Get Loan: ಸೆಕಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಸಾಲ: ಕಡಿಮೆ ಬಡ್ದಿದರ, ಹೇಗೆ ಪಡೆಯೋದು ಗೊತ್ತಾ?

Get Loan for second hand car purchase: ಭಾರತವು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಹಾಗಾಗಿ ದೇಶದ ಜನರ ಆರ್ಥಿಕ ಸ್ಥಿತಿಗತಿಗಳು ಕೂಡ ಸುಧಾರಿಸುತ್ತಿದೆ. ಮೊದಲೆಲ್ಲ ಕಾರು, ಬೈಕ್ ಎನ್ನುವುದು ಶ್ರೀಮಂತರ ಸ್ವತ್ತಾಗಿತ್ತು. ಆದರೆ ಈಗ ಹಾಗಿಲ್ಲ ಪ್ರತಿಯೊಬ್ಬರು ವಾಹನ ಹೊಂದಿರುತ್ತಾರೆ. ಅದೊಂದು ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿಲ್ಲ. ಆದರೂ ವಾಹನ ಖರೀದಿ ವೇಳೆ ಲೋನ್ ಮಾಡುವುದು ಸಾಮಾನ್ಯ. ಹೊಸ ಕಾರು ಖರೀದಿಗೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಸಾಲ ನೀಡುತ್ತಿದ್ದವು. ಇದೀಗ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಾಲ Get Loan ನೀಡಲು ಮುಂದಾಗಿವೆ.

Get Loan for second hand car purchase here are the bank names.

ಇದೀಗ ನಮ್ಮ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಜೋರಾಗಿದೆ. ಆರೆಂಟು ಲಕ್ಷ ರೂ.ಗಳನ್ನು ನೀಡಿ ಹೊಸ ಕಾರು ಖರೀದಿಸುವ ಬದಲು ಒಂದೆರಡು ಲಕ್ಷ ರೂ.ಗಳಿಗೆ ಅದೇ ಕಾರು ಸೆಕೆಂಡ್ ಹ್ಯಾಂಡ್ ಸಿಗುತ್ತವೆ. ಹಾಗಾಗಿ ಹೆಚ್ಚಿನ ಜನರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಚ್ಚಿಸುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹಲವಾರು ಬ್ಯಾಂಕುಗಳು ಸಾಲ ನೀಡುತ್ತಿವೆ. ಅದು ಕಡಿಮೆ ಬಡ್ಡಿದರದಲ್ಲಿ. ಹಾಗಾದರೆ ಯಾವ ಯಾವ ಬ್ಯಾಂಕುಗಳು ಸಾಲ Get Loan ನೀಡುತ್ತವೆ? ಬಡ್ಡಿದರ ಎಷ್ಟಿದೆ ಎಂದು ತಿಳಿದುಕೊಳ್ಳೊಣ.

ಇತ್ತೀಚಿನ ದಿನಗಳಲ್ಲಿ ಕಾರುಗಳ ದರದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ಹೊಸ ಕಾರು ಕೊಂಡುಕೊಳ್ಳುವ ಆರ್ಥಿಕ ಶಕ್ತಿ ಇಲ್ಲದಿರುವುದರಿಂದ ಅವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ. ಇದರಿಂದಲೇ ನಮ್ಮ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಗಣನೀಯವಾಗಿ ಬೆಳೆಯುತ್ತಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕುಗಳಿಗೆ ಖುದ್ದಾಗಿ ತೆರಳಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ಆನ್ಲೈನ್ ಮೂಲಕವೂ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಕೆಲವೊಂದು ಬ್ಯಾಂಕುಗಳು ಮೂರು ವರ್ಷಗಳಿಗಿಂತ ಹಳೆಯ ಕಾರುಗಳ ಖರೀದಿಗೆ ಸಾಲ ನೀಡುತ್ತಿಲ್ಲ. ಆದ್ದರಿಂದ ನೀವು ಖರೀದಿ ಮಾಡುವ ಕಾರಿಗೆ ಯಾವ ಬ್ಯಾಂಕ್ನಲ್ಲಿ ಸಾಲ ಸಿಗಬಹುದು ಎಂದು ವಿಚಾರಿಸಿಕೊಂಡು ಆಮೇಲೆ ಅರ್ಜಿ ಸಲ್ಲಿಸುವುದು ಒಳಿತು. ಇಲ್ಲದಿದ್ದರೆ ನೀವು ಸಾಲ Get Loan ಮಂಜೂರಾತಿ ಆಗುತ್ತದೆ ಎನ್ನುವ ಆಸೆಯಿಂದ ಅರ್ಜಿ ಸಲ್ಲಿಸಿ ಅಲ್ಲಿ ಮತ್ತೆ ನಿರಾಸೆಯಾದರೆ ನಿಮ್ಮ ಕುಟುಂಬದವರು ಬೇಸರಿಸಿಕೊಳ್ಳುತ್ತಾರೆ. ಹಾಗಾಗಿ ಮುಂಚೆಯೇ ವಿಚಾರಿಸಿಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಿ.

