Personal Loan: ಈ ಬ್ಯಾಂಕ್ ನಲ್ಲಿ ಯಾವ ಅಡಮಾನ ಇಲ್ಲದಿದ್ರೂ ಸಿಗುತ್ತೆ ಸಾಲ; ಸಾಲ ಪಡೆಯಲು ಇದೊಂದೇ ದಾಖಲೇ ಸಾಕು. ಕೂಡಲೇ ಅಪ್ಲೈ ಮಾಡಿ!
Get Personal Loan IndusInd Bank: ಇಂದಿನ ದಿನಮಾನದಲ್ಲಿ ಸಾಲ ಮಾಡದೆ ಬದುಕುವುದು ಕಷ್ಟಸಾಧ್ಯ. ಖರ್ಚು ಅಷ್ಟರ ಮಟ್ಟಿಗೆ ಹೆಚ್ಚಾಗಿದೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಲ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಈ ಸಾಲದ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಕೆಲವೊಮ್ಮೆ ಶೀಘ್ರವಾಗಿ ದುಡ್ಡು ಬೇಕಾಗಿರುತ್ತದೆ. ಮಕ್ಕಳ ಶಾಲಾ ಫೀಸು ಕಟ್ಟಲು, ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಹೀಗೆ ಹಲವು ಬಾರಿ ದುಡ್ಡಿನ ಅವಶ್ಯಕತೆ ಶೀಘ್ರವಾಗಿ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬೇಗ ಸಾಲ ನೀಡುವ ಹಾಗೂ ಯಾವುದೇ ಹೆಚ್ಚಿನ ಭದ್ರತೆ ಪಡೆಯದೆ ಸಾಲ ನೀಡುವವರ ಅವಶ್ಯಕತೆ ಇದೆ. ಇದನ್ನು ಮನಗಂಡ ಇಂಡಸ್ ಬ್ಯಾಂಕ್ ಯಾವುದೇ ಹೆಚ್ಚಿನ ಭದ್ರತೆ ಇಲ್ಲದೆ ವೈಯಕ್ತಿಕ ಸಾಲ Personal Loan ನೀಡಲು ಮುಂದಾಗಿದೆ.
How to Get Personal Loan IndusInd Bank, here are the details
ವೈಯಕ್ತಿಕ ಸಾಲವು ಅಸುರಕ್ಷಿತ ಸಾಲದ ವಿಭಾಗದಲ್ಲಿ ಬರುತ್ತದೆ. ಹಾಗಾಗಿ ಇದಕ್ಕೆ ಹೆಚ್ಚಿನ ಭದ್ರತೆ ನೀಡುವ ಅವಶ್ಯಕತೆ ಇಲ್ಲ. ಆದರೆ ನಿಮ್ಮ ಸಿಬಿಲ್ ಸ್ಕೋರ್ ಮಾತ್ರ ಚೆನ್ನಾಗಿರಬೇಕು. ಅಂದಾಗ ಮಾತ್ರ ನೀವು ಕೇಳಿದಷ್ಟು ಸಾಲವನ್ನು Personal Loan ಶೀಘ್ರವಾಗಿ ಮಂಜೂರು ಮಾಡಲಾಗುತ್ತದೆ.
1-6 ವರ್ಷ ಅವಧಿಯ ಸಾಲ:
ನೀವು ಇಂಡಸ್ ಬ್ಯಾಂಕ್ನಲ್ಲಿ (IndusInd Bank) ಖಾತೆ ಹೊಂದಿದ್ದು, ನಿಮಗೆ ಹಣದ ಅವಶ್ಯಕತೆ ಬಿದ್ದಲ್ಲಿ ನೀವು ವೈಯಕ್ತಿಕ ಸಾಲ Personal Loan ಪಡೆದುಕೊಳ್ಳಬಹುದು. ನಿಮ್ಮ ದಾಖಲೆಗಳ ದಸ್ತಾವೇಜಿಕರಣ, ಪ್ರೋಸೆಸಿಂಗ್ ಫೀಸ್ (Processing Fee)ತೇಜ್ ವಿತರಣೆ ಜೊತೆಗೆ ಸಾಲ ವಿತರಿಸಲಾಗುತ್ತದೆ. ನಿಮಗೆ ಒಂದು ವೇಳೆ ಬ್ಯಾಂಕ್ಗೆ ಖುದ್ದಾಗಿ ಬರಲು ಸಾಧ್ಯವಾಗುವುದಿಲ್ಲ ಎಂದಾದರೆ ಬ್ಯಾಂಕ್ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ದಾಖಲೆಗಳನ್ನು ತೆಗೆದುಕೊಂಡು ಸಾಲ ಮಂಜೂರು ಮಾಡುತ್ತಾರೆ.
ಸೆಕಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ Loan: ಕಡಿಮೆ ಬಡ್ದಿದರ, ಹೇಗೆ ಪಡೆಯೋದು ಗೊತ್ತಾ?
ಬಡ್ಡಿದರ ಎಷ್ಟು?:
ಇಂಡಸ್ ಬ್ಯಾಂಕ್ನಲ್ಲಿ ನೀಡುವ ವೈಯಕ್ತಿಕ ಸಾಲ Personal Loan ಕ್ಕೆ ಶೇ.1೦.49 ರಷ್ಟು ಬಡ್ಡಿ (Interest) ವಿಧಿಸಲಾಗುತ್ತದೆ. ಆದರೆ ಬ್ಯಾಂಕ್ನೊಟ್ಟಿಗೆ ನಿಮ್ಮ ವ್ಯವಹಾರ ಚೆನ್ನಾಗಿದ್ದು, ನಿಮ್ಮ ಸಿಬಿಲ್ ಸ್ಕೋರ್ (CIBIL Score) ಸಹ 75೦ಕ್ಕೂ ಹೆಚ್ಚಿನ ಪಾಯಿಂಟ್ ಹೊಂದಿದ್ದರೆ ಇದಕ್ಕೂ ಕಡಿಮೆ ಬಡ್ಡಿದರದಲ್ಲಿ ನಿಮಗೆ ಸಾಲ ಸಿಗುತ್ತದೆ.
ಇಂಡಸ್ ಬ್ಯಾಂಕ್ ಸಾಲದ ವಿಶೇಷತೆಗಳು:
- ನೀವು ಯಾವುದೇ ಪ್ರಕಾರದ ವೈಯಕ್ತಿಕ ಸಾಲವನ್ನು ಇಂಡಸ್ ಬ್ಯಾಂಕ್ನಲ್ಲಿ ನೀಡಲಾಗುತ್ತದೆ.
- ಸಾಲ ಮರುಪಾವತಿಗೆ 1ರಿಂದ 6 ವರ್ಷಗಳ ಅವಧಿ ನೀಡಲಾಗುತ್ತದೆ.
- ಕಡಿಮೆ ಭದ್ರತೆ ಪಡೆದು ಸಾಲ ನೀಡಲಾಗುತ್ತದೆ.
- ನೀವು ಆನ್ಲೈನ್ ಅಥವಾ ಬ್ಯಾಂಕ್ಗೆ ಬಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
- ನೀವು ಪಡೆಯುವ ಸಾಲಕ್ಕೆ ಶೇ.3 ರಷ್ಟು ಪ್ರೊಸೆಸಿಂಗ್ ಫೀ ತೆಗೆದುಕೊಳ್ಳಲಾಗುತ್ತದೆ.
ಸಾಲ ಪಡೆದುಕೊಳ್ಳಲು ಬೇಕಾದ ಅರ್ಹತೆಗಳು:
ಸಾಲ ಪಡೆದುಕೊಳ್ಳುವ ವ್ಯಕ್ತಿಯು 21 ವರ್ಷ ಮೇಲ್ಪಟ್ಟು 6೦ ವರ್ಷದ ಒಳಗಿನವರಾಗಿರಬೇಕು.
ಸಾಲ ಪಡೆದುಕೊಳ್ಳುವ ವ್ಯಕ್ತಿಯ ಮಾಸಿಕ ಆದಾಯ 25 ಸಾವಿರ ರೂ.ಗಿಂತ ಅಧಿಕ ಇರಬೇಕು.
ವ್ಯಕ್ತಿಯು ಬ್ಯಾಂಕ್ಗೆ ನೀಡಿದ ವಿಳಾಸದಲ್ಲಿ ಕನಿಷ್ಠ ಎರಡು ವರ್ಷಗಳಿಂದ ವಾಸವಾಗಿರಬೇಕು.
ನಿವ್ವಳ ಆದಾಯ 4.8 ಲಕ್ಷ ರೂ. ಆಗಿರಬೇಕು.
ವಯಕ್ತಿಕ ಸಾಲಕ್ಕೆ ಇಂಡಿಸ್ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಲು https://www.indusind.com/in/en/personal.html ಈ ಲಿಂಕ್ ಕ್ಲಿಕ್ ಮಾಡಿ.
Comments are closed.