಲ್ಲವನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿ ಬುಕ್ ಮಾಡಿ ತರಿಸಿಕೊಳ್ಳಬಹುದು. ಇದಕ್ಕೆ ಬ್ಯಾಂಕಿಂಗ್ ಕ್ಷೇತ್ರವೂ ಹೊರತಾಗಿಲ್ಲ. ಯುಪಿಐ ಬಳಸಿ ಹಣ ವರ್ಗಾವಣೆ ಮಾಡಬಹುದಾಗಿದೆ. ಯುಪಿಐ ಬಳಕೆ ಮಾಡಿ ಹಣ ವರ್ಗಾವಣೆ ಮಾಡಲು ಪೇಎಟಿಎಂ, ಫೋನ್ ಪೇ, ಭೀಮ್ ಸೇರಿದಂತೆ ಹಲವು ಅಪ್ಲಿಕೇಶನ್ಗಳು ಲಭ್ಯ ಇದೆ. ಇದರಲ್ಲಿ ಗೂಗಲ್ ಪೇ ಕೂಡ ಮುಖ್ಯವಾದುದು. ಇದೀಗ ಗೂಗಲ್ ಪೇ Google Pay ನಲ್ಲಿ ನೀವು ನಿಮ್ಮ ಸಿಕ್ರೆಟ್ ಕೋಡ್ ಬಳಸದೆ ಹಣ ವರ್ಗಾವಣೆ ಮಾಡಬಹುದು. ಅದು ಹೇಗೆ ಎಂದು ಈಗ ತಿಳಿದುಕೊಳ್ಳೋಣ.

UPI Lite new version released by Google Pay here are the Details

ಯುಪಿಐ ಲೈಟ್ (UPI Lite);

ನೀವು 2೦೦ ರೂ. ಒಳಗಿನ ವಹಿವಾಟನ್ನು ಯುಪಿಐ ಲೈಟ್ UPI Lite ಬಳಕೆ ಮಾಡುವುದರ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಅದನ್ನು ಬಳಸುವುದು ಹೇಗೆ? ದಿನಕ್ಕೆ ಗರಿಷ್ಟ ಎಷ್ಟು ಹಣ ವರ್ಗಾವಣೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಎನ್ ಪಿ ಸಿಐ (NPCI) ಸಂಸ್ಥೆಯು ನಿರ್ಮಾಣ ಮಾಡಿರುವ ಯುಪಿಐ ಲೈಟ್ UPI Lite ಫೀಚರ್ನ್ನು ಈಗಾಗಲೇ ಪೇಎಟಿಂ, ಫೋನ್ ಪೇ, ಭೀಮ್ ಅಪ್ಲಿಕೇಶನ್ಗಳು ಬಳಕೆ ಮಾಡುತ್ತಿವೆ. ಇದೀಗ ಈ ಸೌಲಭ್ಯವನ್ನು ಗೂಗಲ್ ಇಂಡಿಯಾ ಸಂಸ್ಥೆಯ ಗೂಗಲ್ ಪೇ ಸಹ ನೀಡಲು ಮುಂದಾಗಿದೆ. ಇದರಿಂದ ನೀವು ಯಾವುದೇ ಪಿನ್ ಎಂಟ್ರಿ ಮಾಡದೆ 2೦೦ ರೂ. ಒಳಗಿನ ಹಣ ವರ್ಗಾವಣೆ ಮಾಡಬಹುದಾಗಿದೆ. ಸಣ್ಣ ಮೊತ್ತದ ಹಣ ವರ್ಗಾವಣೆ ಮಾಡುವ ಸಲುವಾಗಿಯೇ ಈ ಅಪ್ಲಿಕೇಶನ್ ನಿರ್ಮಾಣ ಮಾಡಲಾಗಿದೆ. ಇದರಿಂದ ಹೊಟೇಲ್ಗಳಲ್ಲಿ, ತರಕಾರಿ ಅಂಗಡಿಗಳಲ್ಲಿ ಹೀಗೆ ಸಣ್ಣ ಸಣ್ಣ ಮೊತ್ತದ ಹಣ ವ್ಯವಹಾರ ಮಾಡುವಲ್ಲಿ ನಿಮಗೆ ಬಹಳ ಅನುಕೂಲವಾಗಲಿದೆ.

ಯುಪಿಐ ಲೈಟ್ನಲ್ಲಿ ಎಷ್ಟು ಹಣ ಡಿಫೋಸಿಟ್ ಮಾಡಬಹುದು?:

ಯುಪಿಐ ಲೈಟ್ ಅಪ್ಲಿಕೇಶನ್ನ ನಿಮ್ಮ ಖಾತೆಯಲ್ಲಿ ಗರಿಷ್ಟ ಎರಡು ಸಾವಿರ ರೂ.ವರೆಗೆ ನೀವು ಡಿಫೋಸಿಟ್ ಮಾಡಬಹುದು. ಆದರೆ ಒಂದು ಸಲ 2೦೦ ರೂ. ವರೆಗೆ ಮಾತ್ರ ವರ್ಗಾವಣೆ ಮಾಡಬಹುದು. ಅದಕ್ಕಿಂತ ದೊಡ್ಡ ಮೊತ್ತವಾಗಿದ್ದರೆ ನೀವು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಯುಪಿಐ ಲೈಟ್ UPI Lite ಅಪ್ಲಿಕೇಶನ್ ಬಳಸಿ ನೀವು ದಿನವೊಂದಕ್ಕೆ 4೦೦೦ ರೂ.ವರೆಗೆ ವರ್ಗಾವಣೆ ಮಾಡಬಹುದಾಗಿದೆ. ಒಂದು ರೀತಿಯಲ್ಲಿ ಇದು ನಿಮ್ಮ ಜೇಬಿನಲ್ಲಿ ಇರುವ ವ್ಯಾಲೆಟ್ನಂತೆ ಇದರ ಬಳಕೆ ಮಾಡಬಹುದು ಎಂದರೆ ತಪ್ಪಾಗುವುದಿಲ್ಲ.

ವ್ಯಾಲೆಟ್ ನಲ್ಲಿ ಸಾಮಾನ್ಯವಾಗಿ ಹೇಗೆ ದಿನಕೆ ಎಷ್ಟು ಬೇಕೋ ಅಷ್ಟನ್ನೆ ಇರಿಸಿಕೊಳ್ಳುತ್ತೇವೆಯೋ ಹಾಗೆ ಯುಪಿಐ ಲೈಟ್ ಬಳಕೆ ಮಾಡಬಹುದಾಗಿದೆ. ಯಾವುದೇ ಪಿನ್ ಎಂಟ್ರಿ ಮಾಡಬೇಕೆಂಬ ಕಿರಿಕಿರಿ ಇರುವುದಿಲ್ಲ. ಬಹಳ ಸುಲಭವಾಗಿ ಹಾಗೂ ವೇಗವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.

ಹೇಗೆ ಬಳಕೆ ಮಾಡುವುದು?:

ನೀವು ಅಂಗಡಿಗೆ ಹೋಗಿ ನಿಮಗೆ ಬೇಕಾದ ಸಾಮಗ್ರಿ ಕೊಂಡ ನಂತರ ಅಲ್ಲಿ ಇರುವ ಸ್ಕ್ಯಾನರ್ನಲ್ಲಿ ಸ್ಕ್ಯಾನ್ ಮಾಡಿದ ಮೇಲೆ ಯುಪಿಐ ಲೈಟ್ UPI Lite ಬಳಕೆ ಮಾಡಿ ಹಣವನ್ನು ವರ್ಗಾವಣೆ ಮಾಡಬಹುದು.

Comments are closed.