Astrology: ಬೆಳಿಗ್ಗೆ ಎದ್ದ ಕೂಡಲೇ ಮೊದಲು ವಸ್ತು ಕಣ್ಣಿಗೆ ಬಿದ್ರೆ ಮುಗೀತು, ಆ ದಿನ ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು; ಯಾವ ವಸ್ತು ಗೊತ್ತೇ!

Astrology: ಅಯ್ಯೋ ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ನಪ್ಪಾ, ಯಾವೊಂದು ಕೆಲಸವೂ ಆಗಿಲ್ಲ ಎಂದು ನಮ್ಮನ್ನ ನಾವೇ ಬೈದುಕೊಳ್ಳುತ್ತ್ತೇವೆ ಅಲ್ವಾ?ಸಾಮಾನ್ಯವಾಗಿ ಇಂದು ಜನ ಎದ್ದು ಕೂಡಲೇ ಮೊದಲು ನೋಡುವುದೇ ದಿಂಬಿನ ಅಡಿಯಲ್ಲಿರುವ ಮೊಬೈಲ್ (Mobile).  ದಿನ ಶುರುವಾಗೊದೆ ಮೊಬೈಲ್ ಸ್ಕ್ರೀನ್ ನೋಡುವುದರ ಮೂಲಕ. ಹಿಂದೂ ಶಾಸ್ತ್ರಗಳು ಹೇಳುವಂತೆ ಕೆಲವು ವಸ್ತುಗಳನ್ನು ಬೆಳಗ್ಗೆ ಎದ್ದು ನೋಡಿದರೆ ಅದು ಶುಭ ಸಂಕೇತ. ಅದೇ ರೀತಿ ಇನ್ನೂ ಕೆಲವು ವಸ್ತುಗಳನ್ನು ನೋಡಿದ್ರೆ ಅದು ಅಶುಭ. ಹಾಗಾದರೆ ಯಾವುದು ಶುಭ ಯಾವುದು ಅಶುಭ ನೋಡೋಣ.

JYO 1 | Live Kannada News
Astrology: ಬೆಳಿಗ್ಗೆ ಎದ್ದ ಕೂಡಲೇ ಮೊದಲು ವಸ್ತು ಕಣ್ಣಿಗೆ ಬಿದ್ರೆ ಮುಗೀತು, ಆ ದಿನ ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು; ಯಾವ ವಸ್ತು ಗೊತ್ತೇ! https://sihikahinews.com/dont-see-these-things-in-the-morning/

ಮೊದಲನೆಯದಾಗಿ ನೀವು ಗಂಟೆ, ಶಂಖ ಮೊದಲಾದ ವಾದ್ಯಗಳ ಶಬ್ದವನ್ನು ಕೇಳಿದರೆ ಖಂಡಿತವಾಗಿಯೂ ಆ ದಿನ ಬಹಳ ಉಲ್ಲಾಸದಿಂದ ಇರುತ್ತೀರಿ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಹಾಲು ತುಂಬಿದ ತಂಬಿಗೆ ಕಂಡರೆ ಅದೂ ಕೂಡ ಶುಭ ಸೂಚಕವೇ. ಇದನ್ನೂ ಓದಿ: Vastu tips; ಮಕ್ಕಳ ಸ್ಟಡಿ ರೂಂನಲ್ಲಿ ಇದೊಂದು ಚಿತ್ರ ಇಟ್ಟು ನೋಡಿ, ಓದದೆ ಇರುವ ಮಕ್ಕಳು ಏಕಾಗ್ರತೆಯಿಂದ ಓದಲು ಶುರು ಮಾಡುತ್ತಾರೆ!

ಇನ್ನು ಬೆಳಿಗ್ಗೆ ಎದ್ದಾಗ ಮೊದಲು ಹಲ್ಲಿ ಕಣ್ಣಿಗೆ ಬಿದ್ದರೆ ಅದೂ ಕೂಡ ಶುಭ. ಅದರಲ್ಲೂ ಹಳ್ಳಿ ಮೇಲ್ಮುಖವಾಗಿ ಚಲಿಸುವುದನ್ನು ಕಂಡ್ರೆ ಅದು ನಿಮ್ಮ ವ್ಯಾಪಾರ ವ್ಯವಹಾರಗಳು ಉತ್ತಮವಾಗಿವೆ ಎನ್ನುವುದನ್ನು ಸೂಚಿಸುತ್ತದೆ.

ಇನ್ನು ಪ್ರಕೃತಿಯ ಕೆಲವು ದೃಶ್ಯಗಳು ಕೂಡ ನಿಮಗೆ a ದಿನವೆಲ್ಲಾ ಶುಭ ಫಲವೇ. ಕಾಮಧೇನು ಕಲ್ಪವೃಕ್ಷ ಕಣ್ಣೆದುರು ಕಂಡರೆ ಕೈಮುಗಿದು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳಿ. ಇನ್ನು ಎದ್ದಾಗ ಗೋಮಾತೆ ಕಣ್ಣ ಎದುರಿಗೆ ಬಂದರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಆ ದಿನವಿಡೀ ನೀವು ಖುಷಿಯಾಗಿಯೇ ಇರುತ್ತೀರಿ. ಇದನ್ನೂ ಓದಿ: Birth Month: ನೀವು ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ್ದೀರಾ? ಹಾಗಾದರೆ ನಿಮ್ಮಷ್ಟು ವಿಶಿಷ್ಟವಾದ ಸ್ವಭಾವ ಬೇರೆಯಾರದ್ದೂ ಅಲ್ಲ; ಏನು ಗೊತ್ತಾ?

