Online Service: ಹಿರಿಯ ನಾಗರಿಕರು ಕುಳಿತಲ್ಲಿಯೇ ಹಣ ಉಳಿತಾಯ ಮಾಡಬಹುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!

Online Service for Senior Citizens: ಕೇಂದ್ರ ಸರ್ಕಾರವು ಹಿರಿಯ ನಾಗರೀಕರಿಗಾಗಿ ಆಕರ್ಷಕ ಬಡ್ಡಿದರದೊಂದಿಗೆ ಹಲವಾರು ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಇದೀಗ ಮಾಸಿಕ ಆದಾಯ ಯೋಜನೆ,  ಹಿರಿಯ ನಾಗರೀಕರ ಉಳಿತಾಯ ಖಾತೆ, ಮಹಿಳಾ ಸಮ್ಮಾನ್ ಉಳಿತಾಯ ಪತ್ರವನ್ನು ಅಂಚೆ ಇಲಾಖೆಯ ಆನ್ಲೈನ್ ಸೇವೆ Online Service ಮೂಲಕ ತೆರೆಯಬಹುದಾಗಿದೆ. ಇದರಿಂದ ಸಾರ್ವಜನಿಕರು ಈ ಖಾತೆಗಳನ್ನು ಆರಂಬಿಸುವ ಸಲುವಾಗಿ ಅಂಚೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ. ಅ.30ರಿಂದಲೇ ಈ ಸೌಲಭ್ಯ ಜಾರಿಯಾಗಿದೆ.

Online Service for Senior Citizens to save money, here are the details.

ಅಂಚೆ ಇಲಾಖೆಯಿಂದ ಸುತ್ತೋಲೆ:

ಈ ಕುರಿತಾಗಿ ಅಂಚೆ ಇಲಾಖೆಯು (Post Office) ಸುತ್ತೋಲೆ ಹೊರಡಿಸಿದ್ದು, ಆ ಸುತ್ತೋಲೆಯಲ್ಲಿ, ಎಂಐಎಸ್ (MIS), ಎಸ್ಸಿಎಸ್ಎಸ್ (SCSS), ಎಂಎಸ್ಎಸ್ಸಿ (MSSC) ಯೋಜನೆಗಳ ಖಾತೆಗಳನ್ನು ತೆರೆಯುವ ಆಯ್ಕೆಯು ಅಂಚೆ ಕಚೇರಿಯ ಉಳಿತಾಯ ಖಾತೆ ಗ್ರಾಹಕರ ಡಿಒಪಿ ಇಂಟರ್ನೆಟ್ ಬ್ಯಾಂಕಿಂಗ್ನ (Internet Banking) ಸಾಮಾನ್ಯ ಸೇವೆ ಅಡಿಯಲ್ಲಿ ದೊರೆಯಲಿದೆ ಎಂದು ತಿಳಿಸಿದೆ.

ಹೊಸ ಉದ್ಯಮ ಶುರು ಮಾಡೋರಿಗೆ ಜಿಯೋದಿಂದ ಶುಭ ಸುದ್ದಿ ! JIO Loan ಅಪ್ಲಿಕೇಶನ್ನಲ್ಲೇ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿರುವ ಮಹಿಳಾ ಸಮ್ಮಾನ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡುವವರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರಿಂದ ಮಹಿಳೆಯರು ತಮ್ಮ ಸಂಕಷ್ಟದ ಸಂದರ್ಭದಲ್ಲಿ ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಯಾವುದಾದರೂ ಸ್ವಂತ ಉದ್ಯಮ ಆರಂಭಿಸಲು ಅನುಕೂಲವಾಗಲಿದೆ. ಆನ್ ಲೈನ್ Online Service ಮೂಲಕವೂ ಖಾತೆ ತೆರೆಯಬಹುದು.

ಆನ್ಲೈನ್- ಆಫ್ಲೈನ್ ಖಾತೆ ತೆರೆಯುವುದು ಹೇಗೆ?:

