Maruti Ertiga: ಐದು ಸೀಟರ್ ಮೌಲ್ಯದಲ್ಲಿ ನಿಮಗೆ ಸಿಗುತ್ತೆ ಏಳು ಸೀಟರ್ ಕಾರು; ಅದು ಅತ್ಯುತ್ತಮ ಮೈಲೇಜ್ ಜೊತೆಗೆ!

Get Maruti Ertiga 7 seater car for less price:  ಇತ್ತಿಚಿನ ದಿನದಲ್ಲಿ ಪ್ರತಿಯೊಬ್ಬರು ಕಾರು ಕೊಂಡುಕೊಳ್ಳಲು ಬಯಸುತ್ತಾರೆ. ಅದು ಪ್ರತಿಯೊಬ್ಬರ ಅವಶ್ಯಕತೆಯಾಗಿಬಿಟ್ಟಿದೆ. ಈಗ ಮಧ್ಯಮ ವರ್ಗದವರ ಮನೆಯಲ್ಲಿಯೂ ಕಾರು ಇರುತ್ತದೆ. ಅದು ಹೊಸದಾಗಿ ಕೊಂಡುಕೊಂಡ ಕಾರು ಆಗಿರಬಹುದು ಇಲ್ಲವೇ ಸೆಕೆಂಡ್ ಹ್ಯಾಂಡ್ ಕಾರು ಆಗಿರಬಹುದು. ಕಾರು ಅಷ್ಟು ಅಗತ್ಯದ ವಾಹನವಾಗಿಬಿಟ್ಟಿದೆ. ಅಲ್ಲದೆ ಇಂದಿನ ಯುವ ಸಮುದಾಯಕ್ಕೆ ಕಾರಿನ ಕ್ರೇಜ್ ಬಹಳ ಇದೆ. ಅದಕ್ಕಾಗಿಯೂ ಕಾರುಗಳ ಮಾರಾಟ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಆದರೆ ಕಡಿಮೆ ದರಕ್ಕೆ ಉತ್ತಮ ಮೌಲ್ಯದ ಹಾಗೂ ಹೆಚ್ಚು ಮೈಲೇಜ್ ನೀಡುವ ಕಾರನ್ನು ಖರೀದಿ ಮಾಡುವುದು ಒಳ್ಳೆಯದು. ಅದು ಹೇಗೆಂದು ಈಗ ನೋಡೋಣ.

ಕಾರು ಖರೀದಿ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಸಣ್ಣ ಕುಟುಂಬವಾಗಿದ್ದರೆ 5 ಸಿಟರ್ ಕಾರು ಸಾಕಾಗುತ್ತದೆ. ಆದರೆ ದೊಡ್ಡ ಕುಟುಂಬವಾಗಿದ್ದರೆ 7 ಸೀಟರ್ ಕಾರು Maruti Ertiga ಬೇಕಾಗುತ್ತದೆ. ಆದರೆ ೭ ಆಸನದ ಕಾರು ಬಹಳ ದುಬಾರಿ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ.

Get Maruti Ertiga 7 seater car for less price with good mileage.

ಹಲವು ವೈಶಿಷ್ಟ್ಯದ ಕಾರುಗಳು:

ವಾಸ್ತವವಾಗಿ ಕಾರುಗಳು ಅವುಗಳ ಆಸನದ ಜೊತೆ ಅವುಗಳ ವೈಶಿಷ್ಟ್ಯದಿಂದ ಹಾಗೂ ಇನ್ನು ಹಲವಾರು ಕಾರಣಗಳಿಗೆ ಕೊಳ್ಳಲು ಆಸೆ ಮೂಡಿಸುತ್ತವೆ. ಉದಾಹರಣೆಗೆ ಮಾರುತಿ ಸುಜುಕಿ ಕಂಪನಿಯ ಸುಪ್ರಸಿದ್ಧ ಕಾರುಗಳಾದ ಮಾರುತಿ ಸುಜುಕಿ ಎರ್ಟಿಗಾ, ಮಾರುತಿ ಸುಜುಕಿ ಬ್ರೆಝಾದಾ ನೋಡುವುದಾದರೆ ಎರ್ಟಿಗಾ Maruti Ertiga 7 ಸಿಟರ್ ಕಾರು, ಬ್ರೆಝಾದಾ 5 ಸಿಟರ್ ಕಾರು. ಆದರೆ ಎರ್ಟಿಗಾಕ್ಕಿಂತ ಬ್ರೆಝಾದಾ ಕಾರು ಸ್ವಲ್ಪ ದುಬಾರಿಯಾಗಿದೆ.

ಸುಜುಕಿ ಎರ್ಟಿಗಾ, ಮಾರುತಿ ಸುಜುಕಿ ಬ್ರೆಝಾದಾ ಕಾರಿನ ದರ:

7 ಸಿಟರ್ ಕಾರಾಗಿರುವ ಮಾರುತು ಸುಜುಕಿ ಎರ್ಟಿಗಾದ Maruti Ertiga ಆರಂಭಿಕ ಬೆಲೆ 8.24 ಲಕ್ಷ ರೂ. ಇದರ ಟಾಪ್ ವೆರಿಯೆಂಟ್ 13.೦8 ಲಕ್ಷ ರೂ. ಇರಲಿದೆ. ಇದೆ ವೇಳೆ 5 ಸಿಟರ್ ಕಾರಾಗಿರುವ ಮಾರುತಿ ಸುಜುಕಿ ಬ್ರೆಝಾದಾದ ಬೆಲೆ 8.29 ಲಕ್ಷ ರೂ.ಗಳಿಂದ 13.98 ಲಕ್ಷ ರೂ.ಗಳವರೆಗೆ ಇದೆ. ಅಂದರೆ ಎರ್ಟಿಗಾದ ಉನ್ನತ ರೂಪಾಂತರವು ಬ್ರೆಝಾದಾ ಕಾರಿನ ಉನ್ನತ ರೂಪಾಂತರಕ್ಕಿಂತ ಕಡಿಮೆ ಇದೆ. ಅಂದರೆ ನೀವು 5 ಸಿಟರ್ ಕಾರಿನ ಬೆಲೆಯಲ್ಲಿ ನೀವು 7 ಸಿಟರ್ ಕಾರನ್ನು ಖರೀದಿ ಮಾಡಬಹುದಾಗಿದೆ.

ಹೆಚ್ಚು ಮಾರಾಟವಾಗುತ್ತಿದೆ ಮಾರುತಿ ಸುಜುಕಿ ಎರ್ಟಿಗಾ:

ಮಾರುತಿ ಸುಜುಕಿ ಎರ್ಟಿಗಾ  ಉತ್ತಮ ಮಾರಾಟವಾಗಲು ಕಾರಣ ಇದು ಕೈಗೆಟುಕುವ ಬೆಲೆಯಲ್ಲಿ ಸಿಗುವ 7 ಸಿಟರ್ ಕಾರ್ ಆಗಿದೆ. ಮಾರುತಿ ಸುಜುಕಿ ಎರ್ಟಿಗಾ Maruti Ertiga ಸಂಪೂರ್ಣ ಕುಟುಂಬದ ಅಗತ್ಯಕ್ಕೆ ಅನುಗುಣವಾಗಿ ಹೇರಳವಾದ ಜಾಗವನ್ನು ಹೊಂದಿರುತ್ತದೆ. ಕುಟುಂಬದವರೆಲ್ಲವರೂ ಆರಾಮವಾಗಿ ಹಾಗೂ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ.

Comments are closed.