New Year Offer: ಡಿಸೆಂಬರ್ 31st ಪಾರ್ಟಿ ಮಾಡ್ತೀರಾ? ಹಾಗಾದ್ರೆ ಪೋಲಿಸರಿಂದಲೇ ಸಿಗಲಿದೆ ಬಂಪರ್ ಆಫರ್; ಲಾಟಿ ಏಟಂತೂ ಅಲ್ಲವೇ ಅಲ್ಲ, ಹಾಗಾದ್ರೆ ಏನು ಗೊತ್ತಾ?

New Year Offer: ಹೊಸ ವರ್ಷದಲ್ಲಿ ಯಾವ ಗ್ರಹ ಗತಿಗಳು ಬದಲಾಗುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಪಾರ್ಟಿ ಮಾಡೋರಂತೂ ಹೊಸ ವರ್ಷ(New Year)ಕ್ಕಾಗಿಯೇ ಕಾಯ್ತಾ ಇರ್ತಾರೆ! 2022 ಇನ್ನೇನು ಮುಗಿದು 2023 ಶುರುವಾಗಲಿದೆ. ಅದರಲ್ಲೂ ಈ ಬಾರಿ 30st ವೀಕೆಂಡ್ (Weekend) ಬೇರೆ ಬಂದಿದೆ. ಹಾಗಾಗಿ ಯುವ ಜನತೆ 31 ಮದ್ಯಪಾನ (Drinking)ದ ಜೊತೆಗೆ ವಿಶೇಷವಾಗಿ ಆಚರಿಸಲು ಕಾಯ್ತಾ ಇದೆ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಕೂಡ ಹೊಸ ವರ್ಷ ಅಂದರೆ ತುಂಬಾನೇ ಸ್ಪೆಷಲ್ ಅದರಲ್ಲೂ ನಮ್ಮ ದೇಶದ ಮುಖ್ಯ ನಗರಗಳಲ್ಲಿ ಮಧ್ಯಪಾನ ಮತ್ತರಾಗಿ ಹೊಸ ವರ್ಷವನ್ನು ವೆಲ್ಕಮ್ (Welcome) ಮಾಡುವವರೇ ಹೆಚ್ಚು. ಈ ವರ್ಷ ಮಹಾಕುಡುಕರು ಪಬ್ (Pub) ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಟಿ (Party) ಮಾಡಿ ಕೊನೆಗೆ ಪೊಲೀಸ(Police)ರಿಂದ ಲಾಟಿ ಏಟು ತಿನ್ನುವ ಭಯ ಇಲ್ಲ ಅದರ ಬದಲು ಬೆಂಗಳೂರಿನ ಪೊಲೀಸರು ಹೊಸದೊಂದು ಆಫರ್ ನೀಡುತ್ತಿದ್ದಾರೆ. ಅದೇನ್ ಗೊತ್ತಾ?

ಸಾರ್ವಜನಿಕರ ಸೇಫ್ಟಿಕ್ಕಾಗಿ ಪೋಲಿಸರ ಮಾಸ್ಟರ್ ಪ್ಲ್ಯಾನ್!

ಕುಡಿದ ಮತ್ತಿನಲ್ಲಿ ಬೀದಿಯಲ್ಲಿ ಬಿದ್ದು ಉರುಳಾಡುವುದಕ್ಕಿಂತ ಪೊಲೀಸರ ಆಂಬುಲೆನ್ಸ್ ಹತ್ತುವುದು ಲೇಸು ಎಂದು ನಿಮಗೂ ಅನ್ನಿಸಬಹುದು. ಹೌದು ರಾಜ್ಯದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ಜೊತೆಗೆ ಮಾತನಾಡಿರುವ ಪೊಲೀಸರು ಕುಡುಕರಿಗಾಗಿ ಈ ಆಫರ್ ನೀಡುತ್ತಿದ್ದಾರೆ ಬೆಂಗಳೂರಿನ ಕೆಲವು ಕಡೆ ಆಂಬುಲೆನ್ಸ್ (Ambulance)  ವ್ಯವಸ್ಥೆ ಮಾಡಿದೆ ಖಾಕಿಪಡೆ. ಇದೇನಿದು ಕುಡುಕರಿಗೆ ಆಂಬುಲೆನ್ಸ್ ಕೊಡ್ತಾರಾ ಅಂತ ಆಶ್ಚರ್ಯ ಆಗ್ತಾ ಇರಬಹುದು? ಇದು ಸಾರ್ವಜನಿಕರ ಹಾಗೂ ಕುಡುಕರ ಸೇಫ್ಟಿಗಾಗಿ ಪೊಲೀಸರು ಕೈಗೊಂಡಿರುವ ಮುನ್ನೆಚ್ಚರಿಕ ಕ್ರಮ. ಇದನ್ನೂ ಓದಿ: Cricket News: ರಾಹುಲ್ ವಿರುದ್ಧ ಟೀಕೆ ಮಾಡಿದ ನಂತರ ಸಂಜು ಸಾಮ್ಸನ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ವಾಸಿಂ; ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಾ?

