Loan Repay: ಬ್ಯಾಂಕ್ ನಲ್ಲಿ ಸಾಲ ಮಾಡಿದ ವ್ಯಕ್ತಿ ಸತ್ತರೆ ಸಾಲ ತೀರಿಸುವ ಜವಾಬ್ದಾರಿ ಯಾರದ್ದು ಗೊತ್ತಾ? ಸುಖಾ ಸುಮ್ಮನೆ ಬ್ಯಾಂಕ್ ಕುಟುಂಬದವರಿಗೆ ತೊಂದರೆಕೊಡುವಂತಿಲ್ಲ!

Bank Loan Repay Responsibility: ಇದೀಗ ಜೀವನ ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ ಸಾಲ ಮಾಡುವುದು ಅನಿವಾರ್ಯವಾಗಿದೆ. ಬ್ಯಾಂಕುಗಳು ಸಹ ವಿವಿಧ ರೀತಿಯ ಸಾಲಗಳನ್ನು ನೀಡುತ್ತವೆ. ಸಾಲ ತೆಗೆದುಕೊಳ್ಳುವ ವೇಳೆ ಸಾಧನೆ ಮಾಡಿದೆ ಎನ್ನುವ ಉತ್ಸಾಹ ಇರುತ್ತದೆ. ಆದರೆ ಆ ಸಾಲವನ್ನು ಹಾಗೂ ಬಡ್ಡಿಯನ್ನು ಮರುಪಾವತಿ ಮಾಡುವ ವೇಳೆ ಯಾಕಾದರೂ ಸಾಲ ಮಾಡಿದೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಹೀಗೆ ಕೆಲವೊಬ್ಬರು ಸಾಲ ಮಾಡಿ ತೀರಿಸಲು ಸಾಧ್ಯವಿಲ್ಲ ಎನ್ನುವ ಭಯದಿಂದ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ. ಕೆಲವೊಮ್ಮೆ ಅಪಘಾತದಲ್ಲೋ, ಇನ್ಯಾವುದೋ ಕಾರಣದಿಂದ ಮೃತಪಟ್ಟಿಬಿಡುತ್ತಾರೆ. ಆಗ ಆ ಸಾಲವನ್ನು Bank Loan ತೀರಿಸುವ ಜವಾಬ್ದಾರಿ ಯಾರದ್ದು? ಯಾರ ಹೆಗಲಿಗೆ ಆ ಸಾಲ ವರ್ಗಾವಣೆ ಆಗುತ್ತದೆ ಎನ್ನುವ ಕುರಿತು ಮಾಹಿತಿ ತಿಳಿದುಕೊಳ್ಳೋಣ.

Who is responsible for paying the bank loan repay if the borrower dies?

ನಮ್ಮ ದೇಶದಲ್ಲಿರುವ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ವಿವಿಧ ಸ್ಕೀಂಗಳ ಅಡಿಯಲ್ಲಿ ಸಾಲ ನೀಡುತ್ತವೆ. ವೈಯಕ್ತಿಕ ಸಾಲ, ಕೃಷಿ ಸಾಲ, ಸ್ವ-ಉದ್ಯೋಗ ಆರಂಭಿಸುವ ಸಲುವಾಗಿ ಸಾಲ, ವಾಹನ ಖರೀದಿಗೆ ಸಾಲ ಹೀಗೆ ವಿವಿಧ ಕಾರಣಗಳಿಗೆ ಸಾಲವನ್ನು ನೀಡುತ್ತವೆ. ಯಾವುದೇ ರೀತಿಯ ಸಾಲ Bank Loan ನೀಡುವಾಗ ಅದಕ್ಕೆ ಸಂಬಂಧಿಸಿದ ನಿಯಮ ಪಾಲನೆ ಅನಿವಾರ್ಯ. ಹಾಗಾಗಿ ಸಾಲ ಪಡೆಯುವ ಮುನ್ನ ಯಾವ ಯಾವ ನಿಯಮಗಳಿವೆ ಎನ್ನುವುದನ್ನು ತಿಳಿದುಕೊಂಡಿರಬೇಕು.

ಸರ್ಕಾರ ನೀಡಲಿದೆ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ; ಮಹಿಳೆಯರಿಗೂ ಸಿಗುತ್ತೆ ಈಗಲೇ ಅರ್ಜಿ ಸಲ್ಲಿಸಿ!

