Wrong UPI Payment: ತಪ್ಪಾಗಿ ಬೇರೆಯವರ ಖಾತೆಗೆ ಪೇಮೆಂಟ್ ಮಾಡಿಬಿಟ್ರಾ? ದುಡ್ದು ಕಳೆದೇಹೋಯ್ತು ಅಂತ ಚಿಂತೆ ಬೇಡ; ತಕ್ಷಣ ಈ ಕೆಲಸ ಮಾಡಿ; ನಿಮ್ಮ ಹಣ ನಿಮ್ಮ ಖಾತೆಗೆ ವಾವಾಸ್ ಬರುತ್ತೆ

How to get money back from Wrong UPI Payment: ಈಗ ಎಲ್ಲಿ ನೋಡಿದರೂ ಜಗತ್ತು ಡಿಜಿಟಲ್ ಮಯವಾಗಿದೆ. ಬ್ಯಾಂಕಿಂಗ್ ಕ್ಷೇತ್ರವು ಇದಕ್ಕೆ ಹೊರತಾಗಿಲ್ಲ. ನಾವು ಯಾರಿಗಾದರೂ ಹಣ ವರ್ಗಾವಣೆ ಮಾಡಬೇಕು ಎಂದರೆ ಮೊದಲೆಲ್ಲ ಬ್ಯಾಂಕಿಗೆ ಹೋಗಿ ಅವರ ಖಾತೆಗೆ ಹಣ ಹಾಕಬೇಕಿತ್ತು. ಈಗ ಹಾಗಿಲ್ಲ ಕುಳಿತಲ್ಲಿಯೇ ಅಥವಾ ಇದ್ದ ಸ್ಥಳದಿಂದಲೇ ಯುಪಿಐ ಬಳಕೆ ಮಾಡಿ ಹಣ ವರ್ಗಾವಣೆ ಮಾಡಬಹುದು. ಆದರೆ ಈ ರೀತಿ ಬಳಕೆ ಮಾಡುವ ವೇಳೆ ಜಾಗರೂಕರಾಗಿರಬೇಕು.

ಚೂರು ಯಾಮಾರಿದರೂ ಬೇರೆಯವರ ಖಾತೆಗೆ ಹಣ ವರ್ಗಾವಣೆ Wrong UPI Payment ಆಗಿಬಿಡುತ್ತದೆ. ವಿನಾಕಾರಣ ಚಿಂತೆಯನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಆದರೂ ಹೀಗೆ ಅಚಾನಕ್ಕಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದರೂ ನೀವು ಚಿಂತಿಸುವ ಅಗತ್ಯವಿಲ್ಲ. ಈಗ ನಾವು ಹೇಳುವ ರೀತಿ ಮಾಡಿದರೆ ಹಣ ವಾಪಸ್ ನಿಮ್ಮ ಖಾತೆಗೆ ಜಮಾ ಆಗುತ್ತದೆ.

How to get money back from Wrong UPI Payment

ಈಗ ಸಣ್ಣದಾದ ಟಿ ಸ್ಟಾಲ್, ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ಗಳಲ್ಲೂ ಡಿಜಿಟಲ್ ಪಾವತಿ ಆರಂಭವಾಗಿದೆ. ಹಾಗಾಗಿ ನೀವು ನಗದು ಹಣವನ್ನು ತೆಗೆದುಕೊಂಡು ಹೋಗುವ ಅಗತ್ಯ ಬೀಳುವುದಿಲ್ಲ. ನೀವು ಸಣ್ಣ ಪಿನ್ನಿಂದ ಹಿಡಿದು ದೊಡ್ಡ ಟಿವಿ, ಫ್ರಿಜ್ ತನಕ ಯಾವುದನ್ನೇ ಕೊಂಡುಕೊಂಡರೂ ಅಲ್ಲಿಯೇ ಯುಪಿಐ ಬಳಸಿ ಅವರ ಖಾತೆಗೆ ಹಣ ವರ್ಗಾವಣೆ Wrong UPI Payment ಮಾಡಬಹುದು. ಹೆಚ್ಚಿನದಾಗಿ ಈಗ ಕ್ಯೂಆರ್ ಕೋಡ್ ಬಳಕೆ ಮಾಡಿ ಪೆಮೇಂಟ್ ಮಾಡಲಾಗುತ್ತದೆ.

