Belagavi: ಮತ್ತೊಮ್ಮೆ ಬಾಲ ಬಿಚ್ಚಿದ ಮಹಾರಾಷ್ಟ್ರದ ನಾಯಕರು. ಈ ಬಾರಿ ಮಾಡಿದ ಹೊಸ ಘೋಷಣೆ ಏನು ಗೊತ್ತೇ??

Belagavi: ಬೆಳಗಾವಿಯಲ್ಲಿ ಕನ್ನಡಿಗ (Kannadiga’s) ಹಾಗೂ ಮರಾಠಿಗರ ಮನಸ್ತಾಪ ಜಗಳಗಳು ಹೊಸತೇನು ಅಲ್ಲ. ಇದೀಗ ರಾಜಕಾರಣಿ (Politicians) ಗಳು ಅದಕ್ಕೆ ಹೊಸ ಮೆರುಗು ನೀಡಿದ್ದಾರೆ. ಹೌದು ಕನ್ನಡಿಗರ ಸ್ವಾಭಿಮಾನ ಹಾಗೂ ಅಸ್ಮಿತೆಯನ್ನು ಮಹಾರಾಷ್ಟ್ರ(Maharashtra)ದ ರಾಜಕಾರಣಿಗಳು ಕೆಣಕಿದ್ದಾರೆ ಬೆಳಗಾವಿಯಲ್ಲಿ ಅಧಿವೇಶನ (Session at Belgagavi) ನಡೆದಾಗ ಪ್ರತಿ ಬಾರಿಯೂ ಗಡಿ ವಿಚಾರ (border-dispute)ದ ಬಗ್ಗೆ ಮಾತನಾಡುವುದು ಕೆದುಕುವುದು ಮರಾಠಿಗರ ಕೆಲಸವಾಗಿಬಿಟ್ಟಿದೆ ಇದೀಗ ಕಳೆದ 20 ದಿನಗಳಿಂದ ಕರ್ನಾಟಕ (Karnataka) ಮಹಾರಾಷ್ಟ್ರ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಗಡಿ ಪ್ರಕರಣ ಸುಪ್ರೀಂ ಕೋರ್ಟ್ (Supreme Court)  ನಲ್ಲಿ ಇದ್ದರೂ ಕೂಡ ಉದ್ಭವ ಟಾಕ್ರೆ (Udbhav Thakre) ಸರ್ಕಾರ ಮತ್ತು ಇಂದಿನ ಏಕನಾಥ ಶಿಂದೆ (Ekanath Shinde) ಸರ್ಕಾರ ಮತ್ತೆ ಕನ್ನಡಿಗರನ್ನ ಕೆಣಕುವ ಪ್ರಯತ್ನ ಮಾಡಿವೆ. ಇದನ್ನೂ ಓದಿ: Investment Tips: ನೀವು ಖಚಿತವಾಗಿ ಲಾಭ ಪಡೆಯಬೇಕು ಎಂದರೆ, ನೀವೆಲ್ಲಿ ಹೂಡಿಕೆ ಮಾಡಬೇಕು ಗೊತ್ತೇ?? ಹೊಸ ವರ್ಷದಿಂದನೇ ಹಣ ಗಳಿಸಿ.