ಕಠಿಣ ಕ್ರಮ:

ಸಾಲ ಪಡೆದ ವ್ಯಕ್ತಿಯು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡದಿದ್ದರೆ ಅಥವಾ ಮರುಪಾವತಿ ಮಾಡಲು ವಿಳಂಭ ಮಾಡಿದಲ್ಲಿ ಬ್ಯಾಂಕುಗಳು ಕಠಿಣ ಕ್ರಮ ಕೈಗೊಳ್ಳುತ್ತವೆ. ಆಕಸ್ಮಿಕವಾಗಿ ಸಾಲ Bank Loan ಮಾಡಿದ ವ್ಯಕ್ತಿ ಮೃತಪಟ್ಟರೆ ಯಾರು ಹೊಣೆಯಾಗುತ್ತಾರೆ ಎನ್ನುವುದರ ಮಾಹಿತಿ ಇಲ್ಲಿದೆ.

ಬ್ಯಾಂಕ್ ಸಾಲದ ನಿಯಮಗಳು:

ಬ್ಯಾಂಕುಗಳು ವಿವಿಧ ಸ್ಕೀಂಗಳ ಅಡಿಯಲ್ಲಿ ಸಾಲ ನೀಡುತ್ತವೆ. ಆದರೆ ಎಲ್ಲ ಸಾಲಗಳಿಗೂ ಒಂದೇ ನಿಯಮ ಅನ್ವಯ ಆಗುವುದಿಲ್ಲ. ಗೃಹ ಸಾಲ, ವಾಹನ ಸಾಲ ಸೆಕ್ಯೂರ್ಡ್ ಲೋನ್ ಆಗಿದ್ದಲ್ಲಿ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಇವುಗಳು ಅನ್ ಸಕ್ಯೂರ್ಡ್ ಲೋನ್ಗಳಾಗಿರುತ್ತವೆ.

ಗೃಹ ಸಾಲ (Home Loan):

ನೀವು ಜಾಯಿಂಟ್ ಎಕೌಂಟ್ ಮೂಲಕ ಸಾಲ ಪಡೆದುಕೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟರೆ ಇನ್ನೊಬ್ಬ ವ್ಯಕ್ತಿ ಆ ಸಾಲವನ್ನು ತೀರಿಸುವ ಹೊಣೆ ಹೊರಬೇಕಾಗುತ್ತದೆ. ಒಂದು ವೇಳೆ ಸಾಲ Bank Loan ಪಡೆದವರಿಗೆ ಸಾಲ ಮರುಪಾವತಿ ಸಾಧ್ಯವಾಗದಿದ್ದರೆ ಬ್ಯಾಂಕುಗಳು ಅವರು ಸಾಲದ ಭದ್ರತೆಗಾಗಿ ಇಟ್ಟಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿರುತ್ತವೆ.

Google Payನಲ್ಲಿ ಹಣ ವರ್ಗಾವಣೆ ಇನ್ನಷ್ಟು ಸುಲಭ; ಪಿನ್ ನಂಬರ್ ಕೂಡ ಇಲ್ಲದೇ ಕ್ಷಣಮಾತ್ರದಲ್ಲಿ ಆಗುತ್ತೆ ಪೇಮೆಂಟ್!  

ವಾಹನ ಸಾಲ (Vehicle Loan):

ವಾಹನ ಕೊಂಡುಕೊಳ್ಳಲು ಸಾಲ ಮಾಡಿದ ವ್ಯಕ್ತಿ ನಿಧನ ಹೊಂದಿದರೆ ಆತನ ಕುಟುಂಬದವರೇ ಆ ಸಾಲ ತೀರಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸಾಲ ಮರುಪಾವತಿ ಮಾಡಲು ಕುಟುಂಬದವರಿಗೆ ಬ್ಯಾಂಕ್  ಸಾಕಷ್ಟು ಸಮಯಾವಕಾಶ ನೀಡುತ್ತದೆ.ಆಗಲೂ ಸಾಲ ತಿರಿಸದಿದ್ದರೆ ಬ್ಯಾಂಕ್ ವಾಹನವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.

ವೈಯಕ್ತಿಕ ಸಾಲ (Personal Loan):

ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಂತಹ ಸಾಲ ಹೊಂದಿರುವ ವ್ಯಕ್ತಿ ಮೃತಪಟ್ಟರೆ ಬ್ಯಾಂಕುಗಳು ಅವರ ಕುಟುಂಬದವರನ್ನು ಕೇಳುವಂತಿಲ್ಲ. ಇದು ಅಸುರಕ್ಷಿತ ಸಾಲ ಆಗಿರುವುದರಿಂದ ಆ ಸಾಲವನ್ನು ಎನ್ಪಿಎಗೆ ಸೇರಿಸಲಾಗುತ್ತದೆ.

Comments are closed.