Kannada Type: ಆಂಡ್ರಾಯ್ಡ್ ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲಿ ಕನ್ನಡ ಬರೋಯೋದು ಇಂಗ್ಲೀಷ್ ಬರೆದಷ್ಟೇ ಸುಲಭಾನಾ? ನೀವೂ ಈ ಅಪ್ಲಿಕೇಶನ್ ಬಳಸಿ!

Kannada Type Application for Android mobile and Computer: ಕೆಲವು ವರ್ಷಗಳ ಹಿಂದೆ ಮೊಬೈಲ್ನಲ್ಲಿ ಕನ್ನಡ ಬರೆಯುವುದು ಎಂದರೆ ಬಹಳ ಕಷ್ಟಸಾಧ್ಯದ ವಿಚಾರವಾಗಿತ್ತು. ಹಾಗಾಗಿ ಬಹಳಷ್ಟು ಜನರು ಕನ್ನಡ ಶಬ್ಧವನ್ನೇ ಇಂಗ್ಲೀಷ್ನಲ್ಲಿ ಬರೆದು ಮೆಸೇಜ್ ಮಾಡುತ್ತಿದ್ದರು. ಆದರೆ ಇಂದು ನಮ್ಮ ದೇಶದಲ್ಲಿ ಇರುವ ಬಹಳಷ್ಟು ಭಾಷೆಗಳನ್ನು ಕಂಪ್ಯೂಟರ್ ಹಾಗೂ ಮೊಬೈಲ್ನಲ್ಲಿ ಸಾಫ್ಟವೇರ್ ಮೂಲಕ ಅಳವಡಿಸಲಾಗಿದೆ.

ಆಂಡ್ರಾಯ್ಡ್ ಮೊಬೈಲ್ನಲ್ಲಾದರೆ ಗೂಗಲ್ ಪ್ಲೇಗೆ ತೆರಳಿದರೆ ಕನ್ನಡದಲ್ಲಿ ಬರೆಯಲು Kannada Type ಸಾಕಷ್ಟು ಆಯ್ಕೆಗಳ ಅಪ್ಲಿಕೇಶನ್ಗಳು ಸಿಗುತ್ತದೆ. ಆದರೆ ಇವು ಬೇಗನೆ ಅರ್ಥವಾಗುವ ರೀತಿಯಲ್ಲಿ ಇರುವುದಿಲ್ಲ. ಇಂಗ್ಲೀಷ್ ಅಕ್ಷರಗಳನ್ನು ಕನ್ನಡಕ್ಕೆ ತರಲು ಬಹಳ ಕಷ್ಟಪಡಬೇಕಾಗುತ್ತದೆ. ಆದರೆ ಈಗ ನಾವು ಹೇಳುವ ಟ್ರಿಕ್ಸ್ ಫಾಲೋ ಮಾಡಿದರೆ ನೀವು ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲಿ ಬಹಳ ಸುಲಭವಾಗಿ ಕನ್ನಡದಲ್ಲಿ ಬರೆಯಬಹುದು.

Kannada Type Application for Android mobile and Computer how to use it, here are the details.

ಜೀ ಬೋರ್ಡ್ ಅಪ್ಲಿಕೇಶನ್:

ಮೊಬೈಲ್ನಲ್ಲಿ ಕನ್ನಡ ಟೈಪ್ ಮಾಡಲು ನೀವು ನಿಮ್ಮ ಮೊಬೈಲ್ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ಗೆ ಹೋಗಬೇಕು. ಅಲ್ಲಿ ಜೀ ಬೋರ್ಡ್ ಎನ್ನುವ ಅಪ್ಲಿಕೇಶನ್ ಇರುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್ ಲೋಡ್ ಆದ ನಂತರ ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಜೀ ಬೋರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಕನ್ನಡ ಭಾಷೆಯ ಕೀ ಬೋರ್ಡ್ ಸೇರಿಸಬೇಕು. ಈಗ ನಿಮ್ಮ ಮೊಬೈಲ್ನಲ್ಲಿ ಕನ್ನಡದಲ್ಲಿ Kannada Type ಆರಾಮವಾಗಿ ಬರೆಯಬಹುದು.

5 ಸೀಟರ್ ಮೌಲ್ಯದ Car, 7 ಸೀಟರ್ ಬೆಲೆಗೆ, ಯಾರಿಗುಂಟು ಯಾರಿಗಿಲ್ಲ, ಇಂದೇ ಬುಕ್ ಮಾಡಿ

ಹಾಗೆಯೇ ವಾಟ್ಸಪ್ ಸಂದೇಶ ಕಳುಹಿಸುವ ವೇಳೆಯೂ ಕನ್ನಡದಲ್ಲಿ ಟೈಪ್ ಮಾಡಬೇಕು ಎನಿಸಿದರೆ ವಾಟ್ಸಪ್ ಸಂದೇಶ ಬರೆಯುವ ಜಾಗಕ್ಕೆ ಹೋಗಬೇಕು. ಅಲ್ಲಿ ಸೆಟ್ಟಿಂಗ್ಸ್ ಆಯ್ಕೆ ನಿಮಗೆ ಕಾಣುತ್ತದೆ. ಅದನ್ನು ಓಪನ್ ಮಾಡಿದರೆ ಅಲ್ಲಿ ಜೀ ಬೋರ್ಡ್ ಆಯ್ಕೆ ನಿಮಗೆ ಸಿಗುತ್ತದೆ. ಅಲ್ಲಿ ಜೀ ಬೋರ್ಡ್ ಅಪ್ಲಿಕೇಶನ್ ಸಕ್ರಿಯಗೊಳಿಸಿಕೊಂಡರೆ ನೀವು ವಾಟ್ಸಪ್ನಲ್ಲೂ ಕನ್ನಡವನ್ನು Kannada Type ಬರೆಯಬಹುದು.

ಮೈಕ್ರೋಸಾಫ್ಟ್ ವರ್ಡ್ನಲೂ ಬಳಸಬಹುದು ಜೀ ಬೋರ್ಡ್:

ಈ ಕೀಬೋರ್ಡ್ ಉಪಯೋಗಿಸುವ ವೇಳೆ ಇಂಟರ್ ನೆಟ್ ಇರುವುದು ಮಾತ್ರ ಅತಿ ಅವಶ್ಯಕವಾಗಿದೆ. ಹಾಗೆಯೇ ಜೀ ಬೋರ್ಡ್ ಅಪ್ಲಿಕೇಶನ್ ಅನ್ನು ಮೈಕ್ರೋ ಸಾಫ್ಟ್  ವರ್ಡ್ನಲ್ಲಿಯೂ ಬಳಸಬಹುದಾಗಿದೆ. ಕಂಪ್ಯೂಟರ್ನಲ್ಲಿ ಕನ್ನಡ ಬರೆಯಬೇಕು ಎಂದರೆ ಸಾಮಾನ್ಯವಾಗಿ ಎಲ್ಲರೂ ನುಡಿ ಸಾಫ್ಟವೇರ್ ಬಳಕೆ ಮಾಡುತ್ತಾರೆ. ಇದರ ಜೊತೆಗೆ ಲಿಖಿತ್, ಕನ್ನಡ ಇಂಡಿಂಕ್ ಇನ್ಪುಟ್, ಗೂಗಲ್ ಇಂಡಿಕ್ ಅಪ್ಲಿಕೇಶನ್ ಬಳಸಿಯೂ ನೀವು ಕನ್ನಡದಲ್ಲಿ Kannada Type ಟೈಪ್ ಮಾಡಬಹುದಾಗಿದೆ.

Comments are closed.