UPI Payments: ಗೂಗಲ್ ಪೇ ಪೋನ್ ಪೇ ಅತಿಯಾಗಿ ಬಳಸುತ್ತೀರಾ? ನಿಗದಿತ ಮೊತ್ತಕ್ಕಿಂತ ಹೆಚ್ಚು ವ್ಯವಹಾರ ಮಾಡಿದ್ದೀರಾ? ಹಾಗಾದರೆ ಮನೆಗೆ ಬರಬಹುದು ದಂಡ ಪಾವತಿಸಲು ಕರೆ, ಎಚ್ಚರ!

UPI Payments: ಸದ್ಯ ಡಿಜಿಟಲ್ (Digital) ಯುಗ ಆರಂಭವಾಗಿದೆ. ನಾವು ಯಾವುದೇ ಕಾರ್ಯವನ್ನು ಮನೆಯಲ್ಲಿಯೇ ಕುಳಿತು ನಿರ್ವಹಿಸಬಹುದು. ಸರ್ಕಾರಗಳು ಕೂಡ ಹಲವು ಸೇವೆಗಳನ್ನು ಆನ್ಲೈನ್ (Onlline) ಮೂಲಕವೇ ನೀಡುತ್ತಿದೆ. ಬ್ಯಾಂಕ್ಗಳು ಕೂಡ ಇದಕ್ಕೆ ಹೊರತಲ್ಲ. ಇದರಿಂದಾಗಿ ಮೊದಲಿನ ಹಾಗೆ ಸಣ್ಣ ಪುಟ್ಟ ಕೆಲಸಕ್ಕೂ ಬ್ಯಾಂಕಿಗೆ (Bank) ಹೋಗಿ ಸಾಲುಗಟ್ಟಿ ನಿಲ್ಲುವುದು ತಪ್ಪಿದೆ. ನೀವು ಯಾರಿಗಾದರೂ ಹಣ ಕಳುಹಿಸುವುದಾದರೂ ನೀವು ಗೂಗಲ್ ಪೇ (Google Pay), ಫೋನ್ (Phone Pay) ಪೇ ಅಥವಾ ಪೇಟಿಎಂ ಉಪಯೋಗಿಸಬಹುದು. ಆದರೆ ಇದಕ್ಕೂ ಮಿತಿ ಇದೆ ಎನ್ನುವುದು ನಿಮಗೆ ತಿಳಿದಿದಿಯೇ?

JYO 1 | Live Kannada News
UPI Payments: ಗೂಗಲ್ ಪೇ ಪೋನ್ ಪೇ ಅತಿಯಾಗಿ ಬಳಸುತ್ತೀರಾ? ನಿಗದಿತ ಮೊತ್ತಕ್ಕಿಂತ ಹೆಚ್ಚು ವ್ಯವಹಾರ ಮಾಡಿದ್ದೀರಾ? ಹಾಗಾದರೆ ಮನೆಗೆ ಬರಬಹುದು ದಂಡ ಪಾವತಿಸಲು ಕರೆ, ಎಚ್ಚರ! https://sihikahinews.com/you-must-know-upi-payment-limit/

ಹೌದು, ಬ್ಯಾಂಕ್ ಗಳ ನಿಯಮಗಳ ಪ್ರಕಾರ ನೀವು ಡಿಜಿಟಲ್ ರೂಪದಲ್ಲಿ ಹಣ ಕಳುಹಿಸುವುದಕ್ಕೆ ಮಿತಿ ಇದೆ. ಅದನ್ನು ಮೀರಿದರೆ ಬ್ಯಾಂಕ್ಗಳು ನಿಮಗೆ ದಂಡ ವಿಧಿಸುತ್ತವೆ.  ಶೀಘ್ರದಲ್ಲಿಯೇ ಹಣವನ್ನು ಎರಡು ರೂಪದಲ್ಲಿ ನಾವು ನೋಡುವ ಲಕ್ಷಣಗಳು ಕಂಡುಬರುತ್ತಿವೆ. ಒಂದು ಹಾರ್ಡ್ ಕ್ಯಾಶ್ ಇನ್ನೊಂದು ಸಾಫ್ಟ್ ಕ್ಯಾಶ್. ಜನರು ತಮ್ಮ ಪರ್ಸ್ನಲ್ಲಿ ಇಡುವ ಹಣದ ಜಾಗವನ್ನು ಇಂದು ಎಟಿಎಂ ಕಾರ್ಡ್ಗಳು ತುಂಬಿಕೊಂಡುಬಿಟ್ಟಿವೆ. ಹಾಗಾಗಿ ಇಂದಿನ ದಿನದಲ್ಲಿ ಹೆಚ್ಚಿನ ಜನರು ಡಿಜಿಟಲ್ ವ್ಯವಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಣ ತೆಗೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರ ನಡೆಸುವವರೂ ಸಹ ಯುಪಿಐ ಪೇಮೆಂಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ.  ಈ ಯುಪಿಐ ವ್ಯವಸ್ಥೆಯನ್ನು ಆರ್ ಬಿ ಐ ನಿಂದ ನಿಯಂತ್ರಿಸಲ್ಪಡುವ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆ ನಿರ್ವಹಿಸುತ್ತಿದೆ. ಇದನ್ನೂ ಓದಿ: Healthy Food: ಇನ್ನೂ ಒಂದು ಐವತ್ತು ವರ್ಷ ಹೆಚ್ಚಿಗೆ ಬದುಕಬೇಕೇ? ಅದಕ್ಕೆ ತಪ್ಪದೇ ಇದೊಂದು ಆಹಾರ ಸೇವನೆ ಮಾಡಿ. ಯಾವುದು ಗೊತ್ತೇ?

