K.L Rahul Marriage: ಬೇರೆಯವರು ಕೋಟಿ ಕೋಟಿ ಗಿಫ್ಟ್ ಕೊಡುತ್ತಿರುವಾಗ, ಮಾವ ಸುನಿಲ್ ಶೆಟ್ಟಿ, ರಾಹುಲ್ ಗೆ ಕೊಟ್ಟ ಗಿಫ್ಟ್ ಏನು ಗೊತ್ತೇ?? ತಿಳಿದರೆ ಇಂತ ಮಾವನೇ ಬೇಕು ಅಂತೀರಾ!

K.L Rahul Marriage: ಭಾರತವು ಸಂಪ್ರದಾಯದ್ದವಾದ ದೇಶವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಮಗಳ ಮದುವೆ ಸಂದರ್ಭದಲ್ಲಿ ಅವಳಿಗೆ ಮುಂದಿನ ಜೀವನಕ್ಕೆ ಕಷ್ಟ ಆಗಬಾರದು. ಮಗಳು ಸಂತೋಷದಿಂದ ಗಂಡನ ಜೊತೆ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಅವರ ಪಾಲಕರು ಉಡಗೊರೆ ನೀಡುತ್ತಾರೆ. ಬಡವರು ಸಣ್ಣ ಪುಟ್ಟ ಉಡುಗೊರೆ ನೀಡಿದರೆ, ಶ್ರೀಮಂತರು ದೊಡ್ಡ ದೊಡ್ಡ ಉಡುಗೊರೆ ನೀಡುವ ಮೂಲಕ ಸುದ್ದಿಯಾಗುತ್ತಾರೆ. ಹೀಗೆ ತನ್ನ ಮಗಳಿಗೆ ಭರ್ಜರಿ ಉಡುಗೊರೆ ನೀಡುವ ಮೂಲಕ ನಟ ಸುನೀಲ್ ಶೆಟ್ಟಿ ಸುದ್ದಿಯಲ್ಲಿದ್ದಾರೆ.

ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರ ವಿವಾಹವು ಇತ್ತಿಚೆಗೆ ಖಂಡಾಲಾದಲ್ಲಿ ವಿಜೃಂಭಣೆಯಿಂದ ನೆರವೇರಿದೆ.ಈ ಮದುವೆಗೆ ಬಾಲಿವುಡ್ ನಟರು, ನಿರ್ದೇಶಕರು, ನಿರ್ಮಾಪಕರು, ನಟಿಯರು, ಕ್ರಿಕೆಟ್ ಲೋಕದ ದಿಗ್ಗಜರು, ರಾಜಕಾರಣಿಗಳು ಆಗಮಿಸಿ ನೂತನ ವದು -ವರರನ್ನು ಹಾರೈಸಿದ್ದಾರೆ. ಇಷ್ಟೇ ಅಲ್ಲದೆ ಈ ಮದುವೆ ಸುದ್ದಿ ಮಾಡಲು ಬಂದಂತಹ ಪತ್ರಕರ್ತರಿಗೂ ಸುನೀಲ್ ಶೆಟ್ಟಿ ಅವರು ಉಡುಗೊರೆ ನೀಡುವ ಮೂಲಕ ತಮ್ಮ ಹೃದಯಶ್ರೀಮಂತಿಕೆ ಮೆರೆದಿದ್ದಾರೆ. ಇದನ್ನೂ ಓದಿ: Kannada Serial: ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ಪಾತ್ರ ನೋಡಿದ ಜನರು ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?

ಇದೀಗ ಆಥಿಯಾ ಶೆಟ್ಟಿ ಕೆ.ಎಲ್. ರಾಹುಲ್ ದಂಪತಿಗೆ ಯಾರ್ಯಾರು ಯಾವ ಯಾವ ಉಡುಗೊರೆ ನೀಡಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಮೂಲಗಳ ಪ್ರಕಾರ ಈ ದಂಪತಿಗೆ ದೊಡ್ಡ ದೊಡ್ಡ ಉಡುಗೊರೆಗಳೇ ದೊರೆತಿವೆ ಎನ್ನಲಾಗುತ್ತಿದೆ. ಕ್ರಿಕೆಟ್, ಸಿನೆಮಾ ಎರಡು ಕ್ಷೇತ್ರಗಳಿಂದ ಐಶಾರಾಮಿ ಉಡುಗೊರೆಗಳೆ ದೊರೆತಿವೆಯಂತೆ. ಅದರಲ್ಲೂ ಮಾವ ಸುನೀಲ್ ಶೆಟ್ಟಿ ಅವರು ೫೦ ಕೋಟಿ ರೂ.ನ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ೧.೫ ಕೋಟಿ ರೂ.ನ ಆಡಿ ಕಾರು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ವರ್ಷ ಆದ್ಮೇಲೆ ವಾಪಾಸ್ ಬಂದ ಜಡೆದ, ರಣಜಿ ಪಂದ್ಯದಲ್ಲಿಯೇ ದೊಡ್ಡದಾಗಿ ಆಸ್ಟ್ರೇಲಿಯಾಗೆ ಸಿಗ್ನಲ್ ಕೊಟ್ಟಿದ್ದು ಹೇಗಿತ್ತು ಗೊತ್ತೇ?

ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ ದೋನಿ ಅವರು ೮೦ ಲಕ್ಷ ರೂ.ನ ಕೌವಾಸಕಿ ಬೈಕ್ ನೀಡಿದ್ದಾರೆ. ಜಾಕಿ ಶ್ರಾಫ್ ಹಾಗೂ ಅರ್ಜುನ್ ಕಪೂರ್ ದುಬಾರಿ ವಾಚ್ ಹಾಗೂ ಬ್ರೇಸ್ ಲೈಟ್ ನೀಡಿದ್ದಾರೆ. ವಿರಾಟ್ ಕೊಹ್ಲಿ ದಂಪತಿ ೨.೭ ಕೋಟಿ ರೂ. ಮೌಲ್ಯದ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ನೂತನ ದಂಪತಿಗೆ ಐಶಾರಾಮಿ ಉಡುಗೊರೆಗಳು ಹರಿದು ಬಂದಿವೆ ಎಂದು ತಿಳಿದಿದೆ,

Comments are closed.