UPI ID: ಇನ್ನು ಮುಂದೆ ಮೊಬೈಲ್ ನಲ್ಲಿ ಜೀಪೇ, ಫೊನ್ ಪೇ, ಅಮೆಜಾನ್ ಪೇ ಬಳಸುವುದಿದ್ರೆ ಡಿ.31 ರ ಒಳಗೆ ಈ ಕೆಲಸ ಮಾಡಲೇಬೇಕು;ಇಲ್ಲದಿದ್ದರೆ ಕ್ಯಾನ್ಸಲ್ ಆಗುತ್ತೆ ಐಡಿ!

UPI ID new update:  ಈಗ ಎಲ್ಲ ಕೆಲಸವನ್ನು ನಾವು ಕುಳಿತಲ್ಲಿಯೇ ಮಾಡಬಹುದು. ನಮ್ಮ ದೇಶದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಇದೀಗ ಎಲ್ಲವೂ ಆನ್ಲೈನ್ನಲ್ಲಿಯೇ ನಡೆಯುತ್ತದೆ. ಬೆಳಗ್ಗಿನ ತಿಂಡಿ ತರಿಸುವುದರಿಂದ ಹಿಡಿದು ಬ್ಯಾಂಕ್ನ ಹಣ ವರ್ಗಾವಣೆವರೆಗೆ ಎಲ್ಲವೂ ಆನ್ಲೈನ್ ಆಗಿದೆ. ಹಣ ವರ್ಗಾವಣೆಗೆ ಯುಪಿಐ ಬಳಸಲಾಗುತ್ತದೆ. ಯುಪಿಐ ಕೂಡ ಜನಸ್ನೇಹಿ ನೀತಿಯಿಂದಾಗಿ ಎಲ್ಲರೂ ಬಳಸುವಂತಾಗಿದೆ. ಇದೀಗ ಇಂಟರ್ನೆಟ್ ಇಲ್ಲದೆಯೂ ನೀವು ಯುಪಿಐ ಬಳಕೆ ಮಾಡಿ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ ಈ ಯುಪಿಐ UPI ID ಹೊಸ ಅಪ್ಡೇಟ್ ನೀಡಿದ್ದು, ಡಿ 31 ರ ಒಳಗೆ ಎಲ್ಲರೂ ಈ ಕೆಲಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಯುಪಿಐ ಬಳಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.

UPI ID will be cancelled for not using from year.

ಯುಪಿಐನಿಂದ ಹೊಸ ಹೊಸ ಅಪ್ಡೇಟ್ ಆರಂಭ:

ಜನರು ಸಾಮಾನ್ಯವಾಗಿ ಹಣ ವರ್ಗಾವಣೆಗೆ ಜಿ ಪೇ, ಫೋನ್ ಪೇ, ಭಾರತ್ ಪೇ, ಪೇಟಿಎಂ, ಏರ್ಟೆಲ್ ಪೇ ಹೀಗೆ ಹಲವು ಅಪ್ಲಿಕೇಶನ್ ಬಳಕೆ ಮಾಡುತ್ತಾರೆ. ಈಗಾಗಲೇ ಎನ್ಪಿಸಿಐ ತನ್ನ ಬಳಕೆದಾರರಿಗೆ ಹಲವು ಹೊಸ ಫೀಚರ್ಗಳನ್ನು ನೀಡುತ್ತ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಯುಪಿಐ UPI ID ಪೇಮೆಂಟ್ನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಯುಪಿಐ ಬಳಕೆ ಮಾಡುವ ಪ್ರತಿಯೊಬ್ಬರು ಈ ನಿಯಮವನ್ನು ತಿಳಿದುಕೊಳ್ಳುವುದು ಮುಖ್ಯ.

ಸರ್ಕಾರದಿಂದ ಸಿಗುತ್ತೆ ಉಚಿತ Two wheeler; ಅರ್ಹರು ಇಂದೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ!

ಯುಪಿಐ ಐಡಿ ರದ್ದುಗೊಳಿಸಲು ಎನ್ಪಿಸಿಐ ನಿರ್ಧಾರ:

ಎನ್ಪಿಸಿಐ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ವರ್ಷಗಳಿಂದ ಬಳಕೆ ಮಾಡದ ಯುಪಿಐ ಐಡಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಒಂದು ವರ್ಷಗಳ ಕಾಲ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿಗಳನ್ನು UPI ID ನಿರ್ಭಂದಿಸಲಾಗುತ್ತಿದೆ. ಇ ಬಗ್ಗೆ ಎನ್ಪಿಸಿಐ ಜಿ ಪೇ, ಫೋನ್ ಪೇ, ಭಾರತ್ ಪೇ, ಪೇಟಿಎಂ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಡಿ.31ಒಳಗೆ ಒಂದಾದರೂ ವಹಿವಾಟು ನಡೆಸಿ:

ನೀವು ಯುಪಿಐ ಬಳಕೆ ಮಾಡಿ ಹಣ ವರ್ಗಾವಣೆ ಮಾಡುವ ಯಾವುದೇ ಅಪ್ಲಿಕೇಶನ್ ಹೊಂದಿದ್ದರೆ ಅದನ್ನು ಡಿ.31 ರ ಒಳಗೆ ಒಮ್ಮೆಯಾದರೂ ವಹಿವಾಟು ನಡೆಸಬೇಕು. ಇಲ್ಲದಿದ್ದರೆ ಅಂತಹ ಯುಪಿಐ ಐಡಿ UPI ID ಜನೇವರಿ 1ರಿಂದ ರದ್ದಾಗುತ್ತದೆ. ಅವರು ಮತ್ತೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

Comments are closed.