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಸಾರ್ವಜನಿಕರ ಕ್ಷೇತ್ರದ ಬ್ಯಾಂಕುಗಳು, ಅಂಚೆ ಕಚೇರಿಯಲ್ಲಿ, ನಾಲ್ಕು ಖಾಸಗಿ ಬ್ಯಾಂಕುಗಳಲ್ಲಿ ಖಾತೆ ಆರಂಭಿಸಬಹುದಾಗಿದೆ. ಆದರೂ ಹೆಚ್ಚಿನ ಬ್ಯಾಂಕುಗಳು ಈಗಿಗ ಈ ಯೋಜನೆಯ ಆನ್ಲೈನ್ ನೋಂದಣಿಗೆ (Online Registration) ಸಿದ್ಧತೆ ನಡೆಸಿವೆ. ಹಾಗಾಗಿ ಆನ್ಲೈನ್ ಬ್ಯಾಂಕಿಂಗ್ Online Service ಮೂಲಕ ಈ ಸೇವೆ ಸದ್ಯಕ್ಕೆ ಸಿಗುತ್ತಿಲ್ಲ. ಆದ್ದರಿಂದ ಆಫ್ಲೈನ್ (Offline) ಮೂಲಕ ಮಾತ್ರ ಅಂದರೆ ಖುದ್ದಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಖಾತೆ ತೆರೆಯಬಹುದಾಗಿದೆ.

ಆನ್ಲೈನ್ನಲ್ಲಿ ಖಾತೆ ತೆರೆಯುವುದು ಹೇಗೆ? (How to open account in Online)

ಮೊದಲು ಗೂಗಲ್ ವೆಬ್ಸೈಟ್ಗೆ Online Service ಭೇಟಿ ನೀಡಬೇಕು. ಅಲ್ಲಿ ಜನರಲ್ ಸರ್ವೀಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ವೀಸ್ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ನ್ಯೂ ರಿಕ್ವೆಸ್ಟ್ ಆಯ್ಕೆ ಮಾಡಿ, ಒಕೆ ಬಟನ್ ಕ್ಲಿಕ್ ಮಾಡಬೇಕು. ನಂತರ ಮಾಸಿಕ ಆದಾಯ ಖಾತೆ, ಹಿರಿಯ ನಾಗರೀಕರ ಉಳಿತಾಯ ಖಾತೆ, ಮಹಿಳಾ ಸಮ್ಮಾನ್ ಪತ್ರ ನಿಮಗೆ ಕಾಣಿಸುತ್ತದೆ. ಇದರಲ್ಲಿ ಯಾವುದರಲ್ಲಿ ನೀವು ಹೂಡಿಕೆ ಮಾಡಲು ಇಚ್ಚಿಸುತ್ತೀರೋ ಅದನ್ನು ಆಯ್ಕೆ ಮಾಡಬೇಕು. ನಂತರ ಠೇವಣಿ ಮೊತ್ತವನ್ನು ನಮೂದು ಮಾಡಬೇಕು. ನಂತರ ಡೆಬಿಟ್ ಖಾತೆ ಆಯ್ಕೆ ಮಾಡಬೇಕು. ಅಗತ್ಯವಿದ್ದರೆ ವಹಿವಾಟು ಟಿಪ್ಪಣಿ ಆಯ್ಕೆ ಮಾಡಬೇಕು. ಬಳಿಕ ನಿಯಮಗಳು, ಷರತ್ತುಗಳನ್ನು ಒಪ್ಪಿಕೊಳ್ಳುವ ಆಯ್ಕೆ ಬಾಕ್ಸ್ನಲ್ಲಿ ಕ್ಲಿಕ್ ಮಾಡಬೇಕು. ಇದಾದ ಬಳಿಕ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಆನ್ಲೈನ್ನಲ್ಲಿ ನಿಮ್ಮ ಖಾತೆ ತೆರೆಯುತ್ತದೆ.

ಎಂಎಸ್ಎಸ್‌ಸಿ ಯೋಜನೆ ಬಡ್ಡಿ ದರ;

2023-24ರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಬಗ್ಗೆ ಹೇಳಲಾಗಿತ್ತು. ಈ ಉಳಿತಾಯ ಯೋಜನೆಯಲ್ಲಿ ಯಾವುದೇ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. ಹೂಡಿಕೆ ಅವಧಿ 2 ವರ್ಷ.  ಕನಿಷ್ಠ ಹೂಡಿಕೆ ಮೊತ್ತ 1,000 ರೂ. ಗರಿಷ್ಠ 2 ಲಕ್ಷ ರೂ. ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕ ಶೇ. 7.5ರಷ್ಟು ಬಡ್ಡಿ ನಿಗದಿಪಡಿಸಲಾಗಿದ್ದು, ತ್ರೈಮಾಸಿಕ ಆಧಾರದ ಮೇಲೆ ಕೊಡಲಾಗುತ್ತದೆ. ಕೇವಲ ಎರಡು ವರ್ಷಗಳಲ್ಲಿ ಅತಿ ಉತ್ತಮ ಆದಾಯ ಪಡೆಯಲು ಬೆಸ್ಟ್ ಉಳಿತಾಯ ಯೋಜನೆ ಇದಾಗಿದೆ.

Comments are closed.