Get Loan: ಹೊಸ ಉದ್ಯಮ ಶುರು ಮಾಡೋರಿಗೆ ಜಿಯೋದಿಂದ ಶುಭ ಸುದ್ದಿ ! ಜಿಯೋ ಅಪ್ಲಿಕೇಶನ್ನಲ್ಲೇ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ

Get loan by reliance jio financial services: ರಿಲಯನ್ಸ್ ಇಂಡಸ್ಟ್ರೀಸ್ನ ಅಂಗ ಸಂಸ್ಥೆಯಾಗಿರುವ ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಸಾಲ ಹಾಗೂ ವಿಮಾ ಕ್ಷೇತ್ರಕ್ಕೂ ಪಾದರ್ಪಣೆ ಮಾಡುವುದಾಗಿ ಘೋಷಣೆ ಮಾಡಿದೆ. ಅಲ್ಲದೆ ಜಿಯೋ ಫೈನಾನ್ಸಿಯಲ್ ಸಂಸ್ಥೆಯು ಮೈ ಜಿಯೋ ಅಪ್ಲಿಕೇಶನ್ ಮೂಲಕವೇ ವೈಯಕ್ತಿಕ ಸಾಲ ವಿತರಣೆ ಮಾಡುವುದಾಗಿ ಮಾಹಿತಿ ನೀಡಿದೆ.

ಮೈ ಜಿಯೋ ಅಪ್ಲಿಕೇಶನ್ ಮೂಲಕ ಕೊಟ್ಯಂತರ ಜನರು ಟೆಲಿಕಾಂ ಕ್ಷೇತ್ರಕ್ಕೆ ಸಂಬಂಧಪಟ್ಟ ಸೌಲತ್ತು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ರಿಲಯನ್ಸ್ ಇಂಡಸ್ಟ್ರೀಸ್ ಮೈ ಜಿಯೋ ಅಪ್ಲಿಕೇಶನ್ ಮೂಲಕ ಸಾಲ Get Loan ನೀಡಲು ಮುಂದಾಗಿದೆ. ಈಗಾಗಲೇ ಮೈ ಜಿಯೋ ಅಪ್ಲಿಕೇಶನ್ನಲ್ಲಿ ವಿವಿಧ ರೀತಿಯ ಬಿಲ್ ಪಾವತಿ, ಮನರಂಜನೆ, ಸಂಗೀತ ಹಲವಾರು ಸೌಲಭ್ಯ ಒದಗಿಸಲಾಗುತ್ತಿದೆ. ಮೈ ಜಿಯೋ ಅಪ್ಲಿಕೇಶನ್ನ್ನು ದೇಶದಲ್ಲಿ 25.02 ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಏನೆಂದರೆ ಹಣ ಪಾವತಿಗಾಗಿಯೇ ಇರುವ ಪೇಟಿಎಂನ್ನು 2.8 ಕೋಟಿ ಜನರು, ಫೋನ್ ಪೇಯನ್ನು ೪ ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ.

ಸ್ವ-ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ

ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಸ್ವಂತ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಇದಕ್ಕಾಗಿಯೇ ಸ್ವಂತ ಉದ್ಯಮ ಆರಂಭಿಸುವವರಿಗೆ ಸಾಲ ನೀಡಲು ಮುಂದಾಗಿದೆ. ಇದರ ಜೊತೆ ಈಗಾಗಲೇ ಸಣ್ಣ ಪುಟ್ಟ ಉದ್ಯಮ ನಡೆಸುತ್ತಿರುವವರಿಗೂ ಅದರ ಅಭಿವೃದ್ಧಿಗಾಗಿ ಸಾಲ ನೀಡಲು ಮುಂದಾಗಿದೆ. ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಆಟೋ ಮತ್ತು ಹೋಮ್ ಲೋನ್ಗಳ Get Loan ಜೊತೆಗೆ ಶೇರುಗಳನ್ನು ಅಡಮಾನ ಇಟ್ಟುಕೊಳ್ಳುವ ಮೂಲಕ ಸಾಲ ನೀಡಲು ಮುಂದಾಗಿದೆ.

ಜಿಯೋ ಪೆಮೇಂಟ್ ಬ್ಯಾಂಕ್ನಿಂದ ಡೆಬಿಟ್ ಕಾರ್ಡ್?

ನಮ್ಮ ದೇಶದಲ್ಲಿ ಸದ್ಯ ಫೈನಾನ್ಸಿಯಲ್ ಕ್ಷೇತ್ರದಲ್ಲಿ ಪೇಟಿಎಂ ಹಾಗೂ ಫೋನ್ ಪೇ ಮುಂಚೂಣಿಯಲ್ಲಿದೆ. ರಿಲಯನ್ಸ್ ಹಣಕಾಸು ಸೇವಾ ವಲಯದ ಜಿಯೋ ಪೆಮೆಂಟ್ Get Loan ಬ್ಯಾಂಕ್ ಉಳಿತಾಯ ಖಾತೆ ಹಾಗೂ ಬಿಲ್ ಪಾವತಿ ಸೌಲಭ್ಯ ಆರಂಭಿಸಿದೆ. ಇದರ ಜೊತೆ ಇನ್ನು ಕೆಲವೇ ದಿನಗಳಲ್ಲಿ ಜಿಯೋ ಡೆಬಿಟ್ ಕಾರ್ಡ್ ಆರಂಭಿಸುವ ನಿರೀಕ್ಷೆ ಇದೆ.

ಜೀವ ವಿಮೆ,  ಸಾಮಾನ್ಯ ಹಾಗೂ ಆರೋಗ್ಯ ವಿಮೆ ಸೇರಿದಂತೆ ೨೪ ಕಂಪನಿಗಳೊಂದಿಗೆ ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಒಪ್ಪಂದ ಮಾಡಿಕೊಂಡಿದೆ. ಜಿಯೋ ಕಂಪನಿಯು Get Loan ವಿಮಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ.

ಹೀಗೆ ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಸಂಸ್ಥೆಯು ಜಿಯೋ ಅಪ್ಲಿಕೇಶನ್ ಮೂಲಕ ಒಂದೇ ಕಡೆ ಎಲ್ಲ ರೀತಿಯ ಸೇವೆ ಒದಗಿಸಲು ಮುಂದಾಗಿದೆ. ಇದರಿಂದ ಜನರಿಗೂ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಜಿಯೋ ಪಾರುಪತ್ಯ ಮೆರೆದರೂ ಅಚ್ಚರಿಯಿಲ್ಲ.

Comments are closed.