Without Interest Loan: ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಸಿಹಿಸುದ್ದಿ; ಸರ್ಕಾರ ನೀಡಲಿದೆ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ; ಮಹಿಳೆಯರಿಗೂ ಸಿಗುತ್ತೆ ಈಗಲೇ ಅರ್ಜಿ ಸಲ್ಲಿಸಿ!

Without Interest Loan for farmers: ರೈತರನ್ನು ಅನ್ನದಾತರೆಂದು ಕರೆಯುತ್ತಾರೆ. ರೈತರಿಲ್ಲದೆ ದೇಶ ನಡೆಯಲು ಸಾಧ್ಯವಿಲ್ಲ. ಹಾಗಾಗಿಯೇ ಆಳುವ ಸರ್ಕಾರಗಳು ರೈತರನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ತರುತ್ತವೆ. ರೈತರು ಸ್ವಾವಲಂಬಿ ಜೀವನ ನಡೆಸಬೇಕು. ರೈತರು ಯಾವಾಗಲೂ ಸಾಲಮುಕ್ತರಾಗಿಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿಯೇ ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರಿಗೆ 5 ಲಕ್ಷ ರೂ.ಗಳ ವರೆಗೆ ಬಡ್ಡಿರಹಿತ ಸಾಲ Without Interest Loan ನೀಡಲು ಮುಂದಾಗಿದೆ. ಹಾಗಾದ್ರೆ ಈ ಸಾಲ ಪಡೆಯಲು ಏನು ಮಾಡಬೇಕು? ಯಾರ್ಯಾರಿಗೆ ಈ ಸಾಲ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Without Interest Loan for farmers here are the Details:

ರೈತರಿಗೆ ಬಡ್ದಿ ರಹಿತ ಸಾಲದ ಲಭ್ಯತೆ;

ರಾಜ್ಯ ಸರ್ಕಾರವು 2023-24 ನೇ ಸಾಲಿನಲ್ಲಿ ಮೂರು ಲಕ್ಷ ಇರುವ ಬಡ್ಡಿ ರಹಿತ ಸಾಲದ Without Interest Loan ಮೊತ್ತವನ್ನು ಐದು ಲಕ್ಷ ರೂ.ಗೆ ಏರಿಕೆ ಮಾಡಿದೆ. ಇದರಿಂದ ರಾಜ್ಯದ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ ರೈತರು ಅಸಂಘಟಿತ ವಲಯದಿಂದ ಸಾಲ ಪಡೆಯುವುದು ತಪ್ಪಲಿದೆ. ರೈತರು ಸಾಮಾನ್ಯವಾಗಿ ಹೆಚ್ಚಿನ ಬಡ್ಡಿ ನೀಡುವ ಕಡೆಯಿಂದ ಯಾವುದೇ ಭದ್ರತೆ ನೀಡದೆ ಸಾಲ ಪಡೆಯುವುದು ಹೆಚ್ಚು. ಆದರೆ ಇದರಿಂದ ಸಾಲ ತೀರಿಸುವುದು ಕಷ್ಟಕರವಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವುದು ಉಂಟು. ಹಾಗಾಗಿ ಈ ಸಾಲ ರೈತರಿಗೆ ಬಹಳ ಅನುಕೂಲ ಮಾಡಿಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು.

3ಲಕ್ಷಕ್ಕೂ ಹೆಚ್ಚಿನ ರೈತರಿಗೆ ಅನುಕೂಲ:

ಈ ರೀತಿ 3 ಲಕ್ಷ ರೂ.ನಿಂದ 5 ಲಕ್ಷ ರೂ.ಗಳಿಗೆ ಬಡ್ಡಿರಹಿತ ಸಾಲದ ಮೊತ್ತವನ್ನು ಹೆಚ್ಚಿಸಿರುವುದರಿಂದ 3೦ ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗಿದೆ. ಈ ಬಡ್ಡಿ ರಹಿತ ಸಾಲ Without Interest Loan ನೀಡುವ ಯೋಜನೆಯಡಿ ಸುಮಾರು 25 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದರ ಜೊತೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆ ಅಡಿಯಲ್ಲಿ  1೦ ಸಾವಿರ ರೂ. ಹೆಚ್ಚುವರಿ ನೀಡಲು ನಿರ್ಧರಿಸಲಾಗಿದೆ. ಈ 1೦ ಸಾವಿರ ರೂ.ಗಳನ್ನು ರಾಜ್ಯ ಸರ್ಕಾರ ಹಾಗೂ ನಬಾರ್ಡ್ ಜಂಟಿಯಾಗಿ ವಿತರಣೆ ಮಾಡಲಿದೆ.

ಮಹಿಳೆಯರ ಅಭಿವೃದ್ಧಿಗೆ ಆದ್ಯತೆ:

ರಾಜ್ಯ ಸರ್ಕಾರವು ಈ ಬಾರಿ ಮಂಡಿಸಿದ ಬಜೆಟ್ನಲ್ಲಿ ರೈತ ಮಹಿಳೆಯರ ಜೀವನ ಮಟ್ಟ ಹೆಚ್ಚಿಸಲು ಆದ್ಯತೆ ನೀಡಿದೆ. ರಾಜ್ಯದ ಎಲ್ಲ ಜಮೀನು ರಹಿತ ಮಹಿಳೆಯರಿಗೆ ಶ್ರಮ ಶಕ್ತಿ ಯೋಜನೆ ಅಡಿಯಲ್ಲಿ Without Interest Loan ನೇರ ಅವರ ಖಾತೆಗೆ ವರ್ಗಾವಣೆ ಮಾಡಲು 5೦೦ ಕೋಟಿ ರೂ. ತೆಗೆದಿರಿಸಲಾಗಿದೆ.

Comments are closed.