ಹಣ ವರ್ಗಾವಣೆ ಮಾಡುವ ಮುನ್ನ ಇರಲಿ ಜಾಗೃತಿ

ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಇಂದಿಗೂ ಹಲವಾರು ಜನರು ನಗದು ರೂಪದಲ್ಲೇ ಪಾವತಿ ಮಾಡುತ್ತಾರೆ. ಡಿಜಿಟಲ್ ಪೆಮೇಂಟ್ ಮಾಡಲು ಹಿಂಜರಿಯುತ್ತಾರೆ. ಕಾರಣ ಏನೆಂದರೆ ಏನಾದರೂ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದರೆ ಏನು ಮಾಡುವುದು ಎಂದು ತಿಳಿಯುವುದಿಲ್ಲ. ಅಲ್ಲದೆ ಅವರು ದೇಶದ ಯಾವುದೇ ಮೂಲೆಯಲ್ಲಿ ಇರಬಹುದು. ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮ ಹಣ ಕಳೆದುಹೋಗುತ್ತದೆ Wrong UPI Payment ಎನ್ನುವ ಭಯ ಅವರನ್ನು ಕಾಡುತ್ತಿರುತ್ತದೆ. ಆದರೆ ಇನ್ಮುಂದೆ ಈ ರೀತಿ ಭಯ ಬೀಳುವ ಅಗತ್ಯವಿಲ್ಲ.

ಹಣ ವಾಪಸ್ ಪಡೆಯೋದು ಹೇಗೆ?:

ನೀವು ಒಂದು ವೇಳೆ ನಿಮಗೆ ಗೊತ್ತಿಲ್ಲದೆಯೋ, ಅಥವಾ ಗೊಂದಲಕ್ಕೊಳಗಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಿದರೆ ನೀವು ಚಿಂತಿಸುವ ಅಗತ್ಯವಿಲ್ಲ. ಹಣ ವರ್ಗಾವಣೆ ಆದ ವಿಚಾರ ನಿಮಗೆ ತಿಳಿದ ಕೂಡಲೇ ನೀವು ಯಾವ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಿರೋ ಆ ಬ್ಯಾಂಕ್ನ ಕಸ್ಟಮರ್ ಕೇರ್ಗೆ ಕರೆ ಮಾಡಿ ವಿಚಾರ ತಿಳಿಸಬೇಕು. ಅಥವಾ ಯುಪಿಐ ಕಸ್ಟಮರ್ ಕೇರ್ಗೆ ಮಾಹಿತಿ ಮುಟ್ಟಿಸಬೇಕು. ಈ ಕುರಿತಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಸೂಚನೆ ನೀಡಿದೆ. ಹಾಗಾಗಿ ನೀವು ಹಣ ವರ್ಗಾವಣೆ ಮಾಡಿದ್ದು ತಪ್ಪಾಗಿದ್ದರೆ ಕೂಡಲೇ ಬ್ಯಾಂಕ್ಗೆ ವಿಚಾರ ಮುಟ್ಟಿಸಬೇಕು.

ಇಷ್ಟೇ ಅಲ್ಲದೆ ಎನ್ಪಿಸಿಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ದೂರನ್ನು ದಾಖಲಿಸಬಹುದು. ನಿಮ್ಮ ಯುಪಿಐ ಐಡಿ, ಬ್ಯಾಂಕ್ ಖಾತೆ ಸಂಖ್ಯೆ, ನಿಮ್ಮ ಮೊಬೈಲ್ ನಂಬರ್ ಎಲ್ಲವನ್ನು ಅಲ್ಲಿ ನೀಡಬೇಕು. ನೀವು ತಪ್ಪಾಗಿ ಹಣ ವರ್ಗಾವಣೆ Wrong UPI Payment ಆದ ಮೂರು ದಿನದೊಳಗೆ ಈ ರೀತಿ ದೂರು ಸಲ್ಲಿಸಬೇಕು. ಅದಕ್ಕೂ ನಂತರ ದೂರು ಸಲ್ಲಿಸಿದರೆ ಸ್ವೀಕರಿಸುವುದಿಲ್ಲ. ಹೀಗೆ ದೂರು ದಾಖಲಿಸಿದರೆ ೩೦ ದಿನದೊಳಗೆ ನಿಮ್ಮ ಹಣ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಇಷ್ಟಕ್ಕೂ ನಿಮಗೆ ಸಮಾಧಾನ ಆಗದಿದ್ದಲ್ಲಿ ನೀವು ಯಾವ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಿರೋ ಆ ಬ್ಯಾಂಕ್ನ ನಿಮ್ಮ ಹತ್ತಿರದ ಶಾಖಾ ಕಚೇರಿಗೆ ತೆರಳಿ ಅಲ್ಲಿನ ಮ್ಯಾನೇಜರ್ ಅವರಿಗೆ ದೂರು ಸಲ್ಲಿಸಬಹುದು. ಅವರು ಸಹ ವಿಚಾರಣೆ ನಡೆಸಿ ನಿಮ್ಮ ಹಣ ನಿಮ್ಮ ಖಾತೆಗೆ ಜಮಾ ಆಗುವಂತೆ ಮಾಡುತ್ತಾರೆ.

Comments are closed.