FRUITS ID: ಈ ಐಡಿ ನಿಮ್ಮ ಬಳಿ ಇಲ್ಲದೇ ಇದ್ದರೆ ಯಾವ ಸರ್ಕಾರಿ ಸಬ್ಸಿಡಿಯೂ ಸ್ಇಗಲ್ಲ; ರೈತರೇ ತಕ್ಷಣ ಈ ಕೆಲಸ ಮಾಡಿಕೊಳ್ಳಿ!

FRUITS ID is necessary to get government loan: ನಮ್ಮ ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಕಾರಣ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬಿತ್ತದ ಬೆಳೆ ಹೊಲದಲ್ಲೇ ಒಣಗಿದೆ. ಕಷ್ಟಪಟ್ಟು ಬಿತ್ತಿದ ಬೆಳೆ ಕೈಕೊಟ್ಟಿತಲ್ಲ ಎನ್ನುವ ಚಿಂತೆಯಲ್ಲಿ ರೈತರಿದ್ದಾರೆ. ಇದಕ್ಕಾಗಿ ರೈತರ ಸಹಾಯ ಮಾಡಲು ಮುಂದಾಗಿದೆ. ಆದರೆ ರೈತರು ಬರ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ FRUITS ID ಹೊಂದಿರುವುದು ಕಡ್ಡಾಯವಾಗಿದೆ. ಸರ್ಕಾರ ಇದರ ನೋಂದಣಿಗಾಗಿ ನವೆಂಬರ್ 30ರ ವರೆಗೆ ಗಡುವು ನೀಡಿದೆ. ಆದರೆ ಸರ್ಕಾರದ ನಿರೀಕ್ಷೆ ಪ್ರಕಾರ ನೋಂದಣಿ ಆಗುತ್ತಿಲ್ಲ ಎನ್ನಲಾಗುತ್ತಿದೆ.

FRUITS ID is necessary to get government loan here are the details.

ಯಾಕೆಂದರೆ ದೊಡ್ಡ ದೊಡ್ಡ ಆಸ್ತಿ ಹೊಂದಿದವರು ಈ ಮೊದಲೇ ತಾವು ಸಣ್ಣ ಹಿಡುವಳಿದಾರರು ಎಂದು ನೋಂದಾಯಿಸಿಕೊಂಡಿದ್ದಾರೆ. ಈಗ ದೊಡ್ಡ ಹಿಡುವಳಿ ಹೊಂದಿದವರು ಎಂದು ಸರ್ಕಾರಕ್ಕೆ ತಿಳಿದರೆ ಎಲ್ಲಿ ತಮಗೆ ಸರ್ಕಾರದಿಂದ ಸಿಗುವ ಸಹಾಯಧನ, ಸೌಲತ್ತುಗಳು ನಿಂತು ಹೋಗುತ್ತವೆಯೋ ಎನ್ನುವ ಚಿಂತೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ರೈತರು ಸರಿಯಾದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಕಳವಳ ವ್ಯಕ್ತಪಡಿಸಿದ ಸಚಿವರು:

ಫ್ರೂಟ್ಸ್ ಐಡಿ FRUITS ID (Farmer Registration and Unified beneficiary InformaTion System) ನೋಂದಣಿ ಕುರಿತಂತೆ ಸ್ವತಃ ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ನಡೆದ ಸಭೆಯೊಂದರಲ್ಲಿ ಸಚಿವರು, ಎಫ್ಐಡಿ ಹಾಗೂ ಹಿಡುವಳಿದಾರರ ಸಂಖ್ಯೆಗೆ ತಾಳೆ ಆಗುತ್ತಿಲ್ಲ. ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಸಲುವಾಗಿ ಬೆಳೆಗಾರರು ಫ್ರೂಟ್ಸ್ ಐಡಿಯಲ್ಲಿ ತಮ್ಮ ಸಂಪೂರ್ಣ ಜಮೀನಿನ ದಾಖಲೀಕರಣ ಮಾಡುತ್ತಿಲ್ಲ. ಎಫ್ಐಡಿ ಇಲ್ಲದಿದ್ದರೆ ಹಾಗೂ ತಾವು ಹೊಂದಿರುವ ಪೂರ್ಣ ಜಮೀನಿನ ಮಾಹಿತಿ ನೀಡದಿದ್ದರೆ ಸರಿಯಾದ ಪ್ರಮಾಣದ ಬರ ಪರಿಹಾರ ಸಿಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ ಹಾಗೂ ವಿವಿಧ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಬೇಕು. ಈ ಮೂಲಕ ರೈತರು ತಮ್ಮ ಸಂಪೂರ್ಣ ಜಮೀನಿನ ವಿವರ ಎಫ್ಐಡಿಯಲ್ಲಿ ದಾಖಲಿಸುವಂತೆ ಮಾಡಬೇಕು ಎಂದು ಸಚಿವರು ಸಲಹೆ ನೀಡಿದ್ದರು.

