Gold Loan: ಸಿಬಿಲ್ ಸ್ಕೋರ್ ಚೆನ್ನಾಗಿ ಇಲ್ಲದೇ ಇದ್ರೂ ಸಿಗತ್ತೆ ಈ ಸಾಲ; ಬಡ್ಡಿಯೂ ಕಡಿಮೆ, ಇನ್ಕಮ್ ಪ್ರೂಫ್ ಕೂಡ ಬೇಡ!

Get Gold Loan with less Interest: ಮನುಷ್ಯನಿಗೆ ಆಸೆ ಸಹಜ. ತನ್ನದೆ ಆದ ಸ್ವಂತ ಮನೆ, ವಾಹನ ಹೊಂದಬೇಕು, ತಂಗಿ, ಮಗ, ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಹೀಗೆ ಹಲವಾರು ಆಸೆಗಳಿರುತ್ತವೆ. ಆದರೆ ಈ ಎಲ್ಲ ಆಸೆಗಳನ್ನು ಪೂರೈಸಿಕೊಳ್ಳಲು ಹಣದ ಅವಶ್ಯಕತೆ ತುಂಬಾ ಇರುತ್ತದೆ. ಈ ವೇಳೆ ಹಲವಾರು ಜನರು ವೈಯಕ್ತಿಕ ಸಾಲ (Personal Loan) ಪಡೆಯಲು ಮುಂದಾಗುತ್ತಾರೆ. ಆದರೆ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆಯಲು ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿರಬೇಕು. ಜೊತೆ ಹಲವಾರು ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ. ಅಲ್ಲದೆ ವೈಯಕ್ತಿಕ ಸಾಲಕ್ಕೆ ಬಡ್ಡಿಯ ಹೆಚ್ಚಾಗಿರುತ್ತದೆ. ಆದ್ದರಿಂದ ಈಗ ನಾವು ಹೇಳುವ ರೀತಿ ಮಾಡಿದರೆ ನೀವು ಯಾವುದೇ ಸಮಸ್ಯೆ ಇಲ್ಲದೆ ಸಾಲ ಪಡೆದುಕೊಳ್ಳಬಹುದು.

You will get Gold Loan with less Interest and not need of CIBIL Score check.

ಚಿನ್ನದ ಸಾಲ ಎಂದರೇನು?

ನಾವು ಈಗ ಹೇಳಲು ಹೊರಟಿರುವುದು ಚಿನ್ನದ ಮೇಲಿನ ಸಾಲದ ಬಗ್ಗೆ. ಚಿನ್ನದ ಮೇಲಿನ ಸಾಲವನ್ನು Gold Loan ಹೆಚ್ಚಿನದಾಗಿ ಅಲ್ಪಾವಧಿ ಅಗತ್ಯಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಮಕ್ಕಳ ಮದುವೆ, ಶಿಕ್ಷಣ ಹೀಗೆ ತುರ್ತು ಅಗತ್ಯ ಪೂರೈಸಿಕೊಳ್ಳಲು ಪಡೆಯಲಾಗುತ್ತದೆ. ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲದ ಬಡ್ಡಿದರವು ಶೇ.10ಕ್ಕಿಂತ ಕಡಿಮೆ ಇರುತ್ತದೆ. ಈ ಸಾಲವು ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಸುರಕ್ಷಿತವಾಗಿದೆ. ಈ ಸಾಲವನ್ನು Gold Loan ಪಡೆಯಲು ನೀವು ಮನೆಯಲ್ಲಿರುವ ಚಿನ್ನವನ್ನು ಅಡವಿಡಬೇಕಾಗುತ್ತದೆ. ನೀವು ಚಿನ್ನದ ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಬ್ಯಾಂಕಿನಲ್ಲಿ ಭದ್ರತಾ ಕಪಾಟುಗಳು ಇರುತ್ತದೆ.

ಸುಲಭವಾಗಿ ಪಡೆದುಕೊಳ್ಳಿ ರಿಲಯನ್ಸ್ ಮತ್ತು SBI ಜಂಟಿಯಾಗಿ ನೀಡುತ್ತಿರುವ Credit Card. ಎಷ್ಟೇಲ್ಲಾ ಯೂಸ್ ಇದೆ ಗೊತ್ತಾ?

ಚಿನ್ನದ ಮೇಲಿನ ಸಾಲಕ್ಕೆ ಸಿಬಿಲ್ ಸ್ಕೋರ್ ಬೇಕಾಗಿಲ್ಲ:

ಚಿನ್ನದ ಮೇಲಿನ ಸಾಲ ನೀಡಲು ಬ್ಯಾಂಕುಗಳು ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲನೆ ನಡೆಸುವುದಿಲ್ಲ. ನಿಮ್ಮ ಸಿಬಿಲ್ ಸ್ಕೋರ್ ಸರಿಯಾಗಿಲ್ಲದಿದ್ದ ಪಕ್ಷದಲ್ಲೂ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು. ಆದಾಗ್ಯೂ ನೀವು ಪಡೆದಿರುವ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಸಿಬಿಲ್ ಸ್ಕೋರ್ ಸುಧಾರಿಸಿಕೊಳ್ಳಬಹುದು. ಚಿನ್ನದ ಮೇಲಿನ ಸಾಲವನ್ನು Gold Loan ನಿಮಗೆ ಕಡಿಮೆ ಅವಧಿಯಲ್ಲಿ ಮಂಜೂರು ಮಾಡಲಾಗುತ್ತದೆ. ನೀವು ಚಿನ್ನವನ್ನು ಅಡವಿಡುವುದರಿಂದ ಗರಿಷ್ಟ ಐವತ್ತು ಲಕ್ಷ ರೂ.ಗಳ ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ.

ISRO ನೀಡುತ್ತಿದೆ ಆನ್ ಲೈನ್ ತರಬೇತಿ. ಆಸಕ್ತಿ ಇದ್ರೆ ನೀವು ಮುಂದಿನ ಚಂದ್ರಯಾನದ ಭಾಗವಾಗಬಹುದು. ಅಪ್ಲೈ ಮಾಡಿ!

ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ಎಷ್ಟು?:

ಸಾಮಾನ್ಯವಾಗಿ ಚಿನ್ನದ ಮೇಲಿನ ಸಾಲಕ್ಕೆ Gold Loan ಶೇ.10 ರಿಂದ 11 ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಮತ್ತು ಸಾಲ ಮರುಪಾವತಿಗೆ ಒಂದರಿಂದ ಮೂರು ವರ್ಷಗಳ ಅವಧಿ ತೆಗೆದುಕೊಳ್ಳಬಹುದು. ಒಂದು ಗ್ರಾಂ ಶುದ್ಧ ಬಂಗಾರಕ್ಕೆ ಎರಡು ಸಾವಿರ ರೂ. ಸಾಲ ನೀಡಲಾಗುತ್ತದೆ. ಚಿನ್ನದ ಪರಿಶುದ್ಧತೆಗೆ ಅನುಗುಣವಾಗಿ ಚಿನ್ನದ ಬೆಲೆ ಏರಿಳಿತ ಆಗಬಹುದು. ಬಹುತೇಕ ಎಲ್ಲ ಸರ್ಕಾರಿ ಬ್ಯಾಂಕ್ಗಳಲ್ಲಿ ಎನ್ಬಿಎಫ್ಸಿ ಸಂಸ್ಥೆಗಳು ಚಿನ್ನದ ಮೇಲೆ ಸಾಲವನ್ನು ಒದಗಿಸುತ್ತದೆ.

Comments are closed.