Winter Food for Men: ಚಳಿಗಾಲದಲ್ಲಿ ಪುರುಷರು ಈ ಆಹಾರಗಳನ್ನು ಸೇವಿಸುವುದರಿಂದ ಏನಾಗುತ್ತೇ ಗೊತ್ತೇ?

Winter Food for Men: ಮಳೆಗಾಲ ಮುಗಿದು ಚಳಿಗಾಲದ ಆಗಮನವಾಗಿದೆ. ವಾತಾವರಣದಲ್ಲಿಯೂ ಹಲವಾರು ಬದಲಾವಣೆಗಳು ಆಗುತ್ತಿವೆ. ಚಳಿಗಾಲದಲ್ಲಿ ಶೀತದ ಪ್ರಮಾಣದ ಅಧಿಕವಾಗಿರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷರು ಚಳಿಗಾಲದಲ್ಲಿ ತಮ್ಮ ಆಹಾರ ಸೇವನಾ ವಿಧಾನದಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು.


ಚಳಿಗಾಲದಲ್ಲಿ ನಿಮ್ಮ ದೇಹದ ಉಷ್ಣಾಂಶವನ್ನು ಸರಿದೂಗಿಸಲು ಬಾದಾಮಿ ತುಂಬಾನೆ ಸಹಾಯ ಮಾಡುತ್ತದೆ. ಪ್ರತಿದಿನ ಎಂಟರಿಂದ ಹತ್ತು ಬಾದಾಮಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸೋಯಾಬೀನ್ನಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶ ಹೇರಳವಾಗಿದೆ. ಪುರುಷರ ಮೂಳೆ ಆರೋಗ್ಯವನ್ನು ಇದು ಕಾಪಾಡುತ್ತದೆ. ಹಾಗಾಗಿ ಇದನ್ನು ಸಹ ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳಿಗೆ ಸಂಬಂಧಿಸಿದ ನೋವಿನಿಂದ ನೀವು ಪಾರಾಗುತ್ತೀರಿ.


ವರ್ಷ ಪೂರ್ತಿ ಸಿಗುವ ತರಕಾರಿಗಳಲ್ಲಿ ಟೊಮ್ಯಾಟೋ ಕೂಡ ಒಂದು. ಇದಿಲ್ಲದೆ ಯಾವುದೇ ಅಡುಗೆ ಆಗಲು ಸಾಧ್ಯವೇ ಇಲ್ಲ. ಈ ಟೊಮ್ಯಾಟೋದಲ್ಲಿ ಪೋಟ್ಯಾಶಿಯಂ, ವಿಟಾಮಿನ್ ಸಿ ಹಾಗೂ ಪೈಬರ್ ಅಂಶಗಳಿವೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ. ಎಲೆಕೋಸು ಬಹಳಷ್ಟು ಜನರಿಗೆ ಇಷ್ಟವಾಗುವುದಿಲ್ಲ. ಎಲೆಕೋಸಿನ ಪದಾರ್ಥ ಮಾಡಿದರೆ ಊಟ ಮಾಡಲು ಬೇಸರ ಮಾಡುತ್ತಾರೆ. ಆದರೆ ಪುರುಷರ ಆರೋಗ್ಯಕ್ಕೆ ಇದು ಬಹಳ ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ಗೆಣಸಿನಲ್ಲಿ ವಿಟಾಮಿನ್ ಎ ಅಂಶ ಹೇರಳವಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ಸುಟ್ಟು ಸಹ ತಿನ್ನಬಹುದು. ಇಲ್ಲದೆ ಬೇರೆ ಬೇರೆ ರೀತಿಯ ಪದಾರ್ಥ ಮಾಡಿಯೂ ಸೇವನೆ ಮಾಡಬಹುದಾಗಿದೆ. ಇದನ್ನೂ ಓದಿ: Kannada Recipe:  ಬಿಸಿ ಬಿಸಿಯಾಗಿ ಹೀಗೊಂದು ಪಾಲಾಕ್ ಕಿಚಡಿ ಮಾಡಿ ನೋಡಿ; ನೀವೇ ಮಾಸ್ಟರ್ ಶೆಫ್ ಎನಿಸಿಕೊಳ್ತೀರಾ!


ಚಳಿಗಾಲದಲ್ಲಿ ವಿಟಾಮಿನ್ ಸಿ ಅಂಶ ದೇಹಕ್ಕೆ ಬಹಳ ಅಗತ್ಯವಾಗಿದೆ. ಕಿವಿಫ್ರೂಟ್ನಲ್ಲಿ ವಿಟಾಮಿನ್ ಸಿ ಅಂಶ ಹೇರಳವಾಗಿರುವುದರಿಂದ ಇದನ್ನು ತಪ್ಪದೆ ಸೇವನೆ ಮಾಡಬೇಕು. ಇದು ರಕ್ತ ಹಾಗೂ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂರ್ಯಕಾಂತಿ ಬೀಜದಲ್ಲಿ ವಿಟಾಮಿನ್ ಇ ಅಂಶವನ್ನು ಹೊಂದಿದೆ. ಇದರಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಸೇವನೆ ಮಾಡಬೇಕು. ಇದನ್ನೂ ಓದಿ: Agriculture Loan:ರೈತರಿಗೆ ಸಾಲ ನೀಡಲು ಬ್ಯಾಂಕ್ ಗಳ ಡ್ರಾಮಾ; ಸರ್ಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು; ರೈತರಿಗೆ ಯಾಕೆ ತಲುಪುತ್ತಿಲ್ಲ ಸರ್ಕಾರಿ ಯೋಜನೆ?

Comments are closed.