Free Two-wheeler: ಸರ್ಕಾರದಿಂದ ಸಿಗುತ್ತೆ ಉಚಿತ ದ್ವಿಚಕ್ರ ವಾಹನ; ಅರ್ಹರು ಇಂದೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ!

Free Two-wheeler Physically Handicapped People: ಒಂದು ರಾಜ್ಯದ ಸರ್ಕಾರ ನಡೆಸುವುದು ಎಂದರೆ ಸುಲಭದ ಮಾತಾಗುವುದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಮುಟ್ಟುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರವು ಮಹಿಳೆಯರು, ಬಡವರು, ಹಿಂದುಳಿದವರು, ದಲಿತರು, ದಮನಿತರು, ರೈತರು ಹೀಗೆ ವಿವಿಧ ವರ್ಗಗಳ ಜನರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ವಿಶೇಷ ಚೇತನರಿಗಾಗಿಯೂ ಹಲವು ಯೋಜನೆಗಳು ಜಾರಿಯಲ್ಲಿವೆ.

Free Two-wheeler Physically Handicapped People here are the details.

ವಿಶೇಷಚೇತನರು ಸಹ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿದ್ದಾರೆ. ಅವರು ಸಹ ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ವಿಶೇಷ ಚೇತನರಿಗಾಗಿ ಉಚಿತವಾಗಿ ಬೈಕ್ Free Two-wheeler ನೀಡಲು ತೀರ್ಮಾನಿಸಿದೆ. ಹಾಗಾದ್ರೆ ಈ ಯೋಜನೆ ಸೌಲಭ್ಯ ಪಡೆದುಕೊಳ್ಳುವುದು ಹೇಗೆ? ಯಾರ್ಯಾರು ಅರ್ಹರು ಎನ್ನುವ ಮಾಹಿತಿ ಇಲ್ಲಿದೆ.

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಚುನಾವಣಾ ಪೂರ್ವ ನೀಡಿದ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಕಷ್ಟು ಜನರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆ ಹಲವು ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಅಭಿವೃದ್ಧಿಗೆ ಆರ್ಥಿಕವಾಗಿ ಬಲ ತುಂಬಲಾಗುತ್ತಿದೆ. ಜನರ ಆರೋಗ್ಯ ರಕ್ಷಣೆಗಾಗಿಯೂ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ ದೈಹಿಕ ವಿಶೇಷ ಚೇತನರಿಗೆ ಸೌಲಭ್ಯ Free Two-wheeler ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಶೇಷಚೇತನರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಸಿಹಿ ಸುದ್ದಿ:

ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ಸಾಕಷ್ಟು ಜನರು ಇನ್ನೂ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷ ಚೇತನರು ಸಹ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅವರು ಯಾವುದೇ ಕೆಲಸ ಮಾಡಲು ಕುಟುಂಬದವರ ಸಹಕಾರ ಅಗತ್ಯ. ಹೀಗಾಗಿ ಅವರಿಗೆ ದೂರದ ಬಸ್ ಸ್ಟ್ಯಾಂಡ್ ಗೆಬಂದು ಬಸ್ ಹತ್ತಲು ಕಷ್ಟವಾಗಲಿದೆ ಎನ್ನುವುದನ್ನು ಅರಿತ ರಾಜ್ಯ ಸರ್ಕಾರವು ವಿಶೇಷ ಚೇತನರಿಗೆ ಬೈಕ್ Free Two-wheeler ನೀಡಲು ಮುಂದಾಗಿದೆ.

ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ:

ವಿಶೇಷ ಚೇತನರೂ ಸಹ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಬೇಕು. ಅವರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಆತ್ಮವಿಶ್ವಾಸ ತುಂಬಬೇಕು ಎನ್ನುವ ಉದ್ದೇಶದಿಂದ ಅವರಿಗೆ ದ್ವಿಚಕ್ರ ವಾಹನ Free Two-wheeler ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಶೇಷ ಚೇತನರಿಗೆ ನಾಲ್ಕು ಸಾವಿರ ಹೆಚ್ಚುವರಿ ಬೈಕ್ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಸುಮಾರು 36 ಕೋಟಿ ರೂ. ವೆಚ್ಚವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Comments are closed.