ಇನ್ನು ನೀವು ಎದ್ದ ತಕ್ಷಣ ಅಥವಾ ಮನೆಯಿಂದ ಹೊರ ಹೋಗುವಾಗ ಬಣ್ಣದ ಸೀರೆಯನ್ನು ಉಟ್ಟ ಮುತೈದೆ ಸಿಕ್ಕರೆ ಶುಭವೋ ಶುಭ. ಅದರಲ್ಲೂ ಕೆಂಪು ಬಣ್ಣದ ಸೀರೆ ಉಟ್ಟುಕೊಂಡು ಮುಟ್ಟಿದೆ ಎದುರಾದರೆ ನೀವು ಹೋಗಿರುವ ಕೆಲಸದಲ್ಲಿ 100% ಗೆಲುವು ಸಿಕ್ಕೆ ಸಿಗುತ್ತೆ ಎನ್ನಬಹುದು.

ಅದೇ ರೀತಿ ದಿನದಲ್ಲಿ ಒಮ್ಮೆಯಾದರೂ ಗೂಬೆ ಕಾಣಿಸಿಕೊಂಡರೆ ಅದು ಆರ್ಥಿಕವಾಗಿ ನಿಮ್ಮ ಸ್ಥಿತಿ ಸುಧಾರಿಸಲಿದೆ ಎಂಬುದನ್ನು ತಿಳಿಸುತ್ತದೆ. ನಿದ್ದೆಯಿಂದ ಎದ್ದಾಗ ನಿಮ್ಮ ನೆಚ್ಚಿನ ದೇವರ ವಿಗ್ರಹ /ಫೋಟೋ ನೋಡಿ ಕೈ ಮುಗಿದು ಮುಂದಿನ ಚಟುವಟಿಕೆಗಳನ್ನು ಆರಂಭಿಸಿ. ಅದೂ ಕೂಡ ಒಳ್ಳೆಯದು. ಅದೇ ರೀತಿ ಮಕ್ಕಳನ್ನ ದೇವರು ಎನ್ನುತ್ತೇವೆ. ಹಾಗಾಗಿ ಪುಟ್ಟ ಕಂದಮ್ಮನ ಮುಖ ನೋಡಿ ಕೆಲ್ಸಕ್ಕೆ ಹೋದ್ರೆ ನಿಮಗೆ ಹೋದ ಕೆಲಸದಲ್ಲಿಯೂ ನೆಮ್ಮದಿ.

ಯಾವ ವಸ್ತುಗಳನ್ನು ನೋಡಬಾರದು?

ಸ್ನೇಹಿತರೆ, ಶಾಸ್ತ್ರಗಳ ಪ್ರಕಾರ,ಇಂಥ ಕೆಲವು ವಸ್ತುಗಳನ್ನು ನೋಡಿದರೆ ಆ ದಿನ ನಿಮ್ಮ ಯಾವ ಕೆಲಸವೂ ಆಗುವುದಿಲ್ಲ. ಅಂತಹ ವಸ್ತುಗಳು ಯಾವವು ನೋಡೋಣ.

ತುಂಬಿದ ಕೊಡ ತುಳುಕವುದಿಲ್ಲ ಅಂತಾರೆ ಆದರೆ ಖಾಲಿ ಕೊಡವನ್ನೆ ಜನ ನೋಡಿದರೆ ಅದು ನಿಮ್ಮ ಜೇಬನ್ನು ಖಾಲಿ ಮಾಡುವಂತಹ ಚಿಹ್ನೆ. ನೀರು ತುಂಬಿದ ಕೊಡ ನೋಡಿದ್ರೆ ಶುಭ ಆದ್ರೆ ನೀವು ಹೊರಡುವಾಗ ಖಾಲಿ ಕೊಡ ಕಾಣಿಸಿದರೆ ಅದು ಅಶುಭದ ಸಂಕೇತ. ಇನ್ನು ಬೆಳಗ್ಗೆ ಎದ್ದು ಮುಖವನ್ನೂ ತೊಳೆಯದೆ ಸ್ನಾನ ಮಾಡದೆ ಕನ್ನಡಿಯಲ್ಲಿ ಮುಖವನ್ನು ನೋಡಿದರೆ ಅದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಅದೇ ರೀತಿ ಹರಿತವಾದ ಆಯುಧ, ಚಪ್ಪಲಿ, ಪೊರಕೆ, ತೆಳೆಯದೆ ಇತ್ತ ಪಾತ್ರೆ ಇಂತಹ ವಸ್ತುಗಳನ್ನು ನೋಡಿದ್ರೆ ಅದು ಆ ದಿನವಿಡೀ ಕೆಟ್ಟದ್ದನ್ನೇ ಮಾಡುತ್ತದೆ. ಯಾವ ಕೆಲಸದಲ್ಲಿಯೂ ಯಶಸ್ಸು ಸಿಗುವುದಿಲ್ಲ.

Comments are closed.