Manaswini Yojana: ಈ ಯೋಜನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 800 ಸಿಗುತ್ತಿದೆ; ಈಗ್ಲೇ ಅಪ್ಲೈ ಮಾಡಿ, ಲಾಸ್ಟ್ ಡೇಟ್ ಹತ್ರ ಬರ್ತಿದೆ!

Manaswini Yojana: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಕೂಡ ಕಳೆದ ಸಾಕಷ್ಟು ವರ್ಷಗಳಿಂದಲೂ ಮಹಿಳೆಯರನ್ನು ಸಮಾಜದಲ್ಲಿ ಇನ್ನಷ್ಟು ಮುಖ್ಯ ನೆಲೆಗೆ ಬರಬೇಕು ಎನ್ನುವ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲೂ ವಿಶೇಷವಾಗಿ ಈಗ ಹೊಸದಾಗಿ ಜಾರಿಗೆ ತಂದಿರುವಂತಹ ಈ ಯೋಜನೆಯ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಮನಸ್ವಿನಿ ಯೋಜನೆ!

ಸಮಾಜದಲ್ಲಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಸಲುವಾಗಿ ಸಾಕಷ್ಟು ಸಾಲದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇನ್ನು ಹೊಸದಾಗಿ ಪಿಂಚಣಿ ಯೋಜನೆಯನ್ನು ಕೂಡ ಮನಸ್ವಿನಿಯನ್ನುವ ಹೆಸರಿನಲ್ಲಿ ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗಾಗಿ ಬಜೆಟ್ ನಲ್ಲಿ ಪ್ರತ್ಯೇಕವಾಗಿ ಹಣವನ್ನು ಮೀಸಲಿಟ್ಟಿದೆ. ಮನಸ್ವಿನಿ ಯೋಜನೆ ಅಡಿಯಲ್ಲಿ ಅವಿವಾಹಿತ ಹಾಗೂ ವಿಚಲಿತ ಮಹಿಳೆಯರಿಗೆ ಕೂಡ ಪ್ರತಿ ತಿಂಗಳು 800 ಗಳ ಆರ್ಥಿಕ ಸಹಾಯ ದೊರಕಲಿದೆ.

ಸಾಲ ಪಡೆದುಕೊಳ್ಳಲು ಇರಬೇಕಾಗಿರೋ ಅರ್ಹತೆಗಳು!

  • ಅವಿವಾಹಿತ ಹಾಗೂ ವಿವಾಹ ವಿಚ್ಛೇದನವನ್ನು ಪಡೆದಿರುವ ಮಹಿಳೆಯರು ಮಾತ್ರ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
  • ಬಡತನದ ರೇಖೆಗಿಂತ ಕೆಳಗಿರುವಂತಹ ಮಹಿಳೆಯರಿಗೆ ಮಾತ್ರ ಸಿಗುತ್ತದೆ ಹಾಗೂ ಒಂದು ವೇಳೆ ಸರ್ಕಾರದ ಬೇರೆ ಯೋಜನೆಗಳಲ್ಲಿ ಮಾಸಾಶನ ಪಡೆದುಕೊಳ್ಳುತ್ತಿದ್ರೆ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳೋ ಹಾಗಿಲ್ಲ.
  • ವಾರ್ಷಿಕ ಆದಾಯ 32,000ಗಳಿಗಿಂತ ಕಡಿಮೆ ಆಗಿರಬೇಕು ಎನ್ನುವುದಾಗಿ ನಿಯಮವಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಒಂದು ವೇಳೆ ನೀವು ಕೂಡ ಈ ಮೇಲೆ ಹೇಳಿರುವಂತಹ ಅರ್ಹತೆಯನ್ನು ಹೊಂದಿದ್ದರೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಉಮೇದುವಾರಿಕೆಯಲ್ಲಿ ಇದ್ದರೆ ಹೇಗೆ ಅನ್ನುವುದನ್ನು ತಿಳಿಯೋಣ ಬನ್ನಿ.

  • ಒಂದು ವೇಳೆ ನೀವು ವಿಧವೆಯಾಗಿದ್ದರೆ ವಿಧವಾ ಪ್ರಮಾಣ ಪತ್ರ ಹಾಗೂ ನೀವು ಒಂದು ವೇಳೆ ಮದುವೆ ಆಗಿಲ್ಲದೆ ಹೋದಲ್ಲಿ ನಿಮ್ಮ ವಯಸ್ಸಿನ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ.
  • ರೇಷನ್ ಕಾರ್ಡ್ ಹಾಗೂ ಇನ್ಕಮ್ ಸರ್ಟಿಫಿಕೇಟ್ ಕೂಡ ನೀಡಬೇಕಾಗಿರುತ್ತದೆ.
  • ಬ್ಯಾಂಕ್ ಡೀಟೇಲ್ಸ್ ಹಾಗು ಪಾಸ್ಪೋರ್ಟ್ ಸೈಜ್ ನ ಫೋಟೋವನ್ನು ನೀಡಬೇಕಾಗಿರುತ್ತದೆ.
  • ಸೇವಾ ಕೇಂದ್ರಗಳಿಗೆ ಹೋಗುವ ಮೂಲಕ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ನಂತರ ಕೆಲವು ಸಮಯಗಳ ನಂತರ ಅಂದರೆ ಸರಿ ಸುಮಾರು ಒಂದರಿಂದ ಎರಡು ತಿಂಗಳ ನಂತರ ತಹಶೀಲ್ದಾರರು ಪರಿಶೀಲಿಸಿದ ನಂತರ ಮನಸ್ವಿನಿ ಯೋಜನೆ ಅಡಿಯಲ್ಲಿ ನಿಮಗೆ ಪೆನ್ಷನ್ ಸಿಗುವ ಹಾಗೆ ಮಾಡುತ್ತಾರೆ. ಒಂದು ವೇಳೆ ನೀವು ಕೂಡ ಅವಿವಾಹಿತರಾಗಿದ್ದು ಅಥವಾ ವಿವಾಹ ವಿಚೇದಿತರಾಗಿದ್ದರೆ, ಗಂಡನನ್ನು ಕಳೆದುಕೊಂಡಿದ್ದರೆ ಮನಸ್ವಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪ್ರತಿ ತಿಂಗಳು 800 ಗಳ ಮಸಾಶನವನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಮಹಿಳೆಯರಲ್ಲಿ ಇನ್ನಷ್ಟು ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿಯಲ್ಲಿ ಈ ಪಿಂಚಣಿ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

Comments are closed.