ಇಲ್ಲಿ ವಿಶೇಷ ಅಂದ್ರೆ ಎರಡು ರಾಜ್ಯಗಳಲ್ಲಿ ಬಿಜೆಪಿ (BJP) ಆಡಳಿತದಲ್ಲಿದೆ ಕೇಂದ್ರ ಸಚಿವ ಅಮಿತ್ ಶಾ ಎರಡು ರಾಜ್ಯಗಳ ಆರು ಜನರ ಸಮಿತಿಯನ್ನು ರಚಿಸಿ ಸದ್ಯದ ವಿವಾದ ತಣ್ಣಗಾಗಿಸಬೇಕು ಎಂದು ಸೂಚನೆ ನೀಡಿದ್ದರು. ‘ಬೆಳಗಾವಿ ಕರ್ನಾಟಕ ಅಕ್ರಮಿತ ಮಹಾರಾಷ್ಟ್ರ’, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಸೋಮವಾರ ಮಾಜಿ ಸಿಎಂ ಉದ್ಭವ ಠಾಕ್ರೆ ಮತ್ತೆ ಗೌಜೆಬ್ಬಿಸಿದ್ದಾರೆ. ನಿನ್ನೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ತಮ್ಮ ನಿರ್ಣಯವನ್ನು ಕೂಡ ಸಭೆಯಲ್ಲಿ ಮಂಡಿಸಿದ್ದಾರೆ. ಇದನ್ನೂ ಓದಿ:Tirupati Temple: ತಿರುಪತಿ ದರ್ಶನ ಮಾಡಲು ಹೋಗುವವರಿಗೆ ಕಹಿ ಸುದ್ದಿ; ಹೊಸ ವರ್ಷದಲ್ಲಿ ಎಂಟು ತಿಂಗಳು ದೇವಸ್ಥಾನ ಬಂದ್; ಕಾರಣ ಏನು ಗೊತ್ತಾ?

ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದಿದ್ದೇನು?

ಕರ್ನಾಟಕದ ಹಲವು ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದಾಗಿ ನಾಗಪುರ ಅಧಿವೇಶನದಲ್ಲಿ ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕದ ಸುಮಾರು 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಬೆಳಗಾವಿ, ನಿಪ್ಪಾಣಿ, ಭಾಲ್ಕಿ, ಕಾರವಾರ, ಬೀದರ್ ಇವು ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕದಲ್ಲಿ ಮರಾಠಿಕರ ಸಂಖ್ಯೆ ಕಡಿಮೆ ಆಗಬಾರದು. ಗಡಿ ಭಾಗದ ಮರಾಠಿ ಬಾಷೆಕರವಾಗಿ ಸರ್ಕಾರ ಇದೀಗ ದೃಢವಾಗಿ ನಿಂತಿದೆ ಕರ್ನಾಟಕದ ಮರಾಠಿ ಹಳ್ಳಿಗಳ ಒಂದು ಇಂಚು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದೇವೆ. ಕರ್ನಾಟಕ ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡುತ್ತಿದೆ ಎಂದು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಹೇಳಲಾಗಿದೆ. ಮೊನ್ನೆಯಷ್ಟೇ ಬೆಳಗಾವಿ ಮಿನಿ ವಿಧಾನ ಸೌಧದಲ್ಲಿ  ಕರ್ನಾಟಕ ಅಸೆಂಬ್ಲಿಯ ಖಂಡನಾ ನಿರ್ಣಯ ಮಾಡಲಾಗಿತ್ತು. ಇದಕ್ಕೂ ಕ್ಯಾತೆ ತೆಗೆದ ಮಹಾರಾಷ್ಟ್ರ ಅಸೆಂಬ್ಲಿ ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿತ್ತು.

ಮಹಾರಾಷ್ಟ್ರ ಮಾಡಿದ್ದು ಸರಿಯೇ?

ಇಷ್ಟಕ್ಕೂ ಕರ್ನಾಟಕದ ಯಾವೆಲ್ಲ ಹಳ್ಳಿಗಳು ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಿಕೊಂಡಿರಬಹುದು ಆದರೆ ಅದೇ ರೀತಿ ಕರ್ನಾಟಕ ಕೂಡ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಇಷ್ಟಕ್ಕೂ ಇದನ್ನ ಸುಪ್ರೀಂ ಕೋರ್ಟ್ ನಿರ್ಧರಿಸಬೇಕು ಹೊರತು ಅಸೆಂಬಲಿಯಲ್ಲಿ ಮಾತನಾಡಿಕೊಂಡರೆ ಯಾವುದೇ ಪ್ರಯೋಜನ ಇಲ್ಲ. ಇನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ನೋ ವಿಚಾರಣೆ ಇರುವಾಗ ಈ ರೀತಿ ನಿರ್ಣಯ ಅಂಗೀಕಾರ ಮಾಡುವುದು ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.