kannada Serial: ಲಕ್ಷ್ಮೀ ಬಾರಮ್ಮ ಧಾರವಾಹಿಯ ಚಿನ್ನು ಹಾಗೂ ಗೊಂಬೆ ಒಂದೇ ಸಮಯದಲ್ಲಿ ಕೊಟ್ರು ರಾಜ್ಯವೇ ಖುಷಿ ಪಡೋ ಸುದ್ದಿ; ಏನಾಗಿದೆ ಗೊತ್ತಾ?

kannada Serial: ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇವತ್ತಿನ ಕಲರ್ಸ್ ಕನ್ನಡ ಚಾನೆಲ್ ಅಂದರೆ ಅಂದಿನ ಈ ಟಿವಿ ಕನ್ನಡದಲ್ಲಿ 2013ನೇ ಮಾರ್ಚ್ ತಿಂಗಳ ನಾಲ್ಕನೇ ದಿನಾಂಕದಂದು ಅತ್ಯಂತ ಹೆಚ್ಚು ಜನಪ್ರಿಯವಾಗಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿ ಪ್ರಸಾರವಾಗುವುದಕ್ಕೆ ಪ್ರಾರಂಭವಾಗುತ್ತದೆ. ಈ ಧಾರವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನೇಹಾ ಅವರು ಕಾಣಿಸಿಕೊಂಡರೆ ಚಿನ್ನು ಪಾತ್ರದಲ್ಲಿ ಕವಿತಾ ಗೌಡ ಅವರು ಕಾಣಿಸಿಕೊಳ್ಳುತ್ತಾರೆ. ಇಬ್ಬರೂ ಕೂಡ ಈ ಪಾತ್ರದ ಮೂಲಕ ಇವತ್ತಿಗೂ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದ್ದಾರೆ. ಲಕ್ಷ್ಮಿ ಚಂದು ಹಾಗೂ ಗೊಂಬೆ ಈ ಮೂರು ಪಾತ್ರಗಳು ಲಕ್ಷ್ಮಿ ಬಾರಮ್ಮ ಧಾರವಾಹಿಯ ಜೀವಾಳ ಆಗಿದ್ದವು ಎಂದರು ಕೂಡ ತಪ್ಪಾಗಲಾರದು. 2100ಕ್ಕೂ ಅಧಿಕ ಎಪಿಸೋಡ್ಗಳ ಯಶಸ್ವಿ ಪ್ರಯಾಣದ ನಂತರ ಲಕ್ಷ್ಮೀ ಬಾರಮ್ಮ ಧಾರವಾಹಿ 2020ರಲ್ಲಿ ಕೊನೆಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಯಶಸ್ವಿ ಧಾರವಾಹಿಯಾಗಿ ಲಕ್ಷ್ಮೀ ಬಾರಮ್ಮ ಕಾಣಿಸಿಕೊಂಡಿದೆ.

ಚಿನ್ನು ಹಾಗೂ ಗೊಂಬೆಯಿಂದ ಇಡೀ ರಾಜ್ಯಕ್ಕೆ ಸಿಕ್ಕಿದೆ ಖುಷಿ ಪಡುವ ಸುದ್ದಿ!

ಇನ್ನು ಈ ಸಮಯದಲ್ಲಿ ಚಿನ್ನು ಹಾಗೂ ಗೊಂಬೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನೇಹ ಹಾಗೂ ಕವಿತಾ ಗೌಡ ಇಬ್ರು ಕೂಡ ತಾಯಿತನದ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಅದು ಕೂಡ ಒಂದೇ ಸಮಯದಲ್ಲಿ ಅನ್ನೋದು ಮತ್ತೊಂದು ಆಶ್ಚರ್ಯದ ವಿಚಾರವಾಗಿದೆ. ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಗೌಡ ಅವರು ಚಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಂದನ್ ಗೌಡ ಅವರನ್ನೇ ಮದುವೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ಇದೇ ಮೇ ತಿಂಗಳಿನಂದು ದಂಪತಿಗಳಿಬ್ಬರೂ ಕೂಡ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎನ್ನುವಂತಹ ಅಧಿಕೃತ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳ ಮುಖಾಂತರ ಹೊರ ಹಾಕಿದ್ದಾರೆ. 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ ಈಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಕಡೆ ಗೊಂಬೆ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದ ನೇಹಾ ರಾಮಕೃಷ್ಣ ಅವರು ಕೂಡ ಕನ್ನಡದ ಪ್ರೇಕ್ಷಕರಿಗೆ ತಮ್ಮ ವೈಯಕ್ತಿಕ ಜೀವನದ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು 2018ರಲ್ಲಿ ಮದುವೆಯಾಗಿದ್ದ ನೇಹ ಚಂದನ್ ಬರೋಬ್ಬರಿ ಆರು ವರ್ಷಗಳ ನಂತರ ಈಗ ಮಗುವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ನೇಹಾ ಹಾಗೂ ಚಂದನ್ ಇಬ್ರು ಕೂಡ ಮೇ 31ನೇ ದಿನಾಂಕದಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಬಹಿರಂಗ ಮಾಡಿದೆ.

ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದು ಈಗ ತಮ್ಮ ಜೀವನದ ಅತ್ಯಂತ ಪ್ರಮುಖ ಭಾಗ ಆಗಿರುವಂತಹ ತಾಯಿತನದ ಸಂತೋಷವನ್ನು ಕೂಡ ಇಬ್ಬರು ಜೊತೆಯಾಗಿ ಕಾಣುವುದಕ್ಕೆ ಹೊರಟಿರೋದು ನಿಜಕ್ಕೂ ಕಾಕತಾಳಿಯಕ್ಕಿಂತ ಹೆಚ್ಚಾಗಿ ಸಂತೋಷದ ವಿಚಾರವಾಗಿದೆ ಎಂದು ಹೇಳಬಹುದಾಗಿದೆ.

Comments are closed.