Loan for Women: ಯಾರಿಗೂ ತಿಳಿದಿರದ, ಮಹಿಳೆಯರಿಗಾಗಿಯೇ ಆರಂಭವಾಗಿರುವ ಸಾಲ ಯೋಜನೆ; ಕಡಿಮೆ ಬಡ್ಡಿಯಲ್ಲಿ ಒಂದು ಕೋಟಿ ರೂ. ವರೆಗೆ ಸಾಲ; ಇಂದೇ ಅಪ್ಲೈ ಮಾಡಿ!

Central Government Released Loan for Women: ಪುರುಷರು ಮಾತ್ರವಲ್ಲ ಹೆಣ್ಣು ಮಕ್ಕಳು ಕೂಡ ಸ್ವಾವಲಂಬಿ ಜೀವನ ನಡೆಸಬಹುದು. ಅದರಲ್ಲೂ ಆರ್ಥಿಕವಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂದರೆ ಸರ್ಕಾರದಿಂದ ಸಿಗುವಂತಹ ಕೆಲವು ಯೋಜನೆಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಹೊಸ ಹೊಸ ಸಾಲ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಕೆಲವು ಅತಿ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲಗಳಾಗಿದ್ದರೆ ಇನ್ನೂ ಕೆಲವು ಬಳಿಗೆ ಬಡ್ಡಿಯೇ ಇಲ್ಲದೆ ಸಾಲ ಹಣವನ್ನು ನೀಡಲಾಗುತ್ತದೆ ಜಾರಿಯಾಗಿರುವ ಕೆಲವು ಮಹಿಳಾ ಸಾಲ Loan for Women ಯೋಜನೆಗಳು ಇಂತಿವೆ.

Central Government Released Loan for Women here are the Details.

ಮಹಿಳೆಯರಿಗಾಗಿ 2023ರಲ್ಲಿ ಕೆಲವು ಯೋಜನೆಗಳು ಜಾರಿಕೊಂಡಿದ್ದು ಈ ಸಲ ಯೋಜನೆಗಳು 2024 ರಿಂದ ಮಹಿಳೆಯರ ಕೈ ಸೇರಲಿವೆ. ಕೆಲವು ಸ್ಕಿಮ್ ಗಳಲ್ಲಿ 50,000ಗಳನ್ನ ಸಾಲವಾಗಿ ಪಡೆದರೆ ಇನ್ನೂ ಕೆಲವು ಸ್ಕೀಮ್ಗಳಲ್ಲಿ ಹೆಣ್ಣು ಮಕ್ಕಳು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಲು ಒಂದು ಕೋಟಿಯವರೆಗೂ ಕೂಡ ವ್ಯಾಪಾರ ಸಾಲ (Business loan) ವನ್ನು ಪಡೆದುಕೊಳ್ಳಬಹುದು. ಇದು ಸರ್ಕಾರಿ ಸಾಲವಾಗಿದ್ದು ಯಾವುದೇ ರೀತಿಯ ಅಪಾಯವು ಇರುವುದಿಲ್ಲ ಜೊತೆಗೆ ಬಡ್ಡಿಯೂ ಕಡಿಮೆ ಇರುತ್ತದೆ. ನೀವು ಯಾವುದೇ ರೀತಿಯ ಸಾಲ ಯೋಜನೆಯನ್ನು Loan for Women ತೆಗೆದುಕೊಳ್ಳುತ್ತಿದ್ದರು ಸಬ್ಸಿಡಿ,(Subsidy)  ಕಡಿಮೆ ಬಡ್ಡಿದರ (Less Interest) ನಿಗದಿಪಡಿಸಲಾಗಿದ್ದು ನೀವು 10000 ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಮಹಿಳೆಯರು ಯಾವ ಯೋಜನೆಯಲ್ಲಿ ಯಾವ ರೀತಿಯ ಬಡ್ಡಿ ದರದಲ್ಲಿ ಸಾಲು ಸೌಲಭ್ಯ ಪಡೆದುಕೊಳ್ಳಬಹುದು ನೋಡೋಣ.

 ಸೆಕಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ Loan: ಕಡಿಮೆ ಬಡ್ದಿದರ, ಹೇಗೆ ಪಡೆಯೋದು ಗೊತ್ತಾ?

  • ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (PMMY) – ಸಾಲದ ಮೊತ್ತ – 10 ಲಕ್ಷದವರೆಗೆ; ಬಡ್ಡಿ- 8% -12%
  • ಸೇಂಟ್ ಕಲ್ಯಾಣಿ ಮಹಿಳಾ ಸಾಲ ಯೋಜನೆ- ಸಾಲದ ಮೊತ್ತ -1 ಕೋಟಿ ವರೆಗೆ; ಬಡ್ಡಿ-8.70% – 8.95%
  • ಮಹಿಳಾ ಸಮೃದ್ಧಿ ಸಾಲ ಯೋಜನೆ- ಸಾಲದ ಮೊತ್ತ-125000 ರೂ.ವರೆಗೆ; ಬಡ್ಡಿ 1% (SCA), 4% (ಫಲಾನುಭವಿ)
  • ದೇನಾ ಶಕ್ತಿ ಸಾಲ ಯೋಜನೆ- ಸಾಲದ ಮೊತ್ತ – 20 ಲಕ್ಷದವರೆಗೆ; ಬಡ್ಡಿ 25% ಕಡಿಮೆ ಬಡ್ಡಿದರ
  • ಮಹಿಳಾ ಸ್ವರ್ಣಿಮಾ ಸಾಲ ಯೋಜನೆ- ಸಾಲದ ಮೊತ್ತ- 2 ಲಕ್ಷ; ಬಡ್ಡಿ 5%
  • ಭಾರತೀಯ ಮಹಿಳಾ ಬ್ಯಾಂಕ್ ವ್ಯಾಪಾರ ಸಾಲ –  ಸಾಲದ ಮೊತ್ತ – 20 ಕೋಟಿ ವರೆಗೆ;10.15%- 13.65%
  • ಉದ್ಯೋಗಿನಿ ಸಾಲ ಯೋಜನೆ- ಸಾಲದ ಮೊತ್ತ- 3 ಲಕ್ಷದವರೆಗೆ; ಬಡ್ಡಿ ಬ್ಯಾಂಕ್ ಮತ್ತು ಮಾರುಕಟ್ಟೆ ದರವನ್ನು ಅವಲಂಬಿಸಿರುತ್ತದೆ

ಸೆಂಟ್ ಕಲ್ಯಾಣಿ ಮಹಿಳಾ ಸಾಲ ಯೋಜನೆ;

ಮಹಿಳೆಯರಿಗಾಗಿ ಇರುವ ಈ ಸಾಲ ಯೋಜನೆ ವ್ಯಾಪಾರ ಮಾಡುವ ಮಹಿಳೆಯರಿಗೆ ಒಂದು ಕೋಟಿ ರೂಪಾಯಿಗಳವರೆಗೆ ಸಾಲ Loan for Women ಸೌಲಭ್ಯ ನೀಡುವ ಯೋಜನೆಯಾಗಿದೆ ವಾರ್ಷಿಕವಾಗಿ ಶೇಕಡ 8.70 ರಿಂದ 8.95% ನಲ್ಲಿ ಬಡ್ಡಿ ಸಾಲ ಪಡೆಯಬಹುದು. ಯೋಜನೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಮಹಿಳೆಯರಿಗಾಗಿ ಸಾಲವನ್ನು ನೀಡುತ್ತದೆ ಉದ್ಯಮಿ ಮಹಿಳೆಯರು ಮಾತ್ರ ಈ ಸಾಲದ ಪ್ರಯೋಜನ ಪಡೆದುಕೊಳ್ಳಬಹುದು ಮಹಿಳಾ ಸಾಲ ಯೋಜನೆಗೆ ಯಾವುದೇ ಪ್ರಕ್ರಿಯೆ ಶುಲ್ಕ ಪಾವತಿಸುವ ಅಗತ್ಯವಿಲ್ಲ ಜೊತೆಗೆ ಮೇಲಾಧಾರ ಅಥವಾ ಗ್ಯಾರಂಟಿ ಕೊಡುವ ಅಗತ್ಯವಿಲ್ಲ.

