Business Loan: ಸ್ವಂತ ಉದ್ಯಮ ಆರಂಭಿಸಲು ಬಂಡವಾಳದ ಚಿಂತೆಯೇ ಬೇಡ, ಸರ್ಕಾರವೇ ಕೊಡುತ್ತೆ ಬಡ್ದಿರಹಿತ ಸಾಲ, ಇಂದೇ ಈ ಯೋಜನೆಗೆ ಲೋನ್ ಗೆ ಅಪ್ಲೈ ಮಾಡಿ!

Get Business Loan by Government: ಭಾರತವು ವಿಶ್ವದಲ್ಲಿಯೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭಾರತದಲ್ಲಿ ಇತ್ತಿಚಿನ ದಿನಗಳಲ್ಲಿ ಸ್ಟಾರ್ಟ್ಪ್, ಸ್ವಂತ ಉದ್ಯಮ ಆರಂಭಿಸುವತ್ತ ಯುವಕರು ತಮ್ಮ ಚಿತ್ತ ನೆಟ್ಟಿದ್ದಾರೆ. ಯಾವುದೋ ವಿದೇಶಿ ಕಂಪನಿಯಲ್ಲಿ ದುಡಿಯುವ ಬದಲು ತಾವೇ ಉದ್ಯಮ ಆರಂಭಿಸಿ ನಾಲ್ಕಾರು ಜನರಿಗೆ ಉದ್ಯೋಗ ನೀಡಲು ಮನಸ್ಸು ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಸಹ ಪ್ರೋತ್ಸಾಹ ನೀಡುತ್ತಿದೆ. ಸ್ವಂತ ಉದ್ಯಮ Business Loan ಆರಂಭಿಸುವವರ ಸಲುವಾಗಿಯೇ ೬ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಮಾಹಿತಿ ಇಲ್ಲಿದೆ.

Get Business Loan by Government here are the details

ಎಂಎಸ್ಎಂಇ ಸಾಲ ಯೋಜನೆ (MSME):

ಎಂಎಸ್ಎಂಇಗಳು ತಮ್ಮ ಕಾರ್ಯನಿರತ ಬಂಡವಾಳದ ಅಗತ್ಯಗಳನ್ನು ಪೂರೈಸಲು ಹಣಕಾಸಿನ ಸಹಕಾರ ನೀಡುತ್ತದೆ. ಕೇಂದ್ರ ಸರ್ಕಾರದ ಎಂಎಸ್ಎಂಇ ಸಾಲ ಯೋಜನೆಯಲ್ಲಿ ಹೊಸ ಉದ್ಯಮ ಸ್ಥಾಪನೆ ಮಾಡುವವರು ಅಥವಾ ಈಗಾಗಲೇ ಉದ್ಯಮ ಸ್ಥಾಪಿಸಿ ಅದರ ಅಭಿವೃದ್ಧಿಗಾಗಿ ಒಂದು ಕೋಟಿ ರೂ.ಗಳ ವರೆಗೆ ಸಾಲ Business Loan ಪಡೆಯಬಹುದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಿದಲ್ಲಿ 8-15 ದಿನಗಳ ಒಳಗೆ ನಿಮ್ಮ ಸಾಲ ಮಂಜೂರು ಮಾಡಲಾಗುತ್ತದೆ. ಒಂದು ವೇಳೆ ನೀವು ಸಲ್ಲಿಸಿದ ಅರ್ಜಿ ಸರಿಯಾಗಿಲ್ಲ ಎಂದಾದರೆ ಒಂದು ಗಂಟೆಯೊಳಗೆ ಅರ್ಜಿ ತಿರಸಕಾರ ಮಾಡಲಾಗುತ್ತದೆ.

ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ:

ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ& ಸ್ಮಾಲ್ ಎಂಟರ್ಫ್ರೈಸಸ್ ದೀರ್ಘಕಾಲದಿಂದ ಇರುವ ಎಂಎಸ್ಎಂಇಗಳಿಗೆ ಮೇಲಾಧಾರ ಉಚಿತ ಸಾಲಸೌಲಭ್ಯ ನೀಡುತ್ತವೆ. ಸಿಜಿಟಿಎಂಎಸ್ಇ ಯೋಜನೆ ಅಡಿಯಲ್ಲಿ ಯಾವುದೇ ಮೇಲಾಧಾರವಿಲ್ಲದೆ 1೦ ಲಕ್ಷ ರೂ.ಗಳ ವರೆಗೆ ಸಾಲ Business Loan ಪಡೆದುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ:

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಮಹಿಳೆಯರು ಸಹ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಹಾಗಾಗಿ ಮುದ್ರಾ ಯೋಜನೆ ಅಡಿಯಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಮೇಲಾಧಾರ ಉಚಿತ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಅಲ್ಲದೆ ನಿಮಗೆ ಸಾಲ ಮರುಪಾವತಿ ವಿಳಂಬವಾಗುವುದನ್ನು ಮೊದಲೆ ತಿಳಿಸಿದಲ್ಲಿ ನಿಮಗೆ ಹೆಚ್ಚಿನ ಸಮಯಾವಕಾಶ ನೀಡಲಾಗುತ್ತದೆ.

ಈ ಯೋಜನೆ ಅಡಿಯಲ್ಲಿ ಒಟ್ಟು ಮೂರು ವಿಭಾಗಗಳಲ್ಲಿ ಸಾಲ ನೀಡಲಾಗುತ್ತದೆ. ಮೊದಲನೆಯದು ಶಿಶು ಮುದ್ರಾ ಯೋಜನೆ: ಈ ಯೋಜನೆ ಅಡಿಯಲ್ಲಿ 5೦ ಸಾವಿರ ರೂ. ಒಳಗಿನ ಸಾಲವನ್ನು ಶೇ.1-2 ಬಡ್ಡಿದರದಲ್ಲಿ ನೀಡಲಾಗುತ್ತದೆ. ಎರಡನೆಯದು ಕಿಶೋರ್ ಮುದ್ರಾ ಯೋಜನೆ: ಈ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ಒಳಗಿನ ಸಾಲವನ್ನು ಶೇ.8.6೦-11.15ರ ಬಡ್ಡಿದರದಲ್ಲಿ ನೀಡಲಾಗುತ್ತದೆ. ಮೂರನೆಯದಾಗಿ ತರುಣ್ ಮುದ್ರಾ ಯೋಜನೆ: ಈ ಯೋಜನೆ ಅಡಿಯಲ್ಲಿ 1೦ ಲಕ್ಷ ರೂ. ವರೆಗಿನ ಸಾಲವನ್ನು ಶೇ. 11.15ರಿಂದ 2೦ ರಷ್ಟು ಬಡ್ಡಿದರದಲ್ಲಿ ನೀಡಲಾಗುತ್ತದೆ.

ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಂ:

ಇದು ಉದ್ಯಮಗಳಿಗೆ ಸರ್ಕಾರದ ಸಬ್ಸಿಡಿ ಕ್ರೆಡಿಟ್ ಆಗಿದ್ದು, ಕೈಗಾರಿಕೆಗಳಲ್ಲಿ ತಾಂತ್ರಿಕ ಪ್ರಗತಿಗೆ ಆರ್ಥಿಕ ಸಹಾಯ ಬಯಸುವವರು ಈ ಸಾಲ Business Loan ವನ್ನು ಬಳಸಿಕೊಳ್ಳಬಹುದಾಗಿದೆ.

ಇನ್ನು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ಯೋಜನೆ, ಮಾರ್ಕೆಟಿಂಗ್ ಅಸಿಸ್ಟೆಂಟ್ಸ್ ಸ್ಕೀಂ ಹಾಗೂ ಕ್ರೆಡಿಟ್ ಅಸಿಸ್ಟೆಂಟ್ಸ್ ಸ್ಕೀಂ ಅಡಿಯಲ್ಲಿಯೂ ನೀವು ಸ್ವಂತ ಉದ್ಯಮ ಆರಂಭಕ್ಕೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.