ಫೀನಿಕ್ಸ್ ಹಕ್ಕಿಯ ಚಿತ್ರವನ್ನ ಮನೆಯಲ್ಲಿಟ್ಟು ನೋಡಿ ನೀವು ಶ್ರೀಮಂತರಾಗೋದ್ರಲ್ಲಿ ನೋ ಡೌಟ್!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಲವಾರು ವಿಚಾರಗಳನ್ನ ಹೀಗೆ ಎಂದು ನಿರ್ಧರಿಸಲಾಗುತ್ತದೆ. ಅದರಲ್ಲೂ ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನ ಇಟ್ಟರೆ ಒಳ್ಳೆಯದಾಗುತ್ತೆ ಯಾವ ದಿಕ್ಕಿನಲ್ಲಿ ಮನೆ ಇರಬೇಕು ಮೊದಲಾದವುಗಳನ್ನು ಹೇಳಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕು ಎನ್ನುವುದು ಬಹಳ ಮುಖ್ಯ ಸರಿಯಾದ ದಿಕ್ಕಿನಲ್ಲಿ ನಾವು ಮಾಡುವ ಕೆಲಸ ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತದೆ ಎನ್ನುವ ನಂಬಿಕೆ ಇದೆ.

ಹೌದು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಯಾವ ಫೋಟೋವನ್ನು ಇಟ್ಟರೆ ಒಳ್ಳೆಯದು ಅನ್ನುವುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನೀವು ದೇವರ ಫೋಟೋವನ್ನು ಅಥವಾ ಇತರ ಫೋಟೋಗಳನ್ನು ಮನೆಯಲ್ಲೇ ತೂಗು ಹಾಕಬಾರದು. ಇನ್ನು ಮನೆಯಲ್ಲಿ ಯಾವ ಫೋಟೋ ಇದ್ದರೆ ಉತ್ತಮ ಎನ್ನುವುದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ಕೊಡ್ತೀವಿ. ವಾಸ್ತು ತಜ್ಞರ ಪ್ರಕಾರ ಪಕ್ಷಿಗಳು ಮುಕ್ತ ಜೀವನದ ಸಂಕೇತ. ಹಾಗಾಗಿ ನಾವು ಪಕ್ಷಿಗಳಂತೆ ರೆಕ್ಕೆ ಬಿಚ್ಚಿ ಹಾರುವುದಕ್ಕೆ ಕಲಿತಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಮನೆಯಲ್ಲಿ ಹಕ್ಕಿಯ ಫೋಟೋ ಇದ್ದರೆ ಅದು ನಮಗೆ ಸ್ಪೂರ್ತಿ ಆಗುತ್ತೆ. ಅದರಲ್ಲೂ ವಾಸ್ತು ಪ್ರಕಾರ ಹೇಳುವುದಾದರೆ ಮನೆಯಲ್ಲಿ ಫೀನಿಕ್ಸ್ ಹಕ್ಕಿಯ ಫೋಟೋವನ್ನು ಇಡಬೇಕು.

ಫೀನಿಕ್ಸ್ ಪಕ್ಷಿಯ ಫೋಟೋವನ್ನು ಮನೆಯ ದಕ್ಷಿಣ ಭಾಗದಲ್ಲಿ ಇರಿಸಿದರೆ ಅದು ಮಂಗಳಕರ ಎಂದು ಕರೆಸಿಕೊಳ್ಳುತ್ತದೆ. ಹೌದು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ತರುವಂತಹ ಹಕ್ಕಿ ಇದು. ಫೀನಿಕ್ಸ್ ಪಕ್ಷಿಯ ಫೋಟೋ ಮನೆಯಲ್ಲಿದ್ದರೆ ಆರ್ಥಿಕವಾಗಿಯೂ ಕೂಡ ಸಬಲರಾಗುತ್ತೇವೆ. ಮನೆಯ ಚಾವಡಿಯಲ್ಲಿ ಅಥವಾ ಲಿವಿಂಗ್ ರೂಮ್ ನಲ್ಲಿ ಫೀನೆಕ್ಸ್ ಪಕ್ಷಿಯ ಫೋಟೋವನ್ನು ಇಡಬೇಕು. ಇನ್ನು ಫೀನಿಕ್ಸ್ ಪಕ್ಷಿ ಶಕ್ತಿ ವೃದ್ಧಿ ಯಶಸ್ಸು ಇವುಗಳನ್ನು ಪ್ರತಿನಿಧಿಸುತ್ತೆ ಹಾಗಾಗಿ ಮನೆಯಲ್ಲಿ ಈ ಪಕ್ಷಿಯ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಂಡರೆ ಅದು ಕಷ್ಟದ ಹಾದಿಯನ್ನು ಕೂಡ ಉತ್ತಮವಾಗಿಸುತ್ತೆ.

ಇನ್ನು ಫೀನಿಕ್ಸ್ ಪಕ್ಷಿಯ ಹಿನ್ನೆಲೆಯನ್ನು ನೋಡುವುದಾದರೆ, ಪುರಾಣ ಕಾಲದಲ್ಲಿ ಫೀನಿಕ್ಸ್ ಹಕ್ಕಿಯ ಬಗ್ಗೆ ಕಥೆಗಳಿವೆ. ಭಾರತ ಗ್ರೀಕ್ ಮತ್ತು ಈಚೀಫ್ ನಲ್ಲಿ ಪೌರಾಣಿಕ ಕಥೆಗಳಲ್ಲಿ ಫೀನಿಕ್ಸ್ ಹಕ್ಕಿಯ ಪ್ರಸ್ತಾಪವಿದೆ. ಈ ಹಕ್ಕಿ ಅತ್ಯಂತ ಪವರ್ ಫುಲ್. ಪುರಾಣದ ಕಥೆಯ ಪ್ರಕಾರ ಬಂಗಾರ ಮತ್ತು ಕಡು ಕೆಂಪು ಬಣ್ಣದಲ್ಲಿರುವ ಈ ಪಕ್ಷಿ ಬೆಂಕಿಯಲ್ಲಿ ಸುಟ್ಟರೂ ಕೂಡ ತನ್ನ ಬೂದಿಯಿಂದ ಮತ್ತೆ ಹೊಸದಾಗಿ ಹುಟ್ಟಿ ಬರುತ್ತೆ. ಹಾಗಾಗಿ ಹೊಸ ಜೀವನ ಹೊಸತನಕ್ಕೆ ಸಂಕೇತವಾದದ್ದು ಫೀನೆಕ್ಸ್ ಪಕ್ಷಿ. ಈ ಪಕ್ಷಿ ನಿಜವಾಗಲೂ ಇದ್ದೇ ಇಲ್ಲವೇ ಎನ್ನುವುದರ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ ಆದರೆ ಫೆಂಗ್ ಶುಯಿ ಪ್ರಕಾರ ಫಿನಿಕ್ಸ್ ಪಕ್ಷಿ ಜೀವನಕ್ಕೆ ಒಳಿತನ್ನು ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಸಾಕಷ್ಟು ಜನ ಈ ಹಕ್ಕಿಯ ಟ್ಯಾಟೂವನ್ನೂ ಕೂದ ಹಾಕಿಸಿಕೊಳ್ಳುತ್ತಾರೆ. ನೀವು ಕೂಡ ತಪ್ಪದೇ ಈ ಹಕ್ಕಿಯ ಚಿತ್ರವನ್ನ ಮನೆಯ ದಕ್ಷಿಣ ಭಾಗದಲ್ಲಿ ಇಟ್ಟುಕೊಂಡರೆ ಒಳಿತಾಗುತ್ತೆ.

Leave A Reply

Your email address will not be published.