ಸ್ವಂತ ಉದ್ಯಮ ಆರಂಭಿಸಲು ಬಂಡವಾಳದ ಚಿಂತೆಯೇ ಬೇಡ, ಸರ್ಕಾರವೇ ಕೊಡುತ್ತೆ ಬಡ್ದಿರಹಿತ ಸಾಲ, ಇಂದೇ ಈ ಯೋಜನೆಗೆ ಲೋನ್ ಗೆ ಅಪ್ಲೈ ಮಾಡಿ!

ಮಹಿಳಾ ಸ್ವರ್ಣಿಮಾ ಸಾಲ ಯೋಜನೆ!

ಇದು ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ 2 ಲಕ್ಷ ರೂಪಾಯಿಗಳ ಸಾಲವನ್ನು ವಾರ್ಷಿಕ 5% ಬಡ್ಡಿ ದರದಲ್ಲಿ ನೀಡುವ ಯೋಜನೆಯಾಗಿದೆ. 18 ವರ್ಷ ದಾಟಿದ ಹಾಗೂ 55 ವರ್ಷದ ಒಳಗಿನವರು ಈ ಸಲ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸಾಲ ಪಡೆದುಕೊಳ್ಳುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಹೆಚ್ಚಿರಬಾರದು, ವ್ಯಾಪಾರ ಮಾಡುವವರಾಗಿರಬೇಕು. 2023ರಲ್ಲಿ ಆರಂಭವಾದ ಈ ಹೊಸ ಸಾಲ ಯೋಜನೆಗೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನೀಡಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ (PMMY)

ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿ ಇರದೇ ಇದ್ದರೂ ಕೂಡ ಮಹಿಳೆಯರು ಸುಲಭವಾಗಿ ಮುದ್ರಾ ಯೋಜನೆಯ ಅಡಿಯಲ್ಲಿ ಹತ್ತು ಲಕ್ಷ ರೂಪಾಯಿಗಳ ಬಗ್ಗೆ ಸಾಲ Loan for Women ತೆಗೆದುಕೊಂಡು ಸ್ವಂತ ಉದ್ಯಮ ಆರಂಭಿಸಬಹುದು. 8% ನಿಂದ 12% ವಾರ್ಷಿಕ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ. ಇನ್ನು ಮುದ್ರಾ ಸಾಲಕ್ಕೆ ಯಾವುದೇ ಪ್ರಕ್ರಿಯೆ ಶುಲ್ಕ ಇರುವುದಿಲ್ಲ ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಮುದ್ರಾ ಸಾಲ ಪಡೆದುಕೊಳ್ಳಬಹುದು.

ಸಾಲುಮರುಪಾವತಿ ಮಾಡಲು ತೊಂದರೆ ಅನುಭವಿಸುವ ಮಹಿಳೆಯರು ಸಾಲವನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಿಕೊಳ್ಳಬಹುದು. ಮುದ್ರಾ ಸಾಲ ಯೋಜನೆಯಲ್ಲಿ ಶಿಶು ಸಾಲ ಕಿಶೋರ ಸಾಲ ಹಾಗೂ ತರುಣ ಸಾಲ ಮೂರು ವಿಭಾಗದಲ್ಲಿ ಸಾಲದವನ್ನು ನೀಡಲಾಗುತ್ತದೆ. 50,000 ಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಯೋಜನೆಯಡಿಯಲ್ಲಿ ಸಾಲ ಪಡೆದುಕೊಳ್ಳಬಹುದು. ಒಮ್ಮೆ ಸಾಲವನ್ನು ತೀರಿಸಿದರೆ ಮಹಿಳೆಯರಿಗೆ ಮತ್ತೆ ಹೆಚ್ಚಿನ ಮೊತ್ತದ ಸಾಲ ನೀಡಲಾಗುತ್ತದೆ. ಇವಿಷ್ಟು ಮಹಿಳೆಯರಿಗಾಗಿಯೇ ಇರುವ ಸಾಲ ಯೋಜನೆಗಳಾಗಿದ್ದು ಯಾವುದೇ ಮಹಿಳೆ ತನ್ನದೇ ಸ್ವಂತ ಉದ್ಯಮ ಆರಂಭಿಸಬೇಕು ಎಂದು ಬಯಸಿದರೆ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.

Comments are closed.