Hardik Pandya: ವಿಶ್ವ ಕಪ್ ಪ್ರಾರಂಭ ಆಗುವುದಕ್ಕಿಂತ ಮುಂಚೇನೆ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ?

Hardik Pandya: ಸದ್ಯಕ್ಕೆ ಐಪಿಎಲ್ ನಡೀತಾ ಇದ್ದು ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ಮುಗಿದ್ರೆ ಈ ಬಾರಿ ಐಪಿಎಲ್ ನ ವಿನ್ನರ್ ಯಾರು ಎಂಬುದಾಗಿ ತಿಳಿದು ಬರುತ್ತದೆ. ಇದರ ನಡುವೆ ಹಾರ್ದಿಕ್ ಪಾಂಡ್ಯ ಅವರ ಜೀವನದಲ್ಲಿ ಬಿರುಗಾಳಿ ಎದ್ದಿರುವುದು ಕಂಡುಬಂದಿದೆ. ಹೌದು ನಾವು ಮಾತಾಡ್ತಿರೋದು ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನದ ಬಗ್ಗೆ. ಮೊದಮೊದಲಿಗೆ ಇದನ್ನು ನೋಡಿದಂತಹ ಪ್ರತಿಯೊಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುತ್ತಿದೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಬಹುತೇಕ ಎಲ್ಲಾ ಮೂಲಗಳು ಕೂಡ ಇದು ನಿಜ ಎಂಬುದಾಗಿ ಪ್ರತಿಪಾದಿಸುತ್ತವೆ. ಅಷ್ಟಕ್ಕೂ ಏನಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ವಿಶ್ವಕಪ್ ಗೂ ಮುನ್ನ ಹಾರ್ದಿಕ್ ಪಾಂಡ್ಯ ಜೀವನದಲ್ಲಿ ಬಿರುಗಾಳಿ!

ಹೌದು ಕೇಳಿ ಬಂದಿರುವಂತಹ ಮಾಧ್ಯಮ ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ಆಗಿರುವಂತಹ ನತಾಶಾ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದು ಬಹುತೇಕ ಖಾತ್ರಿಯಾಗಿದೆ. ನತಾಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಕೂಡ ಹಾಕಿಕೊಂಡಿದ್ದರು. ಆದರೆ ಈಗ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ತೆಗೆದುಹಾಕಿರೋದು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೀಡಿಯಾ ಮೂಲಗಳು ಕೂಡ ಇವರಿಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದು ಪಕ್ಕ ಎಂಬುದಾಗಿ ಹೇಳ್ತಾ ಇರೋದು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಕೆಲವೊಂದು ಸುದ್ದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿಗೆ ಡಿವೋರ್ಸ್ ನೀಡಿದರೆ ತಮ್ಮ ಆಸ್ತಿಯ 70 ಪ್ರತಿಶತ ಪ್ರಮಾಣವನ್ನು ಅವರ ಹೆಸರಿಗೆ ಬರೆದು ಕೊಡಬೇಕು ಎಂಬುದಾಗಿ ನಿಯಮಗಳನ್ನು ಕೂಡ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇಲ್ಲಿ ಎಷ್ಟು ಮಟ್ಟಿಗೆ ನಿಜ ಅಥವಾ ಸುಳ್ಳು ಅನ್ನೋದನ್ನ ದಂಪತಿಗಳ ಮುಂದೆ ಬಂದು ಹೇಳಿಕೊಳ್ಳಬೇಕಾಗಿದೆ. ಇತ್ತೀಚಿಗಷ್ಟೇ ಮುಂಬೈ ಇಂಡಿಯನ್ಸ್ ಕನ್ನಡದ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಿಂದ ಕೂಡ ಸಾಕಷ್ಟು ವೈಯಕ್ತಿಕ ಬೇಸರವನ್ನು ಅನುಭವಿಸಿದ್ರು. ಈಗ ಇದು ಮತ್ತೊಂದು ಆಘಾತದ ರೂಪದಲ್ಲಿ ಅವರನ್ನು ಕಾಡುತ್ತಿದೆ ಎಂದು ಹೇಳಬಹುದಾಗಿದೆ.

ನಿಜಕ್ಕೂ ಕೂಡ ಇದು ನಿಜವಾಗಿದ್ರೆ ಹಾರ್ದಿಕ್ ಪಾಂಡ್ಯ ಅವರು ತಮ್ಮ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ.

Comments are closed.