Agriculture Loan:ರೈತರಿಗೆ ಸಾಲ ನೀಡಲು ಬ್ಯಾಂಕ್ ಗಳ ಡ್ರಾಮಾ; ಸರ್ಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು; ರೈತರಿಗೆ ಯಾಕೆ ತಲುಪುತ್ತಿಲ್ಲ ಸರ್ಕಾರಿ ಯೋಜನೆ?

Agriculture Loan:

ಭಾರತ (India) ಕೃಷಿ (Agriculture) ಪ್ರಧಾನ ರಾಷ್ಟ್ರ. ಇಲ್ಲಿ ಶೇ. ೬೦ಕ್ಕಿಂತ ಹೆಚ್ಚು ರೈತರೇ ಇದ್ದಾರೆ. ಹಾಗಾಗಿ ಕೃಷಿ ಅಭಿವೃದ್ಧಿಗೆ, ಕೃಷಿಕರ ಬಾಳು ಹಸನುಗೊಳಿಸಲು ಸರ್ಕಾರ ಹಲವು ಯೋಜನೆ (Plan) ಗಳನ್ನು ತರುತ್ತವೆ. ಕೇಂದ್ರ ಸರ್ಕಾರವು ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ. ಇವೆಲ್ಲವುಗಳನ್ನು ಬ್ಯಾಂಕ್ಗಳ ಮೂಲಕವೇ ಜಾರಿ ಮಾಡಬೇಕಾಗುತ್ತದೆ. ಆದರೆ ಬ್ಯಾಂಕ್ (Bank)ಗಳು ಮಾತ್ರ ಇದನ್ನು ರೈತರಿಗೆ ತಲುಪಿಸುತ್ತಿಲ್ಲ. ಇದನ್ನೂ ಓದಿ: Kasturi Turmeric benefits:ಈ ಒಂದು ವಸ್ತು ಮನೆಯಲ್ಲಿದ್ರೆ ಬ್ಯೂಟಿಪಾರ್ಲರ್ ಗೆ ಗುಡ್ ಬೈ ಹೇಳಿ; ಮನೆಯಲ್ಲಿಯೇ ತ್ವಚೆಯ ಅಂದ ಹೆಚ್ಚಿಸಿಕೊಳ್ಳಿ
ರಾಷ್ಟ್ರಿಕೃತ ಬ್ಯಾಂಕುಗಳ ಗ್ರಾಮೀಣ ಭಾಗದ ಶಾಖೆಗಳು ರೈತರಿಗೆ ಸಾಲ ನೀಡಲು ನೀರಾಕರಿಸುತ್ತಿರುವುದರಿಂದ ಸರ್ಕಾರಗಳ ಬಹುತೇಕ ಯೋಜನೆಗಳು ಅರ್ಹ ರೈತರಿಗೆ ತಲುಪುತ್ತಿಲ್ಲ. ಇದರಿಂದಾಗಿ ಸರ್ಕಾರಿ ಯೋಜನೆಗಳ ಬಗ್ಗೆ ರೈತರು ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಗಳು ರೈತರಿಗಾಗಿ ತೆಗೆದಿರಿಸಿದ ಕೋಟ್ಯಂತರ ರೂ. ಅನುದಾನ ಹಾಗೆಯೇ ಕೊಳೆಯುತ್ತಿದೆ. ರೈತರಿಗೆ ಬೇಕಾದ ಸಹಾಯ ಸೂಕ್ತ ಸಮಯಕ್ಕೆ ಸಿಗದಿರುವುದರಿಂದ ರೈತರಿಗೆ ತೊಂದರೆ ಆಗುತ್ತಿರುವುದಂತೂ ಸತ್ಯ. ಇದನ್ನೂ ಓದಿ: UPI Payment: ಜಿ ಪೇ, ಫೋನ್ ಪೇ ಮೊದಲಾದ ಯುಪಿಐ ವಹಿವಾಟುದಾರರಿಗೆ ಶಾಕಿಂಗ್ ನ್ಯೂಸ್; ವಹಿವಾಟು ಮಿತಿಯಿಂದ ಬಳಕೆದಾರರು ಕಂಗಾಲು!


