Credit Card: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ರಿಲಯನ್ಸ್ ಒಟ್ಟಾಗಿ ಕೊಡಲಿವೆ ಕ್ರೆಡಿಟ್ ಕಾರ್ಡ್; ಸಿಗಲಿದೆ ಬೆಸ್ಟ್ ಬೆನಿಫಿಟ್!

Get Credit Card from SBI and Reliance: ಎಸ್ ಬಿ ಐ ಕಾರ್ಡ್ ಹಾಗೂ ರಿಲಯನ್ಸ್ ಸಹಭಾಗಿತ್ವದಲ್ಲಿ ರಿಲಯನ್ಸ್ ಎಸ್ ಬಿ ಐ ಕಾರ್ಡ್ ಎನ್ನುವ ವಿಶೇಷ ಕ್ರೆಡಿಟ್ ಕಾರ್ಡ್ ನ್ನು Credit Card ಇತ್ತಿಚೆಗೆ ಗ್ರಾಹಕರ ಬಳಕೆಗೆ ಬಿಡುಗಡೆ ಮಾಡಲಾಯಿತು. ಇದು ಲೈಫ್ ಸ್ಟೈಲ್ ಆಧರಿತ ಕ್ರೆಡಿಟ್ ಕಾರ್ಡ್ ಆಗಿದೆ. ಇದು ಗ್ರಾಹಕರಿಗೆ ಸಮಗ್ರ ಮತ್ತು ಲಾಭದಾಯಕ ಶಾಪಿಂಗ್ ಅನುಭವ ನೀಡಲಿದೆ.

ಎಲ್ಲ ಖರೀದಿಗೂ ಒಂದೇ ಕಾರ್ಡ್:

ಈ ಕಾರ್ಡ್ ಹೊಂದಿರುವ ಗ್ರಾಹಕರು ಫ್ಯಾಶನ್, ಲೈಫ್ ಸ್ಟೈಲ್ನಿಂದ ಹಿಡಿದು ದಿನಸಿ, ಮನೆಗೆ ಬೇಕಾಗುವ ಸಾಮಾನುಗಳು, ಔಷಧಗಳು, ಪೀಠೋಪಕರಣ, ಆಭರಣಗಳು ಹೀಗೆ ಹತ್ತಾರು ವಸ್ತುಗಳನ್ನು ರಿಲಯನ್ಸ್ ರಿಟೈಲ್ನಲ್ಲಿ ಖರೀದಿಸುವ ವೇಳೆ ಆಕರ್ಷಕ ರಿವಾರ್ಡ್ ಮತ್ತು ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ ರಿಲಯನ್ಸ್ ಬಳಕೆದಾರರು ನಿರಂತರವಾಗಿ ಎಸ್ ಬಿ ಐ ನೀಡುವ ಕ್ಯೂರೇಟರ್ ಆಫರ್ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

SBI and Reliance lunahed special credit card for customers to get more benefits.

ಸಿಗಲಿದೆ ಮನರಂಜನಾ ಉಪಯೋಗಗಳು:

ರಿಲಯನ್ಸ್ ರಿಟೈಲ್ ಹಾಗೂ ಎಸ್ ಬಿ ಐ (SBI) ಸಹಭಾಗಿತ್ವದಲ್ಲಿ ಈ ಕಾರ್ಡ್ Credit Card ಬಿಡುಗಡೆ ಮಾಡಲಾಗಿದೆ. ಇದು ಬಳಕೆದಾರರಿಗೆ ವಿಶೇಷ ಪ್ರಯಾಣ ಹಾಗೂ ಮನರಂಜನಾ ಪ್ರಯೋಜನ ನೀಡಲಿದೆ. ಇದರ ಜೊತೆ ವಿಶೇಷ ಕೊಡುಗೆಗಳನ್ನು ಪಡೆಯಲು ಅನುವು ಮಾಡಿ ಕೊಡುತ್ತದೆ. ರಿಲಯನ್ಸ್ ನೆಟ್ವರ್ಕ್ಗಳ ವಹಿವಾಟುಗಳ ನವೀಕರಣ ಶುಲ್ಕ ಮನ್ನ ಮತ್ತು ರಿಲಯನ್ಸ್ ರಿಟೈಲ್ಗಳ ವೋಚರ್ ಪಡೆದುಕೊಳ್ಳುವಂತ ಸೌಲಭ್ಯಗಳನ್ನು ಹೊಂದಿದೆ.

