CIBIL Score: ಬ್ಯಾಂಕ್ ಲೋನ್ ಪಡೆಯಲು ಸಿಬಿಲ್ ಸ್ಕೋರ್ ಉತ್ತಮವಾಗಿರಲೇಬೇಕು; ಇದನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!
CIBIL Score is important for Loan: ಈಗ ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಯಾಕೆಂದರೆ ಎಲ್ಲವೂ ಆನ್ಲೈನ್ ಮೂಲಕವೇ ನಡೆಯುವುದರಿಂದ ಅದಕ್ಕೆ ಬ್ಯಾಂಕ್ ಖಾತೆ ಹೊಂದುವುದು ಅವಶ್ಯವಾಗಿದೆ. ಡಿಜಟಲೀಕರಣದ ಪರಿಣಾಮವಾಗಿ ಬಡವರು ಇಂದು ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಬ್ಯಾಂಕುಗಳು ಕಾಲಕ್ಕೆ ತಕ್ಕಂತೆ ತಮ್ಮ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತವೆ. ಮೊದಲೆಲ್ಲ ಜನರ ಆರ್ಥಿಕ ಸ್ಥಿತಿ ಅರಿತು ಸಾಲ ನೀಡಲಾಗುತ್ತಿತ್ತು. ಇದರಿಂದ ಬಡವರಿಗೆ ಸಾಲ ದೊರೆಯುವುದು ಕಷ್ಟವಾಗಿತ್ತು. ಈಗ ಹಾಗಿಲ್ಲ ನಿಮ್ಮ ಸಿಬಿಲ್ ಸ್ಕೋರ್ CIBIL Score ಅಥವಾ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ನಿಮಗೆ ಯಾವುದೇ ಬ್ಯಾಂಕ್ನಲ್ಲಿ ಸಾಲ ಆರಾಮವಾಗಿ ಸಿಗುತ್ತದೆ. ಈ ಕ್ರೆಡಿಟ್ ಸ್ಕೋರ್ ನೀವು ಹೆಚ್ಚಿಸಿಕೊಳ್ಳಲು ಅಥವಾ ಸರಿಯಾಗಿ ಇಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್ ನೋಡಿ.
CIBIL Score is important for Loan how to increase.
ಕ್ರೆಡಿಟ್ ಕಾರ್ಡ್ ನ್ನು ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಕ್ರೆಡಿಟ್ ಸ್ಕೋರ್ ಬಗ್ಗೆ ಹಲವರಿಗೆ ತಿಳಿದಿರುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರು ಹಾಗೂ ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಕ್ರೆಡಿಟ್ ಸ್ಕೋರ್ ಬಗ್ಗೆ ಮಾಹಿತಿ ಹೊಂದಿರಬೇಕು. ಹಾಗಾದರೆ ಕ್ರೆಡಿಟ್ ಸ್ಕೋರ್ CIBIL Score ಎಂದರೆ ಏನು? ಯಾಕಾಗಿ ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ಗೆ ಅಷ್ಟೊಂದು ಮಹತ್ವ ನೀಡುತ್ತವೆ ಎಂದು ತಿಳಿದುಕೊಳ್ಳಬೇಕು.
ಕ್ರೆಡಿಟ್ ಸ್ಕೋರ್ ಎಂದರೆ ಏನು?:
ನೀವು ಸಾಲ ಪಡೆದುಕೊಂಡಲ್ಲಿ ಅಥವಾ ನಿಮಗೆ ಸಾಲ ನೀಡಿದರೆ ಅದನ್ನು ಮರುಪಾವತಿ ಮಾಡುವ ಆರ್ಥಿಕ ಸಾಮರ್ಥ್ಯ ನಿಮಗಿದೆಯೇ ಇಲ್ಲವೋ ಎನ್ನುವುದನ್ನು ತಿಳಿಸುವುದೇ ಕ್ರೆಡಿಟ್ ಸ್ಕೋರ್. ಸಿಬಿಲ್ CIBIL Score ಸ್ಕೋರ್ ಮೂರು ಅಂಕಿಯ ಸಂಖ್ಯಾ ಪ್ರಾತಿನಿಧ್ಯ ಹೊಂದಿರುತ್ತದೆ. ನಮ್ಮ ದೇಶದಲ್ಲಿ ಸಿಬಿಲ್ ಸ್ಕೋರ್ 3೦೦ ರಿಂದ 9೦೦ ರವರೆಗೆ ಇರುತ್ತದೆ.
ಸರ್ಕಾರದಿಂದ ಸಿಗುತ್ತೆ ಉಚಿತ Two wheeler; ಅರ್ಹರು ಇಂದೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ!