ಹೌದು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬಿದ್ದು ಒದ್ದಾಡುವುದಕ್ಕಿಂತ ಪೊಲೀಸರು ನೀಡುವ ಆಂಬುಲೆನ್ಸ್ ಅನ್ನು ಬಳಸಿ ಮನೆಗೆ ಸೇಫ್ ಆಗಿ ತಲುಪುವುದು ಲೇಸು. ಇನ್ನು ಈಗಾಗಲೇ ಆಗ್ನೆಯ ವಿಭಾಗದಲ್ಲಿ 108 ಪಬ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪೊಲೀಸರು ಫುಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಎಚ್ಎಸ್ಆರ್ ಲೇಔಟ್ ಮೊದಲಾದ ಕಡೆ ಸಂಪೂರ್ಣ ಭದ್ರತೆಗೆ ಖಾಕಿ ಪಡೆ ಪ್ಲಾನ್ ಮಾಡಿದೆ. ಇದನ್ನೂ ಓದಿ: Kannada Astrology: ನಾಲ್ಕು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಎಂತಹ ರಾಜಯೋಗ ಒಲಿದು ಬರಲಿದೆ ಗೊತ್ತೇ? ಆದರೂ ಈ ಕೆಲಸವನ್ನು ಮಾತ್ರ ಮಾಡಬಾರದು ಯಾವುದು?

ಹೊಸ ವರ್ಷವನ್ನು ವೆಲ್ಕಮ್ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಜನ ಮದ್ಯಪಾನ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ಹಾನ್ವಿ ಮಾಡಿರುವ ದಾಖಲೆಗಳು ಇವೆ ಹಾಗಾಗಿ ಈ ಬಾರಿ ಪೊಲೀಸರು ಸಿಕ್ಕಾಪಟ್ಟೆ ಮುಂಜಾಗೃತಿ ವಹಿಸಿದ್ದಾರೆ. ಇನ್ನು ಪಾಪ ಹಾಗೂ ರೆಸ್ಟೋರೆಂಟ್ಗಳಿಗೆ ಎಂಟರಿ ಆಗುವ ಮೊದಲು ನಿಮ್ಮ ಹೆಸರು ಪೊಲೀಸ್ ರೆಕಾರ್ಡಿನಲ್ಲಿ ದಾಖಲಾಗುತ್ತೆ. ನೀವು ಹೋಗುವ ಪಬ್ ಅಥವಾ ರೆಸ್ಟೋರೆಂಟ್ ಗಳಲ್ಲಿ ಸಿಸಿ ಕ್ಯಾಮರಾ ವರ್ಕ್ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಡಿಸಿಪಿ ಡ್ರೆಸ್ ಕೋಡ್ ಬಳಸಿ ಕೈಯಲ್ಲಿ ಕ್ಯಾಮೆರಾ ಹಿಡಿದು ನಿಂತಿರುವ ಪೊಲೀಸ್ ಸಿಬ್ಬಂದಿಗೆ ಮಾತ್ರ ನೀವು ಮಾಸ್ಕ್ ಧರಿಸಿದ್ದರು ಅದನ್ನ ತೆಗೆದು ಪೋಸ್ ನೀಡಬೇಕು. ನಿಮ್ಮ ಸುಂದರವಾದ ಫೋಟೋ ಪೊಲೀಸ್ ಕ್ಯಾಮೆರಾದಲ್ಲಿ ರೆಕಾರ್ಡ್ ಆದ್ಮೇಲೆ ನಿಮಗೆ ರೆಸ್ಟೋರೆಂಟ್ ಗೆ ಎಂಟ್ರಿ ಹೇಗಿದೆ ಖಾಕಿ ಪಡೆಯ ಹೊಸ ಪ್ಲಾನ್?

ಇಷ್ಟೊಂದು ಮುತುವರ್ಜಿ ಯಾಕೆ ವಹಿಸಿದ್ದಾರೆ ಪೊಲೀಸರು ಅಂತ ನಿಮಗೆ ಅನಿಸಬಹುದು ವರ್ಷಾಚರಣೆಯ ಹೆಸರಿನಲ್ಲಿ ಅಹಿತಕರ ಘಟನೆ, ಅಸಭ್ಯ ವರ್ತನೆ, ಕಳ್ಳತನ ಹೀಗೆ ಕೃತ್ಯ ನಡೆಯಬಾರದು ಎನ್ನುವ ಸಲುವಾಗಿ ಈ ಹೊಸ ಯೋಜನೆ ರೂಪಿಸಲಾಗಿದೆ ಯಾವುದೇ ಪಬ್ ಗೆ ಎಂಟ್ರಿ ಆಗುವ ಪ್ರತಿಯೊಬ್ಬ ಫೋಟೋ ಹಾಗೂ ಡೀಟೇಲ್ಸ್ ಪೊಲೀಸ್ ಲೀಸ್ಟ್ ನಲ್ಲಿ ಇರುತ್ತೆ ಹಾಗಾಗಿ ಯಾವುದೇ ತಪ್ಪು ಮಾಡುವ ಮುನ್ನ ಜನ ಯೋಚಿಸಲೇಬೇಕು? ಹೇಗಿದೆ ರಾಜ್ಯದ ಪೊಲೀಸ್ ಪಡೆಯ ಮಾಸ್ಟರ್ ಪ್ಲಾನ್?

Comments are closed.