ಎರಡು ಮಾದರಿ ಕಾರ್ಡ್:

ರಿಲಯನ್ಸ್ ಎಸ್ ಬಿ ಐ ಕಾರ್ಡ್ ಹಾಗೂ ರಿಲಯನ್ಸ್ ಎಸ್ ಬಿ ಐ ಫ್ರೈಮ್ ಎನ್ನುವ ಎರಡು ಕಾರ್ಡ್ಗಳನ್ನು Credit Card ಬಿಡುಗಡೆ ಮಾಡಲಾಗಿದೆ. ಗ್ರಾಹಕರ ನಿರ್ಧಿಷ್ಟ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇದರ ಪ್ರಯೋಜನಗಳನ್ನು ವಿನ್ಯಾಸ ಗೊಳಿಸಲಾಗಿದೆ.

ರಿಲಯನ್ಸ್ ಎಸ್ ಬಿ ಐ ಕಾರ್ಡ್ ಬಳಕೆ ಹೇಗೆ?:

  • ರಿಲಯನ್ಸ್ ಎಸ್ ಬಿ ಐ ಕಾರ್ಡ್ ಪ್ರೈಮ್ ಬಳಕೆ ಮಾಡುವವರು ವಾರ್ಷಿಕ 2999 ರೂ. ಶುಲ್ಕ ಮತ್ತು ಅದಕ್ಕೆ ಅನ್ವಯವಾಗುವ ತೆರಿಗೆಗಳನ್ನು ಪಾವತಿಸಬೇಕು.
  • ರಿಲಯನ್ಸ್ ಎಸ್ ಬಿ ಐ ಕಾರ್ಡ್ ಹೊಂದಿರುವವರು ವಾರ್ಷಿಕ 499 ರೂ. ಶುಲ್ಕ ಮತ್ತು ಅದಕ್ಕೆ ಅನ್ವಯವಾಗುವ ತೆರಿಗೆಗಳನ್ನು ಪಾವತಿಸಬೇಕು.
  • ರಿಲಯನ್ಸ್ ಎಸ್ ಬಿ ಐ ಕಾರ್ಡ್ ಪ್ರೈಮ್ನಲ್ಲಿ ವಾರ್ಷಿಕ 3೦ ಸಾವಿರ ರೂ. ರಿಲಯನ್ಸ್ ಎಸ್ ಬಿ ಐ ಕಾರ್ಡ್ ನಲ್ಲಿ ವಾರ್ಷಿಕ 1೦ ಸಾವಿರ ರೂ. ಖರ್ಚು ಮಾಡುವವರು ನವೀಕರಣ ಶುಲ್ಕದ ರಿಯಾಯತಿ ಪಡೆಯಬಹುದು.
  • ಈ ಕಾರ್ಡ್ Credit Card ನ್ನು ಮರುಬಳಕೆಯ ಪ್ಲಾಸ್ಟಿಕ್ನಿಂದ ಮಾಡಲಾಗಿದ್ದು, ರುಪೇ ಮಾದರಿಯಲ್ಲಿ ಪರಿಚಯಿಸಲಾಗಿದೆ.

ರಿಲಯನ್ಸ್ ಸ್ಮಾರ್ಟ್, ಸ್ಮಾರ್ಟ್ ಬಜಾರ್, ರಿಲಯನ್ಸ್ ಪ್ರೆಶ್ ಸಿಗ್ನಿಚರ್, ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಟ್ರೆಂಡ್ಸ್ , ಜಿಯೊ ಮಾರ್ಟ್, ಅಜಿಯೋ, ರಿಲಯನ್ಸ್ ಜ್ಯವೆಲರ್ಸ್, ಅರ್ಬನ್ ಲ್ಯಾಡರ್, ನೆಟ್ ಮೇಡ್ಸ್,  ಮತ್ತು ರಿಲಯನ್ಸ್, ಇನ್ನು ಅನೇಕ ಚಿಲ್ಲರೆ ಬ್ರಾಂಡ್ಗಳಲ್ಲಿ ಗ್ರಾಹಕರು ಈ ಕಾರ್ಡ್ ಬಳಸಿ ವ್ಯವಹಾರ ಮಾಡಬಹುದಾಗಿದೆ.

Comments are closed.