Bank Deposit: ಈ ಬ್ಯಾಂಕ್ ಗಳಲ್ಲಿ ನೀವು ಇಡುವ ಠೇವಣಿಗೆ ಸಿಗುವಷ್ಟು ಬಡ್ಡಿದರ ಮತ್ತೆಲ್ಲೂ ಸಿಗಲ್ಲ; ಕೆಲವೇ ವರ್ಷದಲ್ಲಿ ಹಣ ದುಪ್ಪಟ್ಟು!

Bank Deposit interest rate increased: ಈಗ ಸಾಮಾನ್ಯವಾಗಿ ಪ್ರತಿಯೊಬ್ಬರು ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದರಿಂದ ಬ್ಯಾಂಕುಗಳಲ್ಲಿ ಠೇವಣಿ ಇಡುವವರ ಸಂಖ್ಯೆಯೂ ಏರಿದೆ. ಹಾಗೆಯೇ ಬ್ಯಾಂಕ್ಗಳು ಕೂಡ ವಿವಿಧ ರೀತಿಯ ಸಾಲ ಸೌಲಭ್ಯ ನೀಡುತ್ತಿವೆ. ಅಲ್ಲದೆ ಮೊದಲಿನ ತರಹ ತಿಂಗಳುಗಟ್ಟಲೇ ಅಲೆದಾಡಿಸದೆ ವಾರದೊಳಗೆ ಸಾಲ ಮಂಜೂರಾತಿ ಮಾಡುತ್ತಿವೆ. ಹಾಗೆಯೇ ಸ್ಥಿರ ಆದಾಯ ಮಾರ್ಗದಲ್ಲಿ ಠೇವಣಿಗಳು ಜನಪ್ರಿಯಗೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಕೈಗೊಂಡ ಕ್ರಮಗಳಿಂದಾಗಿ ಠೇವಣಿಗಳ ಮೇಲಿನ ಬಡ್ಡಿದರ ಗಮನಾರ್ಹವಾಗಿ ಹೆಚ್ಚಳವಾಗಿದೆ. ಹಾಗಾದರೆ ಯಾವ ಯಾವ ಬ್ಯಾಂಕ್ನಲ್ಲಿ ಠೇವಣಿಗೆ Bank Deposit ಬಡ್ಡಿ ಎಷ್ಟು ನೀಡಲಾಗುತ್ತದೆ. ಸಾಮಾನ್ಯ ಜನರಿಗೆ ಎಷ್ಟು? ಹಿರಿಯ ನಾಗರಿಕರಿಗೆ ಎಷ್ಟು ಎಂದು ಇಲ್ಲಿದೆ ಮಾಹಿತಿ.

Bank Deposit interest rate increased now, here are the details.

ಠೇವಣಿ ಮೇಲೆ ಹೆಚ್ಚಾದ ಬಡ್ಡಿದರ (Deposit interest rate increased) :

ಕೆಲ ದಿನಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಪರಿಷ್ಕರಿಸದೆ ಹಿಂದಿನಂತೆಯೇ ಮುಂದುವರಿಸಿದೆ. ಆದರೆ ಈ ಹಿಂದಿನ ಬಡ್ಡಿದರಕ್ಕೆ ಹೋಲಿಕೆ ಮಾಡಿದರೆ ಇಂದಿನ ಬಡ್ಡಿದರ  ಏರಿಕೆ ಕಂಡಿದೆ. ಇದರ ಜೊತೆ ಠೇವಣಿಗಳ Bank Deposit ಮೇಲಿನ ಬಡ್ಡಿದರವನ್ನು ಏರಿಸಲಾಗಿದೆ. ಈಗಾಗಲೇ ಮೂರು ಬ್ಯಾಂಕುಗಳು ಹೆಚ್ಚಿನ ಬಡ್ಡಿದರ ನೀಡುತ್ತಿವೆ. ಅವು ಯಾವುದೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಎಫ್ ಸಿ ಬ್ಯಾಂಕ್ ಮತ್ತ್ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗಳು.

ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank):

ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ7ರಿಂದ 29 ದಿನಗಳ ಠೇವಣಿಗೆ ಸಾಮಾನ್ಯ ಜನರಿಗೆ ಶೇ. 3 ರಷ್ಟು, ಹಿರಿಯ ನಾಗರಿಕರಿಗೆ ಶೇ.3.5೦ ರಷ್ಟು ಬಡ್ಡಿದರ ನೀಡಲಾಗುತ್ತದೆ. 3೦-45ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ. 3.5೦ ರಷ್ಟು, ಹಿರಿಯ ನಾಗರಿಕರಿಗೆ ಶೇ.4 ರಷ್ಟು ಬಡ್ಡಿದರ ನೀಡಲಾಗುತ್ತದೆ. 46ರಿಂದ 6 ತಿಂಗಳ ಅವಧಿಯ ಠೇವಣಿಯ Bank Deposit ಮೇಲೆ ಸಾಮಾನ್ಯ ಜನರಿಗೆ ಶೇ.4.5೦, ಹಿರಿಯ ನಾಗರೀಕರಿಗೆ ಶೇ.5 ರಷ್ಟು ಬಡ್ಡಿದರ ನೀಡಲಾಗುತ್ತದೆ. 6 ತಿಂಗಳಿಂದ 9 ತಿಂಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ ಶೇ. 5.75, ಹಿರಿಯ ನಾಗರೀಕರಿಗೆ ಶೇ. 6.25 ಬಡ್ಡಿದರ ನೀಡಲಾಗುತ್ತದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್ (PNB):

ಪಂಜಾಬ್ ನ್ಯಾಶನಲ್ ಬ್ಯಾಂಕ್ನಲ್ಲಿ 7-45 ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ. 3.5೦ ಹಿರಿಯ ನಾಗರೀಕರಿಗೆ ಶೇ. 4ರಷ್ಟು ಬಡ್ಡಿದರ ನೀಡಲಾಗುತ್ತದೆ. 46-179 ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ.4.5೦, ಹಿರಿಯ ನಾಗರೀಕರಿಗೆ ಶೇ.5 ರಷ್ಟು ಬಡ್ಡಿದರ ನೀಡಲಾಗುತ್ತದೆ. 18೦-27೦ ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ.5.5೦, ಹಿರಿಯ ನಾಗರೀಕರಿಗೆ ಶೇ.6 ರಷ್ಟು ಬಡ್ಡಿದರ ನೀಡಲಾಗುತ್ತದೆ. 271 ದಿನದಿಂದ 1 ವರ್ಷದ ಅವಧಿಯ ಠೇವಣಿಯ ಮೇಲೆ ಜನಸಾಮಾನ್ಯರಿಗೆ ಶೇ. 5.8೦, ಹಿರಿಯ ನಾಗರೀಕರಿಗೆ ಶೇ. 6.3೦ ರಷ್ಟು ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷಗಳ ನಂತರ ಠೇವಣಿಗೆ Bank Deposit ಜನಸಾಮಾನ್ಯರಿಗೆ  ಶೇ. 6.8೦, ಹಿರಿಯ ನಾಗರೀಕರಿಗೆ 7.3೦ ರಷ್ಟು ಬಡ್ಡಿದರ ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI):

ಈ ಬ್ಯಾಂಕಿನಲ್ಲಿ 7-45 ದಿನಗಳ ಅವಧಿಯ ಠೇವಣಿಯ ಮೇಲೆ ಜನಸಾಮಾನ್ಯರಿಗೆ ಶೇ.3, ಹಿರಿಯ ನಾಗರೀಕರಿಗೆ ಶೇ.3.5೦ ರಷ್ಟು ಬಡ್ಡಿದರ ನೀಡಲಾಗುತ್ತದೆ. 46-179 ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ. 4.5೦, ಹಿರಿಯ ನಾಗರೀಕರಿಗೆ ಶೇ.5ರಷ್ಟು ಬಡ್ಡಿದರ ನೀಡಲಾಗುತ್ತದೆ. 18೦-21೦ ದಿನಗಳ ಅವಧಿಯ ಠೇವಣಿಗೆ ಜನಸಾಮಾನ್ಯರಿಗೆ ಶೇ. 5.25, ಹಿರಿಯ ನಾಗರೀಕರಿಗೆ 5.75 ರಷ್ಟು ಬಡ್ಡಿದರ ನೀಡಲಾಗುತ್ತದೆ. 211 ರಿಂದ ಒಂದು ವರ್ಷದ ಒಳಗಿನ ಠೇವಣಿಯ ಮೇಲೆ ಜನಸಾಮಾನ್ಯರಿಗೆ ಶೇ. 5.75 ರಷ್ಟು, ಹಿರಿಯ ನಾಗರೀಕರಿಗೆ ಶೇ.6.25 ರಷ್ಟು ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದಿಂದ ಎರಡು ವರ್ಷದ ನಡುವಿನ ಅವಧಿಯ ಠೇವಣಿಯ ಮೇಲೆ ಜನಸಾಮಾನ್ಯರಿಗೆ ಶೇ. 6.8೦, ಹಿರಿಯ ನಾಗರೀಕರಿಗೆ 7.3೦ ರಷ್ಟು ಬಡ್ಡಿದರ ನಿಗದಿ ಮಾಡಲಾಗಿದೆ.

Comments are closed.