Government Scheme: ನಿಮ್ಮ ಮನೆಯ ಹಿರಿಯವರ ಹೆಸರಿನಲ್ಲಿ ಆರ್‌ಟಿಸಿ ಇದ್ರೆ ಸರ್ಕಾರದಿಂದ ಜಾರಿಗೆ ಬಂತು ನೋಡಿ ಹೊಸ ಗುಡ್ ನ್ಯೂಸ್!

Government Scheme: ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣಬೈರೇಗೌಡ ಕಳೆದ ಸಾಕಷ್ಟು ಸಮಯಗಳಿಂದ ಭೂಮಿಯ ವಿಚಾರದಲ್ಲಿ ಸಾಕಷ್ಟು ಸುಧಾರಣೆ ತರುವಂತಹ ಕಾನೂನು ನಿಯಮಗಳನ್ನು ಜಾರಿಗೆ ತರುತ್ತಿದ್ದು ಈಗ ಮತ್ತೊಂದು ಸಿಹಿ ಸುದ್ದಿಯನ್ನು ರೈತರಿಗೆ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ಮುತ್ತಾತ ತಾತ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಇರುವಂತಹ ಪಹಣಿ ಎಂದರೆ RTC ಅನ್ನು ನೀವು ಕೃಷಿ ಮಾಡ್ತಾ ಇದ್ರೆ ಅದನ್ನು ಸುಲಭ ರೂಪದಲ್ಲಿ ನೀವು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವಂತಹ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ. ಆಸ್ತಿಗೆ ಸಂಬಂಧಪಟ್ಟಂತಹ ವ್ಯಕ್ತಿಗಳು ಜೀವಂತವಾಗಿ ಇಲ್ಲದೆ ಹೋದಲ್ಲಿ ಆ ಆಸ್ತಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ವಿಧಾನವನ್ನೇ ಇವತ್ತಿನ ಈ ಲೇಖನದಲ್ಲಿ ಹೇಳುವುದಕ್ಕೆ ಹೊರಟಿರೋದು.

ಸರ್ಕಾರದಿಂದ ಈಗ ರೈತರಿಗೆ ಖುಷಿಯಾಗೋ ಸುದ್ದಿ!

ಕರ್ನಾಟಕದ ಸಾಕಷ್ಟು ಕಡೆಗಳಲ್ಲಿ ರೈತರ ಜಮೀನಿನಲ್ಲಿ ಅನಗತ್ಯವಾಗಿ ಜಗಳಗಳು ನಡೆಯುವಂತಹ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವರಾಗಿರುವಂತಹ ಕೃಷ್ಣ ಬೈರೇಗೌಡ ಅವರು ಎಲ್ಲ ಸಮಸ್ಯೆಗಳಿಗೆ ಫುಲ್ ಸ್ಟಾಪ್ ನೀಡುವುದಕ್ಕೆ ಹೊರಟಿದ್ದು ರೈತರ ಜಮೀನಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ದಾಖಲೆ ಪತ್ರಗಳನ್ನು ಕೂಡ ಡಿಜಿಟಲೀಕರಣ ಮಾಡೋದಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಯಾರೂ ಕೂಡ ತಮ್ಮ ಜಮೀನಿನ ಮೇಲೆ ಬೇರೆಯವರ ಮರ ಗದ್ದೆ ಹಾದು ಹೋಗುತ್ತಿದ್ದರೆ ದಾಖಲೆ ಇಲ್ಲದೆ ಅವರ ಜೊತೆಗೆ ಜಗಳ ಆಡೋದಕ್ಕೆ ಹೋಗಬೇಕಾದ ಅಗತ್ಯವಿಲ್ಲ ಅವರು ಕೂಡ ಜಗಳ ಆಡೋದಕ್ಕೆ ಬರಬೇಕಾದ ಅಗತ್ಯವಿಲ್ಲ.

ಹಿಂದೆಲ್ಲ ಪಹಣಿ ಪತ್ರವನ್ನು ಕಾಗದಪತ್ರದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು ಹಾಗೂ ಇದರಲ್ಲಿ ಯಾರಿಗೆ ಜಮೀನಿನ ಎಷ್ಟು ಭಾಗ ಸೇರ್ಪಡೆ ಆಗಿರುತ್ತದೆ ಎಂಬುದನ್ನು ನಮೂದಿಸುತ್ತಿರಲಿಲ್ಲ. ಹೀಗಾಗಿ ರೈತರ ನಡುವೆ ಈ ರೀತಿಯ ಗೊಂದಲಗಳು ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಪಹಣಿ ಪತ್ರವನ್ನು ಡಿಜಿಟಲ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಮೊಬೈಲ್ ಮೂಲಕವೇ ಜಮೀನಿನ ಮಾಲೀಕರು ತಮ್ಮ ಪಹಣಿ ಪತ್ರಗಳ ಬಗ್ಗೆ ಹಾಗೂ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತಹ ಸೇವೆಯನ್ನು ಸರ್ಕಾರ ಜಾರಿಗೆ ತರೋದಕ್ಕೆ ಮುಂದಾಗಿದೆ. ನಿಮ್ಮ ಕೃಷಿ ಜಮೀನಿನ ಅಳತೆಯನ್ನು ಡಿಜಿಟಲ್ ಮೂಲಕವೇ ಮಾಡಿ ಅದನ್ನು ಡೇಟಾದಲ್ಲಿ ಸಂಗ್ರಹಿಸುವ ಕೆಲಸವನ್ನು ಮಾಡೋದಕ್ಕೆ ಹೊರಟಿದೆ. ಈ ಕೆಲಸವನ್ನು 2024ರ ಒಳಗೆ ಪೂರ್ತಿ ಗೊಳಿಸುವುದಾಗಿ ಕಂದಾಯ ಇಲಾಖೆ ಅಧಿಕೃತವಾಗಿ ಸೂಚನೆ ನೀಡಿದೆ.

ಇನ್ನು ಜಮೀನನ್ನು ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ರೂಪದಲ್ಲಿ ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ಹಾಗೂ ಅದರ ಅಳತೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಎಲ್ಲಿಯೂ ಪರದಾಡದೆ ಕೇವಲ ತಮ್ಮ ಕೈಯ ಮೇಲೆ ಇರುವಂತಹ ಮೊಬೈಲ್ ಮೂಲಕವೇ ಎಲ್ಲವನ್ನು ತಿಳಿದುಕೊಳ್ಳಬಹುದಾದ ಅವಕಾಶವನ್ನು ರೈತರಿಗೆ ಕಂದಾಯ ಇಲಾಖೆ ಮಾಡಿ ಕೊಡುತ್ತಿದೆ. ಒಂದು ವೇಳೆ ನಿಮ್ಮ ಜಮೀನು ತಾತ ಅಥವಾ ಮುತ್ತಾತ ಹೆಸರಿನಲ್ಲಿದ್ದು ಅವರು ಮರಣ ಹೊಂದಿದ್ದಾರೆ ಅವರ ಡೆತ್ ಸರ್ಟಿಫಿಕೇಟ್ ಅನ್ನು ನೀಡುವ ಮೂಲಕ ನೀವು ಡಿಜಿಟಲ್ ಮಾಧ್ಯಮದ ಮೂಲಕವೇ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಲಾಗಿದೆ.

Comments are closed.