Actor: ಅಬ್ಬಾ! ಇಂಥ ವಿದ್ಯಾರ್ಥಿಗಳೂ ಇದ್ದಾರಾ? ಚಿಕ್ ವಯಸ್ಸಿನಲ್ಲಿ ಟೀಚರ್ ಹೊಡ್ದಿದ್ದಕ್ಕೆ, ದೊಡ್ಡವ್ನಾಗಿ ಆ ಸಿಟ್ಟನ್ ತೀರಿಸ್ಕೊಂಡಿದ್ ಹೇಗೇ ಗೊತ್ತಾ? ಕೇಳಿದ್ರೆ ನೀವ್ ನೀರು ಕುಡ್ಯೋದ್ ಗ್ಯಾರಂಟಿ!

Actor: ಸ್ನೇಹಿತರೆ, ಪ್ರತಿಯೊಬ್ಬರೂ ಕೂಡ ತಮ್ಮ ಬಾಲ್ಯದ ಕ್ಷಣಗಳನ್ನು ಇವತ್ತಿಗೂ ಕೂಡ ನೆನಪಿಸಿಕೊಂಡು ಆ ದಿನಗಳು ಕೂಡ ಎಷ್ಟು ಚೆನ್ನಾಗಿತ್ತು ಅನ್ನೋದಾಗಿ ಮೆಲಕು ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ತಾವು ಶಾಲೆಯಲ್ಲಿ ಕಳೆದಂತಹ ಅಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಂಡು ಪ್ರತಿಯೊಬ್ಬರು ಕೂಡ ಸಂತೋಷಪಡುತ್ತಾರೆ ಹಾಗೂ ತಮ್ಮ ಶಾಲೆಗೆ ಒಂದಲ್ಲ ಒಂದು ರೀತಿಯಲ್ಲಿ ಮುಂದೆ ತಾವು ಬೆಳೆದ ನಂತರ ಏನಾದ್ರೂ ಕೊಡುಗೆ ನೀಡಬೇಕು ಎನ್ನುವಂತಹ ಆಸೆ ಕೂಡ ಅವರಲ್ಲಿ ಇದ್ದೇ ಇರುತ್ತದೆ.

ಅಲ್ಲಿನ ಶಿಕ್ಷಕರು ನಮಗೆ ಆ ಸಂದರ್ಭದಲ್ಲಿ ಹೊಡೆದರೂ ಕೂಡ ದೊಡ್ಡವರಾದ ಮೇಲೆ ನಮಗೆ ವಿದ್ಯೆ ಕಲಿಸಿದ ಗುರುಗಳು ಎನ್ನುವಂತಹ ಗೌರವ ಅವರ ಮೇಲೆ ಇರುತ್ತದೆ ಹಾಗೂ ಎಲ್ಲಿ ಸಿಕ್ಕಿದ್ರು ಕೂಡ ಅವರಿಗೆ ನಾವು ಗೌರವವನ್ನು ಸೂಚಿಸುತ್ತೇವೆ. ಇದು ಒಂದು ವರ್ಗದ ಜನರಿಗೆ ಸೇರಿದಂತಹ ಕಥೆ ಆದರೆ ಇನ್ನೊಂದು ವರ್ಗದ ಜನರು ಈ ರೀತಿ ಆದಾಗ ಅಂತಹ ಶಿಕ್ಷಕರು ಅಥವಾ ಶಾಲೆಯನ್ನು ನೋಡೋದಕ್ಕೆ ಕೂಡ ಇಷ್ಟಪಡುವುದಿಲ್ಲ. ಇವತ್ತಿನ ಈ ಲೇಖನದಲ್ಲಿ ಹೇಳಲು ಹೊರಟಿರುವಂತಹ ನಟ ಕೂಡ ಅದೇ ಜಾತಿಗೆ ಸೇರಿದವರು. ಹಾಗಿದ್ರೆ ಆ ನಟ ಯಾರು ಹಾಗೂ ನಡೆದಿರುವಂತಹ ಘಟನೆ ಏನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಶಿಕ್ಷಕನ ಮೇಲೆ ಕೋಪಕ್ಕೆ ಈ ನಟ ಶಾಲೆಯ ಮೇಲೆ ಮಾಡಿದ್ದೇನು ಗೊತ್ತಾ?

ನಾವು ಮಾತನಾಡಲು ಹೊರಟಿರೋದು ಟರ್ಕಿ ಮೂಲದ ನಟ ಆಗಿರುವಂತಹ ಕಾಗ್ಲರ್ ಎರ್ಟ್ರುಗಲ್. ಈತ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬ ಶಿಕ್ಷಕ ಈತನಿಗೆ ಮನಸೋ ಇಚ್ಛೆ ಹೊಡೆಯುತ್ತಿದ್ದರು. ಇದನ್ನೇ ನೆನಪಿಟ್ಟುಕೊಂಡ ಆ ನಟ ತಾನು ಬೆಳೆದು ದೊಡ್ಡವನಾಗಿ ನಟನಾಗಿ ಖ್ಯಾತಿಯನ್ನು ಪಡೆದುಕೊಂಡ ನಂತರ ಕೈಗೆ ಹಣ ಬಂದ ಮೇಲೆ ಈಗ ತಾನು ಕಲಿಸಿರುವಂತಹ ಶಾಲೆಯನ್ನು ಯಾವ ಸ್ಥಿತಿಗೆ ತಂದಿದ್ದಾನೆ ಎಂದು ನೋಡಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ತಾನು ಓದಿರುವಂತಹ ಶಾಲೆಯನ್ನು ತನ್ನ ಸ್ವಂತ ದುಡ್ಡಿನಲ್ಲಿ ಖರೀದಿ ಮಾಡಿ ನಂತರ ಅದನ್ನು ನೆಲಸಮಗೊಳಿಸಿದ್ದಾನೆ. ಈ ವಿಚಾರದ ಬಗ್ಗೆ ಖುದ್ದಾಗಿ ಅವರೇ ಬಹಿರಂಗಪಡಿಸಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗುವಂತೆ ಮಾಡಿದೆ.

ನಟ ತಾನು ಚಿಕ್ಕವನಿರಬೇಕಾದರೆ ಮೇಷ್ಟ್ರು ನನಗೆ ಏಟು ನೀಡಿದ್ದಕ್ಕಾಗಿ ಈ ರೀತಿ ಶಾಲೆಯನ್ನು ಖರೀದಿಸಿ ನೆಲಸಮ ಮಾಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಆದರೆ ಇದನ್ನು ಗಮನಿಸಿರುವಂತಹ ಸೋಶಿಯಲ್ ಮೀಡಿಯಾದ ನೆಟ್ಟಿಗರು ಚಿಕ್ಕ ವಯಸ್ಸಲ್ಲಿ ಇರಬೇಕಾದರೆ ಮೇಷ್ಟ್ರು, ಬುದ್ಧಿ ಬರಲಿ ಅಂತ ಹೊಡೆಯೋದು ಸರ್ವೇ ಸಾಮಾನ್ಯ ಅದಕ್ಕೆ ಈಗ ಮಾಡೋದು ಎನ್ನುವುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.