ನೋ ಪಾರ್ಕಿಂಗ್ ಬೋರ್ಡಿನ ಕೆಳಗೆ ನಿಲ್ಲಿಸಿದ ವಾಹನಗಳಿಗೆ ದಂಡ; ಫೋಟೋ ತೆಗೆದು ಕಳಿಸಿದವರಿಗೆ ಬಹುಮಾನ!

ಈಗ ಎಲ್ಲಿದ್ರೂ ವಾಹನಗಳದ್ದೇ ಹಾವಳಿ, ಜನನಿಬಿಡ ಪ್ರದೇಶದಲ್ಲಿ ಅಥವಾ ಖಾಲಿ ಜಾಗವಿರಲಿ ಅಲ್ಲಿ ಯಾರ್ ಇಲ್ಲದಿದ್ದರೂ ಒಂದಿಷ್ಟು ವಾಹನಗಳು ಇದ್ದೇ ಇರುತ್ತೆ. ಯಾಕೆಂದರೆ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ನಗರ ಪ್ರದೇಶಗಳಲ್ಲಂತೂ ರಸ್ತೆಯುದ್ದಕ್ಕೂ ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದನು ಕಾಣಬಹುದು. ಜನರು ಓಡಾಡುವುದಕ್ಕೂ ಕಷ್ಟವಾಗುವಷ್ಟು ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಆದರೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಹಾಗಿಲ್ಲ. ಅದಕ್ಕೆ ಅದರದೇ ಆದ ನಿಯಮಗಳನ್ನು ಸರ್ಕಾರ ವಿಧಿಸಿದೆ. ಹಾಗಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.

 ಕೆಲವು ಪ್ರದೇಶಗಳು ವಾಹನಗಳ ನಿಲುಗಡೆಗೆ ನಿಷಿದ್ಧ. ಆದರೂ ನೋ ಪಾರ್ಕಿಂಗ್ ನೋಟಿಸ್ ಬೋರ್ಡ್ ಇರುವಲ್ಲಿ ಕಾರು ಅಥವಾ ಇತರ ವಾಹನಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಇದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದರೆ ವಾಹನಗಳ ಎತ್ತಂಗಡಿ ಖಚಿತ. ಆದರೂ ಅದೆಷ್ಟೋ ವಾಹನಗಳು ಟ್ರಾಫಿಕ್ ಪೊಲೀಸರ ಗಮನಕ್ಕೆ ಬರುವುದೇ ಇಲ್ಲ. ಸದಾ ನೋ ಪಾರ್ಕಿಂಗ್ ಬೋರ್ಡ್ ಅಡಿಯಲ್ಲಿ ಪಾರ್ಕಿಂಗ್ ಮಾಡಿ ಜನರಿಗೆ ತೊಂದರೆ ಕೊಡುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ಸಕ್ಕತ್ ಪ್ಲಾನ್ ಒಂದನ್ನು ಹಾಕಿದೆ. ಅದೇನು ಗೊತ್ತಾ ?!

ಹೌದು, ಕೇಂದ್ರ  ಸರ್ಕಾರ  ಹೊಸದಾದ ಯೋಜನೆಯೊಂದನ್ನ ತರಲಿದೆ. ಈ ಯೋಜನೆಯ ಪ್ರಕಾರ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದರೆ ಅವರಿಗೆ ದಂಡ. ಹಾಗೆಯೇ ಈ ರೀತಿ ಪಾರ್ಕ್ ಮಾಡಿರುವ ವಾಹನಗಳ ಫೋಟೋ ತೆಗೆದು ಪೊಲೀಸರಿಗೆ ಕಳುಹಿಸಿದವರಿಗೆ ಬಹುಮಾನ! ಹೌದು ನೋ ಪಾರ್ಕಿಂಗ್ ಬೋರ್ಡ್ ಇದ್ದರೂ, ಅಲ್ಲಿಯೇ ತಮ್ಮ ಅ ವಾಹನಗಳನ್ನ ಪಾರ್ಕ್ ಮಾಡಿ ಇತರರಿಗೆ ತೊಂದರೆಯನ್ನ ನೀಡುವಂತಹ ಬೇಜವಾಬ್ದಾರಿ ಚಾಲಕರಿದ್ದಾರೆ. ಇಂತಹ ರಸ್ತೆ ನಿಯಮವನ್ನು ಮುರಿಯುವ ಚಾಲಕರಿಗೆ ಸರಿಯಾದ ಬುದ್ಧಿ ಕಲಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಅದೇನೆಂದರೆ, ನೋ ಪಾರ್ಕಿಂಗ್  ಬೋರ್ಡ್ ಎಲ್ಲಿದೆಯೋ ಅಲ್ಲಿ ವಾಹನಗಳು ನಿಲ್ಲಿಸಿದ್ದನ್ನು ಕಂಡರೆ ಸ್ಥಳದಲ್ಲಿಯೇ ಅವರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಅಷ್ಟೇ ಅಲ್ಲ, ಹೀಗೆ ನೋ ಪಾರ್ಕಿಂಗ್ ಇದ್ದರೂ ಯಾವುದೇ ವಾಹನ ನಿಲ್ಲಿಸಿದ್ದನ್ನು ಕಂಡು ನಾಗರಿಕರು ಫೋಟೋ ತೆಗೆದು ಸರ್ಕಾರಕ್ಕೆ ಕಳುಹಿಸಬಹುದು. ಯಾವುದೇ ಪೊಲೀಸ್ ಕ್ಯಾಮೆರಾ ಅಥವಾ ಸಿಸಿಟಿವಿಯ ಅಗತ್ಯವಿಲ್ಲ, ಇಂಥ ವಾಹನಗಳನ್ನು ಕಂಡರೆ ನೀವೇ ಫೋಟೋ ತೆಗೆದು ಪೊಲೀಸರಿಗೆ ತಲುಪಿಸಬಹುದು. ಹೀಗೆ ಫೋಟೋ ತೆಗೆದು ಸಂಬಂಧಪಟ್ಟವರಿಗೆ ಕೊಟ್ಟರೆ 500 ರೂಪಾಯಿ ಬಹುಮಾನವನ್ನು ಸರ್ಕಾರ ಘೋಷಿಸಿದೆ.

ಈ ರೀತಿ ಬಹುಮಾನವನ್ನು ಘೋಷಣೆ ಮಾಡಿರುವ ಸರ್ಕಾರ, ಈ ಮೂಲಕ ಸಂಚಾರಿ ನಿಯಮವನ್ನು ಜನರು ಇನ್ನಷ್ಟು ಪಾಲಿಸುವಂತೆ ಮಾಡಲು ಹೊಸ ಯೋಜನೆಗಳನ್ನು ರೂಪಿಸಿದೆ. ಸದ್ಯದಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

Leave A Reply

Your email address will not be published.