ನೀವು ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದರೆ ಅದರಿಂದ ನಾನಾ ಪ್ರಯೋಜನಗಳಿವೆ. ಬ್ಯಾಂಕುಗಳು ನೀವು ಕೇಳಿದಾಗ ಸಾಲವನ್ನು ನೀಡುತ್ತವೆ. ಕ್ರೆಡಿಟ್ ಸ್ಕೋರ್ ೭೫೦ಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಅದನ್ನು ಉತ್ತಮ ಸಿಬಿಲ್ ಸ್ಕೋರ್ ಎಂದು ಕರೆಯಲಾಗುತ್ತದೆ. ಉತ್ತಮ ಸಿಬಿಲ್ ಸ್ಕೋರ್ CIBIL Score ಹೊಂದಿದ್ದರೆ ಸಾಲವನ್ನು ಅನುಮೋದಿಸುವದರ ಜೊತೆ ಸಾಲದಾತರೊಂದಿಗೆ ಕೈಗೆಟುವ ಬಡ್ಡಿದರ ಹಾಗೂ ಮರುಪಾವತಿ ಸೇರಿದಂತೆ ನಿಯಮಗಳು, ಷರತ್ತುಗಳ ಕುರಿತು ಮಾತುಕತೆ ನಡೆಸುವ ಅಧಿಕಾರ ಹೊಂದಿರುತ್ತದೆ. ನೀವು ಒಂದು ವೇಳೆ ಕಡಿಮೆ ಸಿಬಿಲ್ ಸ್ಕೋರ್ ಹೊಂದಿದ್ದರೆ ನಿಮಗೆ ಸಾಲ ಪಡೆಯುವ ವೇಳೆ ಅಧಿಕ ಬಡ್ಡಿದರ ವಿಧಿಸಲಾಗುತ್ತದೆ.
ಅಲ್ಲದೆ ಬ್ಯಾಂಕುಗಳು ನಿಮಗೆ ಸಾಲ ನೀಡಲು ಚಿಂತನೆ ನಡೆಸುತ್ತವೆ. ನೀವು ಬ್ಯಾಂಕಿಂಗ್ ವ್ಯವಹಾರದಲ್ಲಿ ಬ್ಯಾಂಕ್ನ ಜೊತೆ ಉತ್ತಮ ಒಡನಾಟ, ಸಾಲ ಮರುಪಾವತಿ, ಹಾಗೂ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಬ್ಯಾಂಕ್ನ ಮೂಲಕವೇ ನಡೆಸಿದರೆ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರುತ್ತದೆ. ಒಂದು ವೇಳೆ ಸ್ವಲ್ಪ ಕಡಿಮೆ ಇದ್ದರೂ ಬ್ಯಾಂಕುಗಳು ನಿಮಗೆ ಸಾಲ ನೀಡಲು ಹಿಂದೂ ಮುಂದು ಯೋಚನೆ ಮಾಡುವುದಿಲ್ಲ.
ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿ:
ನೀವು ಒಂದು ವೇಳೆ ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದರೆ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಅದರ ಬಿಲ್ನ್ನು ಸಕಾಲಕ್ಕೆ ಪಾವತಿ ಮಾಡಿ. ಇಎಂಐ ಮೂಲಕ ಪಾವತಿ ಮಾಡುವುದಿದ್ದರೂ ಸಹ ನಿಮಗೆ ತಿಳಿಸಿದ ದಿನಾಂಕದೊಳಗೆ ಪಾವತಿ ಮಾಡುವುದು ಉತ್ತಮ. ಇಲ್ಲದಿದ್ದರೆ ಇವು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ.
ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಸಿಹಿಸುದ್ದಿ; ಸರ್ಕಾರ ನೀಡಲಿದೆ 5 ಲಕ್ಷ ರೂ.ವರೆಗೆ without Interest Loan; ಮಹಿಳೆಯರಿಗೂ ಸಿಗುತ್ತೆ ಈಗಲೇ ಅರ್ಜಿ ಸಲ್ಲಿಸಿ!
ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ:
ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅದರ ಬಳಕೆಯನ್ನು ಕಡಿಮೆ ಮಾಡುವುದು ಒಳಿತು. ಕ್ರೆಡಿಟ್ ಕಾರ್ಡ್ ಸಿಕ್ಕಿದೆ ಎಂದು ಶಾಪಿಂಗ್ ಮಾಡಿದರೆ, ಅಥವಾ ಯಾವುದೋ ಬೇಡದ ಕಾರಣಕ್ಕೆ ಉಪಯೋಗಿಸಿದರೆ ಅದು ಸಹ ನಿಮ್ಮ ಸಿಬಿಲ್ ಸ್ಕೋರ್ಗೆ ಹೊಡೆತ ನೀಡುತ್ತದೆ. ನಿಮಗೆ ನೀಡಿರುವ ಕ್ರೆಡಿಟ್ ಕಾರ್ಡ್ ಲಿಮಿಟ್ನ ಶೇ.3೦ಕ್ಕಿಂತ ಕಡಿಮೆ ಬಳಕೆ ಮಾಡುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಸಹ ಚೆನ್ನಾಗಿರುತ್ತದೆ. ಜೊತೆಗೆ ನೀವು ಬಿಲ್ ಪಾವತಿ ಮಾಡುವುದೂ ಸಹ ಕಡಿಮೆ ಆಗುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ಆದಷ್ಟು ಕಡಿಮೆ ಮಾಡುವುದರ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬಹುದಾಗಿದೆ.
Comments are closed.