ಹೊಸ ಕಾರು ಸಾಲಕ್ಕೂ ಸೆಕೆಂಡ್ ಹ್ಯಾಂಡ್ ಕಾರು ಸಾಲಕ್ಕೂ ಇರುವ ವ್ಯತ್ಯಾಸ:

ಹೊಸ ಕಾರು ಖರೀದಿಸುವ ಸಾಲಕ್ಕೆ ಹೋಲಿಸಿದರೆ ಹಳೆ ಕಾರು ಖರೀದಿಸುವ ಸಾಲಕ್ಕೆ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ. ಜೊತೆಗೆ ಲೋನ್ ಟೂ ವ್ಯಾಲ್ಯೂ ಅಂದರೆ ಕಾರಿನ ಮೌಲ್ಯ ಹಾಗೂ ಸಾಲದ ಹಣದ ನಡುವಿನ ಅನುಪಾತ ಕಡಿಮೆ ಇರುತ್ತದೆ. ನೀವು ಯಾವ ಕಾರು ಕೊಂಡುಕೊಳ್ಳಲು ಇಚ್ಚಿಸಿದ್ದೀರಿ ಎನ್ನುವುದರ ಮೇಲೆ ಸಾಲ ಮಂಜೂರು ಮಾಡಲಾಗುತ್ತದೆ. ಗರಿಷ್ಟ ಐದು ವರ್ಷಗಳ ಅವಧಿಯ ವರೆಗೆ ನೀವು ಸಾಲ ಪಡೆದುಕೊಳ್ಳಬಹುದು.

ಯಾವ ಯಾವ ಬ್ಯಾಂಕುಗಳು ಸಾಲ ನೀಡುತ್ತವೆ?:

ಕೋಟಕ್ ಮಹೇಂದ್ರ ಬ್ಯಾಂಕ್: ಈ ಬ್ಯಾಂಕ್ ಹೊಸ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಎರಡಕ್ಕೂ ಸಾಲ Get Loan ನೀಡುತ್ತವೆ.

ಕೆನರಾ ಬ್ಯಾಂಕ್ : ಈ ಬ್ಯಾಂಕ್ನಲ್ಲಿ ನೀವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಅರ್ಜಿ ಸಲ್ಲಿಸಿದರೆ ನಿಮಗೆ ಶೇ.8.9ರಿಂದ 9.9೦ ವರೆಗೆ ಬಡ್ಡಿದರ ವಿಧಿಸಲಾಗುತ್ತದೆ.

ಬ್ಯಾಂಕ್ ಆಫ್ ಬರೋಡಾ: ಈ ಬ್ಯಾಂಕ್ನಲ್ಲಿ ನೀವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗಾಗಿ ಅರ್ಜಿ ಸಲ್ಲಿಸಿದರೆ ನಿಮ್ಮ ಸಿಬಿಲ್ ಸ್ಕೋರ್ ಆಧರಿಸಿ ಶೇ.8.45 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.

Comments are closed.