86.81 ಲಕ್ಷ ಹಿಡುವಳಿದಾರರು:

ನಮ್ಮ ರಾಜ್ಯದಲ್ಲಿ 138.31 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದೆ. 86.81 ಲಕ್ಷ ಹಿಡುವಳಿದಾರರಿದ್ದಾರೆ. ಈ ಪೈಕಿ ಶೇ.3೦ರಷ್ಟು ಜನರು ಸಹ ಎಫ್ಐಡಿ ಹೊಂದಿಲ್ಲ. ಇದರ ಜೊತೆ ಈಗಾಗಲೇ ನೋಂದಣಿ ಮಾಡಿರುವವರು ಸಹ ತಮ್ಮ ಜಮೀನಿನ ಪೂರ್ಣ ಮಾಹಿತಿ ದಾಖಲು ಮಾಡಿಲ್ಲ. ಒಬ್ಬ ರೈತನ ಹೆಸರಿನಲ್ಲಿ 1೦ ಎಕರೆ ಜಮೀನಿದ್ದರೆ ಆತ 2-3 ಎಕರೆ ಜಮೀನನ್ನು ಮಾತ್ರ ಎಫ್ಐಡಿಯಲ್ಲಿ ದಾಖಲು ಮಾಡುತ್ತಿರುವುದು ತಿಳಿದುಬಂದಿದೆ.

ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ರೈತರು ಈ ರೀತಿ ಸಂಪೂರ್ಣ ಜಮೀನಿನ ದಾಖಲೀಕರಣ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೂ ಸರಿಯಾದ ರೀತಿಯಲ್ಲಿ ಬರ ಪರಿಹಾರ ನೀಡಲು ಸಾಧ್ಯವಾಗದೆ ತಲೆನೋವಾಗಿ ಪರಿಣಮಿಸಿದೆ.

ಕಡಿಮೆ ಆದಾಯದಲ್ಲಿ ಹೆಚ್ಚಿನ ಲಾಭ ಗಳಿಸಬೇಕಾ? ಹಾಗಾದ್ರೆ ಈ ಉದ್ಯಮ ಶುರು ಮಾಡಿ! ಕೆಲವೇ ದಿನಗಳಲ್ಲಿ ಕಿಂಗ್ ಆಗ್ತೀರಾ!

ಕಾರಣಗಳು:

ಜಮೀನು ಜಂಟಿ ಖಾತೆಯಲ್ಲಿ ಇರುವುದು, ಅಣ್ಣ-ತಮ್ಮನ ನಡುವೆ ಆಸ್ತಿ ವ್ಯಾಜ್ಯ, ಕೃಷಿ ಭೂಮಿ ಹೆಣ್ಣು ಮಕ್ಕಳ ಹೆಸರಿನಲ್ಲಿದ್ದು, ಅವರು ವಿವಾಹವಾಗಿ ಗಂಡನ ಮನೆಗೆ ತೆರಳಿರುವುದು, ಸಹೋದರ, ಸಹೋದರಿಯರ ನಡುವೆ ಆಸ್ತಿಗಾಗಿ ಕಲಹ ನಡೆಯುತ್ತಿರುವುದು, ತಂದೆಯ ಹೆಸರಿನಲ್ಲಿರುವ ಭೂಮಿ ಮಗನ ಹೆಸರಿಗೆ ವರ್ಗಾವಣೆ ಆಗದಿರುವುದು ಹೀಗೆ ನಾನಾ ಕಾರಣಗಳಿಗಾಗಿ ಪ್ರೂಟ್ಸ್ ಐಡಿ FRUITS ID ನೋಂದಣಿಗೆ ಹಿಂದೇಟು ಹಾಕಲಾಗುತ್ತಿದೆ.

ಕೂಡಲೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿ:

ಕೃಷಿ ಸಾಲ, ಸಹಾಯಧನ, ಗೌರವಧನ, ಬರ ಪರಿಹಾರ ಪಡೆಯುವುದಕ್ಕಷ್ಟೇ ಅಲ್ಲದೆ ಬೆಳೆದ ಬೆಳೆ ಮಾರಾಟ ಸೇರಿದಂತೆ ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಅಥವಾ ಸೌಲಭ್ಯ ಪಡೆಯಲು ಎಫ್ಐಡಿ ಕಡ್ಡಾಯವಾಗಿದೆ. ಎಫ್ಐಡಿ ಇಲ್ಲದಿದ್ದರೆ ಇನ್ಮುಂದೆ ಕೃಷಿಗೆ ಸಂಬಂಧಿಸಿದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಮಾಡಿಸಿಕೊಳ್ಳದೆ ಇದ್ದವರು ಕೂಡಲೇ ಫ್ರೂಟ್ಸ್ ಐಡಿ FRUITS ID ಮಾಡಿಸಿಕೊಳ್ಳುವುದು ಉತ್ತಮ.

Comments are closed.