ಗೂಗಲ್ ಪೇ, ಪೋನ್ ಪೇ ಸೇರಿದಂತೆ ಹಲವು ಆಪ್ಗಳ ಮೂಲಕ ಸುಲಭವಾಗಿ ನಾವು ವ್ಯವಹಾರ ಮಾಡಬಹುದು. ಆದರೆ ಒಂದು ದಿನದಲ್ಲಿ ಇಷ್ಟೇ ಹಣ ಸಂದಾಯ ಮಾಡಬಹುದು ಎನ್ನುವ ನಿಯಮವಿದೆ.  ಯಾವುದೇ ಎರಡು ಬ್ಯಾಂಕ್ ಖಾತೆಗಳ ಮೂಲಕ ಕ್ಷಣಾರ್ಧದಲ್ಲಿ ನಾವು ಹಣ ವರ್ಗಾವಣೆ ಮಾಡಬಹುದು. ಈ ಯುಪಿಐ ವರ್ಗಾವಣೆ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಬದಲಾವಣೆ ಮಾಡಲಾಗುತ್ತಿರುತ್ತದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ ಯುಪಿಐ ಬಳಸಿ ಒಂದು ದಿನಕ್ಕೆ ಒಂದು ಲಕ್ಷ ರೂ.ಗಳ ವರೆಗೆ ವರ್ಗಾವಣೆ ಮಾಡಬಹುದು. ಅದು ಕೆಲವೇ ಕೆಲವು ಬ್ಯಾಂಕ್ಗಳಿಗೆ ಸೀಮಿತವಾಗಿದೆ. ಇನ್ನು ಭೀಮ್ ಯುಪಿಐನಲ್ಲಿ ಈ ಮಿತಿ ನಲವತ್ತು ಸಾವಿರ ರೂ.ಗಳಿವೆ. ಈ ವಹಿವಾಟನ್ನು ನೀವು ಭೀಮ್ ಯುಪಿಐ ಲಿಂಕ್ ಆಗಿರುವ ಖಾತೆಗಳಿಂದ ಮಾತ್ರ ಮಾಡಬಹುದು. ವ್ಯಾಪಾರ, ವ್ಯವಹಾರ ಮಾಡುವವರಿಗೆ ಒಂದು ದಿನಕ್ಕೆ ೨ ಲಕ್ಷ ರೂ.ಗಳ ಮಿತಿ ಹೇರಲಾಗಿದೆ. ಒಂದು ವೇಳೆ ನೀವು ಪೆಮೆಂಟ್ ಮಾಡಿದ ಹಣ ಅವರ ಖಾತೆಗೆ ಜಮೆ ಆಗದಿದ್ದಲ್ಲಿ ಮೂರು ದಿನದೊಳಗೆ ಅದು ನಿಮ್ಮ ಖಾತೆ ಜಮೆ ಆಗುತ್ತದೆ. ಇದನ್ನೂ ಓದಿ: Debit Card: ನಿಮ್ಮಲ್ಲಿ ಇದೊಂದು ಡೆಬಿಟ್ ಕಾರ್ಡ್ ಇದ್ರೆ ಹತ್ತು ಲಕ್ಷದ ವಿಮೆ ಫಿಕ್ಸ್; ಯಾವ ಬ್ಯಾಂಕ್ ನಲ್ಲಿ ಗೊತ್ತೇ?

ಎಸ್ಬಿಐ ಬ್ಯಾಂಕ್ನಲ್ಲಿ ನೀವು ಯುಪಿಐ ವಿಧಾನ ಬಳಸಿ ಒಂದು ದಿನದಲ್ಲಿ ೧ ಲಕ್ಷ ರೂ.ವರೆಗೆ ವರ್ಗಾವಣೆ ಮಾಡಬಹುದು. ಒಂದು ದಿನದಲ್ಲಿ ನೀವು ಹತ್ತು ಬಾರಿ ವರ್ಗಾವಣೆ ಮಾಡಬಹುದಾಗಿದ್ದು, ವರ್ಗಾವಣೆ ಮಿತಿ ಒಂದು ಲಕ್ಷ ರೂ. ಮೀರಿರಬಾರದು. ಎಚ್ಡಿಎಫ್ಸಿ ಬ್ಯಾಂಕ್ನಿಂದಲೂ ನೀವು ೧ ಲಕ್ಷ ರೂ. ವರ್ಗಾವನೆ ಮಾಡಬಹುದಾಗಿದೆ.

Comments are closed.