Entertainment: ಲಕ್ಷ ಲಕ್ಷ ಸಂಬಳ ಬರ್ತಿದ್ದ ಕೆಲಸವನ್ನ ಬಿಟ್ಟಿದ್ದು ಯಾಕೆ ಕಲರ್ಸ್ ಕನ್ನಡ ವಾಹಿನಿಯ ಮಾಜಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್!

Entertainment: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕಿರುತೆರೆ ಲೋಕದಲ್ಲಾದರೆ ಕಲಾವಿದರ ಬಗ್ಗೆ ಪರಿಚಯ ಇರುವುದು ಸಾಮಾನ್ಯ ಅಥವಾ ಸಿನಿಮಾ ರಂಗದ ಹೀರೋ ಹೀರೋಯಿನ್ ಹಾಗೂ ಬೇರೆ ರೀತಿಯ ಕಲಾವಿದರ ಬಗ್ಗೆ ತಿಳಿದುಕೊಂಡಿರಬಹುದು. ಕೆಲವೊಂದು ಸಮಯಗಳಲ್ಲಿ ಸಿನಿಮಾ ಪ್ರೊಡ್ಯೂಸರ್ ಹಾಗೂ ನಿರ್ದೇಶಕರ ಬಗ್ಗೆ ಕೂಡ ತಿಳಿದುಕೊಂಡಿರಬಹುದು. ಆದರೆ ನಾವು ಇವತ್ತಿನ ಲೇಖನದಲ್ಲಿ ಮಾತನಾಡೋಕೆ ಹೊರಟಿರೋದು ಕಲರ್ಸ್ ಕನ್ನಡ ವಾಹಿನಿಯ ಮಾಜಿ ಬುಸಿನೆಸ್ ಹೆಡ್ ಆಗಿರುವಂತಹ ಪರಮೇಶ್ವರ್ ಗುಂಡ್ಕಲ್ ಅವರ ಬಗ್ಗೆ. ಸಾಕಷ್ಟು ಜನರಿಗೆ ಇವರ ಬಗ್ಗೆ ತಿಳಿದಿದೆ. ಅವರ ನೇತೃತ್ವದಲ್ಲಿಯೇ ಕನ್ನಡ ಕೆಲಸ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ ನಡಿತಾ ಇತ್ತು. ಕೆಲವು ಸೀಸನ್ಗಳಲ್ಲಿ ಅವರು ಡೈರೆಕ್ಟರ್ ಆಗಿ ಕೂಡ ಕೆಲಸವನ್ನು ನಿರ್ವಹಿಸಿದ್ದಾರೆ.

ಆದರೆ ಈಗಾಗಲೇ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹಾಗೂ ನಿಮಗೂ ಕೂಡ ತಿಳಿದಿರುವ ಹಾಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಸ್ಥಾನದಿಂದ ರಾಜೀನಾಮೆ ಕೊಟ್ಟು ಕೆಳಗಿಳಿದಿದ್ದಾರೆ ಇದಕ್ಕೆ ಕಾರಣ ಏನು ಅಂತ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು.

ಲಕ್ಷ ಲಕ್ಷ ಸಂಬಳ ಬರುತ್ತಿದ್ದ ಕೆಲಸದಿಂದ ಕೆಳಗಿಳಿದಿದ್ಯಾಕೆ?

ಲಕ್ಷ ಲಕ್ಷ ಸಂಬಳ ಬರುತ್ತಿದ್ದ ಬಿಸಿನೆಸ್ ಹೆಡ್ ಸ್ಥಾನದಿಂದ ಪರಮೇಶ್ವರ್ ಗುಂಡ್ಕಲ್ ಅವರು ಕೆಳಗಿಳಿದಿದ್ದು ಯಾಕೆ ಅನ್ನೋದನ್ನ ನೋಡೋದಾದ್ರೆ ಒಂದು ಸಿನಿಮಾ ನಿರ್ದೇಶನ ಮಾಡುವಂತಹ ಉದ್ದೇಶದಿಂದ ಎಂಬುದಾಗಿ ತಿಳಿದುಬರುತ್ತೆ. ಸದ್ಯಕ್ಕೆ ಡಾಲಿ ಧನಂಜಯ್ ಅವರನ್ನು ಇಟ್ಕೊಂಡು ಕೋಟಿ ಎನ್ನುವಂತಹ ಸಿನಿಮಾ ಮೂಲಕ ಜನರಿಗೆ ತಮ್ಮ ನೆಚ್ಚಿನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ.

ಪರಮೇಶ್ವರ್ ಅವರು ಚಿಕ್ಕ ವಯಸ್ಸಿನಲ್ಲಿ ಕರೆಂಟ್ ಕೂಡ ಇಲ್ಲದ ಸ್ಥಳದಲ್ಲಿ ಬೆಳೆದು ಬಂದವರು. ರೇಡಿಯೋ ಕೇಳಿಕೊಂಡು ನಂತರ ಪತ್ರಕರ್ತರಾಗಿ ಮಾತ್ರವಲ್ಲದೆ ಟೆಲಿವಿಷನ್ ಕ್ಷೇತ್ರದಲ್ಲಿ ಕೂಡ ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಟೆಲಿವಿಜನ್ ಕ್ಷೇತ್ರದಲ್ಲಿ ನಾನು ನಿವೃತ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂಬುದಾಗಿ ಭಾವಿಸಿದೆ ಅದಕ್ಕಾಗಿಯೇ ಕೆಲಸ ಬಿಟ್ಟು ಕೋಟಿ ಸಿನಿಮಾದ ನಿರ್ದೇಶನ ಪ್ರಾರಂಭ ಮಾಡಿದ್ದೇನೆ ಎಂಬುದಾಗಿ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದೆ ಹೊಸದಾಗಿ ಜಿಯೋ ಸಿನಿಮಾದ ಕನ್ನಡ ವಿಭಾಗದ ಹೆಡ್ ಕೂಡ ಆಗಿದ್ದಾರೆ.

ಪರಮೇಶ್ವರ್ ಗುಂಡ್ಕಲ್ ಅವರನ್ನ ನೆನಪು ಮಾಡಿಕೊಂಡಾಗಲೆಲ್ಲ ಬಿಗ್ ಬಾಸ್ ಕಾರ್ಯಕ್ರಮವನ್ನು ಅವರು ಹ್ಯಾಂಡಲ್ ಮಾಡಿಕೊಂಡು ಬರುತ್ತಿದ್ದ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ಬಿಗ್ ಬಾಸ್ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು ಹಾಗೂ ಮೆಚ್ಚುಗೆಗೆ ಕೂಡ ಪಾತ್ರವಾಗಿತ್ತು. ಇದು ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಕೂಡ ಈಗ ಪರಿಣಾಮ ಬೀರಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.