ರೈತರಿಗೆ ಸಾಲ ನೀಡಿದರೆ ಅವರು ಮರುಪಾವತಿ ಮಾಡುವುದಿಲ್ಲ ಎನ್ನುವ ಮನಃಸ್ಥಿತಿಯನ್ನು ಬ್ಯಾಂಕುಗಳು ಬೆಳೆಸಿಕೊಂಡು ಬಿಟ್ಟಿವೆ ಎಂದು ರೈತರು ಆರೋಪಿಸಿದ್ದಾರೆ. ಇದು ನಿಜವೂ ಕೂಡ. ಗ್ರಾಮೀಣ ಭಾಗದಲ್ಲಿರುವ ಬಹುತೇಕ ಬ್ಯಾಂಕುಗಳು ಬೆಳೆಸಾಲದ ನೆಪ ನೀಡಿ ಬೇರೆ ಸಾಲಗಳನ್ನು ನೀಡಲು ನಿರಾಕರಿಸುತ್ತಿವೆ. ಕೆಲವು ಬ್ಯಾಂಕುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಳೆಸಾಲ ಪಡೆದು ಸುಸ್ತಿಯಾಗಿರುವ ರೈತರ ಖಾತೆಗಳನ್ನು ಬ್ಲಾಕ್ ಮಾಡಿಬಿಟ್ಟಿವೆ. ಸರ್ಕಾರದಿಂದ ಅವರ ಖಾತೆಗೆ ವರ್ಗಾವಣೆ ಆಗಬೇಕಾದ ಹಣವನ್ನು ತಮ್ಮ ಸಾಲಕ್ಕೆ ಮುರಿದುಕೊಳ್ಳುತ್ತಿವೆ ಬ್ಯಾಂಕ್ ಗಳು. ಇದನ್ನೂ ಓದಿ: Pension Scheme: ಮದುವೆಯಾದ ಜೋಡಿ ಇಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ 18ಸಾವಿರ ರೂಪಾಯಿ? ಯಾವ ಯೋಜನೆ ಗೊತ್ತೇ?


ರೈತರು ಬೆಳೆಸಾಲ ಹೊಂದಿದ್ದರೆ ಅಥವಾ ಬೇರೆಯವರ ಸಾಲಕ್ಕೆ ಜಾಮೀನು ನೀಡಿದ್ದಾರೆ ಎಂಬ ಕಾರಣ ನೀಡಿ ಸಾಲ ನೀಡಲು ಮುಂದಾಗುತ್ತಿಲ್ಲ. ಬ್ಯಾಂಕುಗಳು ಈ ರೀತಿ ರೈತರ ಜೀವನದ ಜೊತೆ ಆಟವಾಡುತ್ತಿರುವುದರಿಂದ ರೈತರು ಬೇಸತ್ತು ಸಾಂಪ್ರದಾಯಿಕ ಕೃಷಿಯತ್ತ ಮತ್ತೆ ಮುಖ ಮಾಡುತ್ತಿದ್ದಾರೆ.
ಬ್ಯಾಂಕುಗಳ ನಿಯಮದಲ್ಲಿ ಏನಿದೆ?: ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ಹಾಗೆ ಉಳಿಸಿಕೊಂಡಿದ್ದರೆ ಅಂತಹ ರೈತರಿಗೆ ಸಾಲ ನೀಡುವ ನಿರ್ಧಾರ ಬ್ಯಾಂಕುಗಳಿಗೆ ಬಿಟ್ಟಿದ್ದಾಗಿದೆ. ಕೇಂದ್ರ ಸರ್ಕಾರ ಹಾಗೂ ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಮಕ್ಕಳ ಶಿಕ್ಷಣ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಐವತ್ತು ಸಾವಿರ ರೂ.ವರೆಗೆ ಸಾಲ ನೀಡಲು ನಿರಾಕರಿಸುವಂತಿಲ್ಲ. ಪಹಣಿ, ಆಧಾರ್ ಸೇರಿದಂತೆ ಸರಳ ದಾಖಲೆಗಳ ಆಧಾರದ ಮೇಲೆ ೧.೬೦ ಲಕ್ಷ ರೂ.ವರೆಗೆ ಸಾಲ ನೀಡಬಹುದು. ಈ ಸಾಲಕ್ಕೆ ಭೋಜಾ ಎಂಟ್ರಿ ಮಾಡುವಂತಿಲ್ಲ. ಹಾಗೆ ಮಾಡಿದ್ದಲ್ಲಿ ಅದು ಅಪರಾಧವಾಗುತ್ತದೆ.
ನಬಾರ್ಡ್ ರೈತ ಉತ್ಪಾದಕರನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ. ಸಮಗ್ರ ಕೃಷಿಯನ್ನು ಪ್ರೋತ್ಸಾಹಿಸಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ಬ್ಯಾಂಕುಗಳು ನಡೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.

Comments are closed.